ಇಂಡೋನೇಷ್ಯಾ ಸೂಪರ್ ಸೀರಿಸ್: “ಥಾಮಸ್ ಕಪ್’ ಸ್ಫೂರ್ತಿಯಲ್ಲಿ ಭಾರತ
Team Udayavani, Jun 7, 2022, 6:50 AM IST
ಜಕಾರ್ತಾ: ಇಂಡೋನೇ ಷ್ಯಾವನ್ನೇ ಮಣಿಸಿ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಸ್ಫೂರ್ತಿಯಲ್ಲಿರುವ ಭಾರತ, “ಇಂಡೋ ನೇಷ್ಯಾ ಸೂಪರ್ ಸೀರಿಸ್’ನಲ್ಲೂ ಉತ್ತಮ ಮಟ್ಟದ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.
ಮುಂಬರುವ ಕಾಮ ನ್ವೆಲ್ತ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತೀಯರಿಗೆ ಇದು ಮಹತ್ವದ ಟೂರ್ನಿ ಆಗಿದೆ.
ಮಂಗಳವಾರ ಆರಂಭವಾಗಲಿರುವ ಈ ಕೂಟದ ಡ್ರಾ ಪ್ರಕಟಗೊಂಡಿದ್ದು, ಥಾಮಸ್ ಕಪ್ ಗೆಲುವಿನ ಹೀರೋ ಗಳಾದ ಲಕ್ಷ್ಯ ಸೇನ್ ಮತ್ತು ಎಚ್.ಎಸ್. ಪ್ರಣಯ್ ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
ವಿಶ್ವದ 9ನೇ ರ್ಯಾಂಕಿಂಗ್ ಆಟಗಾರ ಲಕ್ಷ್ಯ ಸೇನ್ ಇಲ್ಲಿ 7ನೇ ಶ್ರೇಯಾಂಕ ಹೊಂದಿದ್ದು, ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್ನ ಹಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ಅವರನ್ನು ಎದುರಿಸಲಿದ್ದಾರೆ.
ಆದರೆ ಇವರೆದುರು ಆಡಿದ ಎರಡೂ ಪಂದ್ಯಗಳಲ್ಲಿ ಸೇನ್ ಸೋಲನುಭವಿಸಿದ್ದು, ಗೆಲುವಿನ ಖಾತೆ ತೆರೆಯಲು ಇದೊಂದು ಉತ್ತಮ ಅವಕಾಶವಾಗಿದೆ.
ಪ್ರಣಯ್ ಡೆನ್ಮಾರ್ಕ್ನ ರಾಸ್ಮಸ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಥಾಮಸ್ ಕಪ್ ಗೆಲುವಿನ ಹಾದಿಯಲ್ಲಿ ಇವರಿಬ್ಬರು ಮಾಡು-ಮಡಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. ಇದರಲ್ಲಿ ಪ್ರಣಯ್ ಗೆದ್ದು ಬಂದಿದ್ದರು.
ಥಾಮಸ್ ಕಪ್ ಗೆಲುವಿನ ಮತ್ತೋರ್ವ ಹೀರೋ ಕೆ. ಶ್ರೀಕಾಂತ್ ಈ ಕೂಟದಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಪಿ. ಕಶ್ಯಪ್ ಮತ್ತು ಸಮೀರ್ ವರ್ಮ ಮೇಲೆ ನಿರೀಕ್ಷೆ ಹೆಚ್ಚಿದೆ.
ವನಿತಾ ವಿಭಾಗ
ವನಿತಾ ವಿಭಾಗದಲ್ಲಿ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಮೇಲೆ ಭಾರತ ನಿರೀಕ್ಷೆ ಇರಿಸಿದೆ. ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್ನ ಲಿನೆ ಕ್ರಿಸ್ಟೋ ಫರ್ಸನ್ ಅವರನ್ನು ಎದುರಿಸಲಿದ್ದಾರೆ. ಉಬೆರ್ ಕಪ್ನಿಂದ ದೂರ ಉಳಿದಿದ್ದ ಸೈನಾ ನೆಹ್ವಾಲ್ ಅವರ ಎದುರಾಳಿಡೆನ್ಮಾರ್ಕ್ನ ಲಿನೆ ಹೋಜ್ಮಾರ್ಕ್ ಜಾರ್ಸ್ಫೆಲ್ಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.