ತಟಸ್ಥ ಕೇಂದ್ರದಲ್ಲಿ ಭಾರತ-ಪಾಕ್ ಟೆನಿಸ್: ಎಐಟಿಎ ಮನವಿ ಸಾಧ್ಯತೆ
Team Udayavani, Aug 9, 2019, 9:12 AM IST
ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿರುವ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿ ಯನ್ನು ತಟಸ್ಥ ಕೇಂದ್ರದಲ್ಲಿ ಆಡಿಸುವಂತೆ ಭಾರತೀಯ ಟೆನಿಸ್ ಅಸೋಸಿಯೇಶನ್ (ಎಐಟಿಎ) ವಿಶ್ವ ಟೆನಿಸ್ ಒಕ್ಕೂಟಕ್ಕೆ (ಐಟಿಎಫ್) ಮನವಿ ಮಾಡುವ ಸಾಧ್ಯತೆ ಇದೆ. ಕಾಶ್ಮೀರದ ಇತ್ತೀಚಿನ ಬೆಳವಣಿಗೆಯಿಂದ ಹೆಚ್ಚಿದ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯೇ ಇದಕ್ಕೆ ಕಾರಣ.
“ಕಾಶ್ಮೀರ ಬೆಳವಣಿಗೆ ಈ ಪಂದ್ಯಾವಳಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ. ಆದರೆ ಕೂಡಲೇ ಯಾವುದೇ ನಿರ್ಧಾರಕ್ಕೆ ಬರಲಾಗದು. ಕೆಲವು ದಿನ ಕಾದು ನೋಡಬೇಕಾಗುತ್ತದೆ. ಬಳಿಕ ನಾವು ಪರಿಸ್ಥಿತಿಯನ್ನು ವಿಶ್ವ ಟೆನಿಸ್ ಒಕ್ಕೂಟಕ್ಕೆ ಮನವರಿಕೆ ಮಾಡಬೇಕಿದೆ. ಅಗತ್ಯ ಬಿದ್ದರೆ ತಟಸ್ಥ ಕೇಂದ್ರದಲ್ಲಿ ಇದನ್ನು ನಡೆಸುವಂತೆ ಐಟಿಎಫ್ಗೆ ಮನವಿ ಮಾಡಲಿದ್ದೇವೆ’ ಎಂದು ಎಐಟಿಎ ಕಾರ್ಯದರ್ಶಿ ಹಿರಣೊಯ್ ಚಟರ್ಜಿ ಹೇಳಿದ್ದಾರೆ.
ಕೇಂದ್ರದ ನಿರ್ಧಾರವೂ ಮುಖ್ಯ
“ಎರಡು ದೇಶಗಳ ಟೆನಿಸ್ ಸಂಸ್ಥೆಗಳ ನಡುವೆ ಸೌಹಾರ್ದ ವಾತಾವರಣವಿದೆ. ಆದರೆ ಸಮಸ್ಯೆ ಇರುವುದು ಎರಡು ದೇಶ ಗಳ ನಡುವಿನದ್ದು. ಹೀಗಾಗಿ ಕೇಂದ್ರ ಸರಕಾರದ ನಿರ್ಧಾ ರವೂ ನಮಗೆ ಮುಖ್ಯವಾಗುತ್ತದೆ. ಫಲಿತಾಂಶಕ್ಕಿಂತ ನಮಗೆ ಆಟಗಾ ರರ ಸುರಕ್ಷತೆ ಮುಖ್ಯ’ ಎಂಬುದಾಗಿ ಚಟರ್ಜಿ ಹೇಳಿದ್ದಾರೆ.
ಆಡದಿದ್ದರೆ ದಂಡ, ಹಿಂಭಡ್ತಿ
“ಇಲ್ಲಿ ವೀಸಾ ಸಮಸ್ಯೆಯೂ ಇದೆ. ಅವರು ವೀಸಾ ನೀಡದೇ ಹೋದರೆ ನಾವು ಪಾಕಿಸ್ಥಾನಕ್ಕೆ ತೆರಳುವ ಪ್ರಶ್ನೆಯೇ ಇಲ್ಲ. ಪಾಕಿಸ್ಥಾನ ಈಗಾಗಲೇ ಸಾಕಷ್ಟು ಪಂದ್ಯಾವಳಿಗಳನ್ನು ತಟಸ್ಥ ತಾಣಗಳಲ್ಲಿ ಆಡಿದೆ. ಆದರೆ ನಾವು ಪಾಕಿಗೆ ಹೋಗುವುದೇ ಇಲ್ಲ ಎಂದು ಹೇಳಿ ತಂಡವನ್ನು ದಂಡನೆಗೊಳಪಡಿಸಲು ಬಯಸುವುದಿಲ್ಲ. ಅಲ್ಲಿನ ಭದ್ರತಾ ವ್ಯವಸ್ಥೆ ಏನಿದ್ದರೂ ವಿಶ್ವ ಟೆನಿಸ್ ಒಕ್ಕೂಟದ್ದು. ಹೀಗಾಗಿ ಅದು ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ಚಟರ್ಜಿ ಹೇಳಿದರು.
2017ರಲ್ಲಿ ಹಾಂಕಾಂಗ್ ತಂಡ ಪಾಕಿಸ್ಥಾನದಲ್ಲಿ ಗ್ರೂಪ್ 2 ಸೆಮಿಫೈನಲ್ ಆಡಲು ನಿರಾಕರಿಸಿದ್ದಕ್ಕೆ ಐಟಿಎಫ್ 10 ಸಾವಿರ ಡಾಲರ್ ದಂಡ ವಿಧಿಸುವ ಜತೆಗೆ, ತಂಡವನ್ನು ಏಶ್ಯ/ಓಶಿಯಾನದ ಕೆಳಮಟ್ಟದ ಗುಂಪಿಗೆ ಹಿಂಭಡ್ತಿ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.