INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
ನನ್ನ ಬಗ್ಗೆ ಹೊರಗಿನ ಯಾರೂ ನಿರ್ಧರಿಸಲು ಸಾಧ್ಯವಿಲ್ಲ…
Team Udayavani, Jan 4, 2025, 8:59 AM IST
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಸರಣಿ ಸಾಗುತ್ತಿದ್ದಂತೆ ಭಾರತ ತಂಡದೊಳಗಿನ ಆಂತರಿಕ ಸಂಘರ್ಷ ಹೆಚ್ಚಾಗಿದೆ ಎಂದು ವರದಿಯಾಗುತ್ತಿದೆ. ಈ ನಡುವೆ ಕಳಪೆ ಫಾರ್ಮ್ ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಅವರು ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ಜಸ್ಪ್ರೀತ್ ಬುಮ್ರಾ ಅವರು ನಾಯಕತ್ವ ವಹಿಸಿಕೊಂಡಿದ್ದಾರೆ. ಮೆಲ್ಬರ್ನ್ ಪಂದ್ಯವೇ ರೋಹಿತ್ ಅವರ ಅಂತಿಮ ಪಂದ್ಯವಾಗಿರಲಿದೆ ಎಂದು ವರದಿಯಾಗುತ್ತಿರುವ ಮಧ್ಯೆ ಈ ಅಂತೆಕಂತೆಗಳಿಗೆ ಸ್ವತಃ ರೋಹಿತ್ ಉತ್ತರ ನೀಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಐದು ಇನ್ನಿಂಗ್ಸ್ ಗಳಲ್ಲಿ ಅವರು ಗಳಿಸಿದ್ದು ಕೇವಲ 31 ರನ್‌ಗಳು. ಅಲ್ಲದೆ ನಾಯಕನಾಗಿಯೂ ವೈಫಲ್ಯ ಕಾಣುತ್ತಿರುವ ರೋಹಿತ್ ಸಿಡ್ನಿಯಲ್ಲಿ ಆಡಲು ಇಳಿದಿಲ್ಲ.
ಶನಿವಾರ (ಜ.04) ಭೋಜನ ವಿರಾಮದ ವೇಳೆ ನೇರಪ್ರಸಾರಕರೊಂದಿಗೆ ರೋಹಿತ್ ಮಾತಿಗಿಳಿದಿದ್ದಾರೆ. ಈ ವೇಳೆ ತನ್ನ ನಿವೃತ್ತಿ ಸುದ್ದಿಗೆ ಸ್ಪಷ್ಟತೆ ನೀಡಿದ್ದಾರೆ.
“ನಾನು ಕೋಚ್ ಮತ್ತು ಆಯ್ಕೆದಾರರೊಂದಿಗೆ ನಡೆಸಿದ ಮಾತುಕತೆ ತುಂಬಾ ಸರಳವಾಗಿತ್ತು. ನಾನು ಬ್ಯಾಟ್‌ನಿಂದ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಾನು ಫಾರ್ಮ್‌ನಲ್ಲಿಲ್ಲ. ಇದು ಪ್ರಮುಖ ಪಂದ್ಯ, ನಾವು ನಮಗೆ ಗೆಲುವಿನ ಅಗತ್ಯವಿತ್ತು. ಅನೇಕ ಆಟಗಾರರು ನನ್ನ ನಿರ್ಧಾರವನ್ನು ಬೆಂಬಲಿಸಲಿಲ್ಲ. ನನಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು” ಎಂದು ರೋಹಿತ್ ಹೇಳಿದ್ದಾರೆ.
“ಈ ಆಲೋಚನೆ ಪ್ರಕ್ರಿಯೆಯು ಸ್ವಲ್ಪ ಸಮಯದಿಂದ ನಡೆಯುತ್ತಿತ್ತು. ಇಲ್ಲಿಗೆ (ಸಿಡ್ನಿ) ಬಂದ ನಂತರ ನಿರ್ಧಾರ ತೆಗೆದುಕೊಂಡೆ. ಮೆಲ್ಬೋರ್ನ್ ನಂತರ ಹೊಸ ವರ್ಷದ ದಿನವಿತ್ತು. ಅಂದು ನಾನು ಈ ಬಗ್ಗೆ ಕೋಚ್ ಮತ್ತು ಆಯ್ಕೆದಾರರಿಗೆ ಹೇಳಲು ಬಯಸಲಿಲ್ಲ. ನಾನು ಪ್ರಯತ್ನಿಸುತ್ತಿದ್ದರೂ ರನ್ ಮಾಡಲಾಗುತ್ತಿರಲಿಲ್ಲ. ಹೀಗಾಗಿ ಈ ಪಂದ್ಯದಿಂದ ಹೊರಗುಳಿಯುವುದು ನನಗೆ ಮುಖ್ಯವಾಗಿತ್ತು” ಎಂದರು.
