ಟೆನಿಸ್ ದೊರೆ ಫೆಡರರ್ ವಿರುದ್ಧ ಭಾರತದ ಸುಮಿತ್
Team Udayavani, Aug 25, 2019, 5:12 AM IST
ನ್ಯೂಯಾರ್ಕ್: ಭಾರತದ 22ರ ಹರೆಯದ ಯುವ ಟೆನಿಸಿಗ ಸುಮಿತ್ ನಾಗಲ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಲ್ಲಿ “ಕನಸಿನ ಪದಾರ್ಪಣೆ’ಯ ಖುಷಿಯಲ್ಲಿದ್ದಾರೆ. ಯುಎಸ್ ಓಪನ್ ಅರ್ಹತಾ ಸುತ್ತು ದಾಟಿ ಬಂದ ನಾಗಲ್, ಸೋಮವಾರ ಪ್ರಧಾನ ಸುತ್ತಿನ ಮೊದಲ ಪಂದ್ಯ ಆಡಲಿದ್ದಾರೆ. ಇಲ್ಲಿ ಅವರು “ಟೆನಿಸ್ ದೇವರು’ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ ಎಂಬುದು ಈ ಹೊತ್ತಿನ ಕುತೂಹಲ!
ಭಾರತದ ಮತ್ತೋರ್ವ ಭರವಸೆಯ ಆಟಗಾರ ಪ್ರಜ್ಞೆàಶ್ ಗುಣೇಶ್ವರನ್ ಕೂಡ ಯುಎಸ್ ಓಪನ್ ಪ್ರಧಾನ ಸುತ್ತಿಗೆ ನೆಗೆದಿದ್ದು, ಇಲ್ಲಿ ರಶ್ಯದ ಇನ್‌ಫಾರ್ಮ್ ಆಟಗಾರ ಡ್ಯಾನಿಲ್ ಮೆಡ್ವಡೇವ್ ವಿರುದ್ಧ ಸೆಣಸಲಿದ್ದಾರೆ.
ಇದರೊಂದಿಗೆ 1998ರ ಬಳಿಕ ಭಾರತದ ಇಬ್ಬರು ಆಟಗಾರರು ಗ್ರ್ಯಾನ್‌ಸ್ಲಾಮ್ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಂತಾಯಿತು. ಅಂದಿನ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಆಡಿದ್ದರು.
“ಟೆನಿಸ್ ಗಾಡ್’ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಬ್ರಝಿಲ್‌ನ ಜೊ ಮಿನೆಜಸ್ ವಿರುದ್ಧ ಕೊನೆಯ ಸುತ್ತಿನಲ್ಲಿ ಸೆಣಸುತ್ತಿರುವಾಗ, ತಾನಿಲ್ಲಿ ಗೆದ್ದರೆ 20 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ, “ಗ್ಲೋಬಲ್ ಸೂಪರ್‌ಸ್ಟಾರ್’ ರೋಜರ್ ಫೆಡರರ್ ಅವರನ್ನು ಎದುರಿಸುವ ಬಗ್ಗೆ ಸುಮಿತ್ ನಾಗಲ್ ಬಹುಶಃ ಕಲ್ಪಿಸಿಯೂ ಇರಲಿಕ್ಕಿಲ್ಲ. ಆದರೀಗ “ಟೆನಿಸ್ ಗಾಡ್’ ವಿರುದ್ಧ ಆಡುವ ಕನಸು ನನಸಾಗುವ ಮಹಾ ಸಂಭ್ರಮದಲ್ಲಿದ್ದಾರೆ ನಾಗಲ್!
ಮಿನೆಜಸ್ ವಿರುದ್ಧ 5-7 ಅಂತರದಿಂದ ಮೊದಲ ಸೆಟ್ ಕಳೆದುಕೊಂಡ ನಾಗಲ್, ಉಳಿದೆರಡು ಸೆಟ್‌ಗಳನ್ನು 6-4, 6-3ರಿಂದ ಗೆದ್ದು ಪ್ರಧಾನ ಸುತ್ತಿಗೆ ನೆಗೆದರು. ಇದರೊಂದಿಗೆ ಈ ದಶಕದಲ್ಲಿ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಸ್ಪರ್ಧೆಯ ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಭಾರತದ 5ನೇ ಟೆನಿಸಿಗನೆನಿಸಿದರು. ಉಳಿದವರೆಂದರೆ ಸೋಮ್‌ದೇವ್ ದೇವ್‌ವರ್ಮನ್, ಯುಕಿ ಭಾಂಬ್ರಿ, ಸಾಕೇತ ಮೈನೇನಿ, ಪ್ರಜ್ಞೆàಶ್ ಗುಣೇಶ್ವರನ್.
ವಿಶ್ವ ರ್‍ಯಾಂಕಿಂಗ್‌ನಲ್ಲಿ 190ನೇ ಸ್ಥಾನದಲ್ಲಿರುವ ಸುಮಿತ್ ನಾಗಲ್ ಜೂನಿಯರ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಭಾರತದ 6ನೇ ಟೆನಿಸಿಗನೂ ಆಗಿದ್ದಾರೆ. 2015ರ ವಿಂಬಲ್ಡನ್ ಬಾಲಕರ ಡಬಲ್ಸ್ ನಲ್ಲಿ ಅವರು ವಿಯೆಟ್ನಾಮ್‌ನ ನಾಮ್ ಹಾಂಗ್‌ಲಿ ಜತೆಗೂಡಿ ಪ್ರಶಸ್ತಿ ಜಯಿಸಿದ್ದರು. ಹರ್ಯಾಣದ ಜಜ್ಜರ್‌ನವರಾದ ಸುಮಿತ್ ನಾಗಲ್, 2017ರಲ್ಲಿ ಬೆಂಗಳೂರಿನಲ್ಲಿ ಚಾಲೆಂಜರ್ ಪ್ರಶಸ್ತಿ ಗೆದ್ದ ಬಳಿಕ ಯಾವುದೇ ಮಹತ್ತರ ಸಾಧನೆಗೈದಿಲ್ಲ.
ಪಂದ್ಯದ ಸಮಯ
ನಾಗಲ್-ಫೆಡರರ್ ನಡುವಿನ ಪಂದ್ಯ ಭಾರತೀಯ ಕಾಲಮಾನದಂತೆ ಮಂಗಳವಾರ ಬೆಳಗ್ಗೆ 5.45ಕ್ಕೆ, ಪ್ರಜ್ಞೆàಶ್-ಮೆಡ್ವಡೇವ್ ಪಂದ್ಯ ಸೋಮವಾರ ರಾತ್ರಿ 9.45ಕ್ಕೆ ಆರಂಭವಾಗಲಿದೆ. ಆದರೆ ಇದು ಅಧಿಕೃತ ಸಮಯವಲ್ಲ. ಇದಕ್ಕೂ ಮೊದಲಿನ ಪಂದ್ಯಗಳು ವಿಳಂಬಗೊಂಡರೆ ಈ ಸ್ಪರ್ಧೆಗಳೂ ತಡವಾಗಿ ಆರಂಭವಾಗಲಿವೆ.
ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ಟೆನಿಸ್ ಸ್ಟಾರ್ ರೋಜರ್ ಫೆಡರರ್ ಅವರನ್ನು ಎದುರಿಸುವುದೇ ಒಂದು ಮಹಾನ್ ಅವಕಾಶ. ಅವರು ಟೆನಿಸ್‌ನ ದೇವರು. ನಾನೀಗ ಸೂಪರ್ ಹ್ಯಾಪ್ಪಿ. ಈ ಸ್ಪರ್ಧೆಯನ್ನು ಭಾರೀ ಕುತೂಹಲದಿಂದ ಎದುರು
ನೋಡುತ್ತಿದ್ದೇನೆ.
-ಸುಮಿತ್ ನಾಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.