ನಿವೃತ್ತಿ ಸುದ್ದಿಯ ಬಗ್ಗೆ ಮಾತನಾಡಿದ ರೋಹಿತ್, “ಐದು ತಿಂಗಳ ನಂತರ ಏನಾಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಪ್ರಸ್ತುತದತ್ತ ಗಮನ ಹರಿಸಲು ಬಯಸುತ್ತೇನೆ. ಈ ನಿರ್ಧಾರ ನಿವೃತ್ತಿಯ ನಿರ್ಧಾರವಲ್ಲ. ನಾನು ಆಟದಿಂದ ದೂರ ಸರಿಯಲು ಹೋಗುತ್ತಿಲ್ಲ. ಆದರೆ, ಈ ಪಂದ್ಯದಿಂದ ಮಾತ್ರ ನಾನು ಹೊರಗಿದ್ದೇನೆ, ಏಕೆಂದರೆ ನಾನು ನಾನು ಬ್ಯಾಟ್ ನಿಂದ ಸ್ಕೋರ್ ಮಾಡುತ್ತಿಲ್ಲ. ಆದರೆ ಐದು ತಿಂಗಳ ನಂತರ ನಾನು ರನ್ ಗಳಿಸುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಪ್ರತಿದಿನ ಜೀವನ ಬದಲಾಗುತ್ತದೆ. ನನ್ನ ಮೇಲೆ ನನಗೆ ನಂಬಿಕೆ ಇದೆ,’’ ಎಂದು ಹೇಳಿದರು.
“ಅದೇ ಸಮಯದಲ್ಲಿ ನಾನು ವಾಸ್ತವದಲ್ಲಿ ನಂಬಿಕೆ ಇರಿಸಿದ್ದೇನೆ. ನಾನು ಇಷ್ಟು ದಿನ ಈ ಆಟವನ್ನು ಆಡಿದ್ದೇನೆ. ನಾನು ಯಾವಾಗ ಹೋಗಬೇಕು, ಅಥವಾ ಹೊರಗೆ ಕುಳಿತುಕೊಳ್ಳಬೇಕು ಅಥವಾ ತಂಡವನ್ನು ಮುನ್ನಡೆಸಬೇಕು ಎಂದು ಹೊರಗಿನ ಯಾರೂ ನಿರ್ಧರಿಸಲು ಸಾಧ್ಯವಿಲ್ಲ. ನಾನೂ ಪ್ರಬುದ್ಧನೆ, ಎರಡು ಮಕ್ಕಳ ತಂದೆ. ಜೀವನದಲ್ಲಿ ನನಗೆ ಏನು ಬೇಕು ಎಂದು ನನಗೆ ತಿಳಿದಿದೆ” ಎಂದು ರೋಹಿತ್ ಟೀಕಾಕಾರಿಗೆ ತಿರುಗೇಟು ನೀಡಿದರು.
Team first, always! 🇮🇳
📹 EXCLUSIVE: @ImRo45 sets the record straight on his selfless gesture during the SCG Test. Watch his full interview at 12:30 PM only on Cricket Live! #AUSvINDOnStar 👉 5th Test, Day 2 | LIVE NOW | #BorderGavaskarTrophy #ToughestRivalry #RohitSharma pic.twitter.com/uyQjHftg8u
— Star Sports (@StarSportsIndia) January 4, 2025
“ನೀವು ಭಾರತ ತಂಡದ ನಾಯಕರಾಗಿರುವುದಕ್ಕೆ ಸಂತೋಷವಾಯಿತು” ಎಂದು ಆಂಕರ್ ಹೇಳಿದಾಗ ತನ್ನದೇ ಶೈಲಿಯಲ್ಲಿ ಉತ್ತರಿಸಿದ ರೋಹಿತ್ “ಅರೆ ಕಹೀಂ ಜಾ ನಹಿ ರಹಾ ಹು ಮೈನ್ (ನಾನು ಎಲ್ಲಿಗೂ ಹೋಗುತ್ತಿಲ್ಲ)” ಎಂದರು.
“ನಾನು ಇಲ್ಲಿಯವರೆಗೆ ಸುಮ್ಮನೆ ಕೂರಲು ಬಂದಿಲ್ಲ, ನಾನು ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಲು ಬಂದಿದ್ದೇನೆ. ಆದರೆ ಕೆಲವೊಮ್ಮೆ, ತಂಡದ ಅವಶ್ಯಕತೆ ಏನು ಎಂದು ನೀವು ಅರ್ಥಮಾಡಿಕೊಳ್ಳಬೇಕು. ತಂಡದ ಬಗ್ಗೆ ಯೋಚಿಸದಿದ್ದರೆ ನೀವು ಯಾಕೆ ಇರುವುದು? ಇದು ಟೀಮ್ ವರ್ಕ್ ಬಗ್ಗೆ ಅಷ್ಟೆ. ನಾನು ಇತರರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಆದರೆ ನಾನು ಹೀಗಿದ್ದೇನೆ. ಯಾರಾದರೂ ಇದನ್ನು ಇಷ್ಟಪಡದಿದ್ದರೆ, ಪರವಾಗಿಲ್ಲ” ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.