![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Sep 19, 2024, 3:52 PM IST
ಚೆನ್ನೈ: ಒಂದು ತಿಂಗಳ ವಿರಾಮದ ಬಳಿಕ ಭಾರತೀಯ ಪುರುಷರ ಕ್ರಿಕೆಟ್ ತಂಡವು ಇದೀಗ ಮತ್ತೆ ದ್ವಿಪಕ್ಷೀಯ ಸರಣಿ ಆಡುತ್ತಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನಲ್ಲಿ ಗುರುವಾರ (ಸೆ.19) ಆರಂಭವಾಗಿದೆ. ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೇನ್ ಶಾಂಟೋ ಅವರು ಮೊದಲು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲಿಯೇ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 6 ರನ್ ಗಳಿಸಿದರೆ, ಶುಭಮನ್ ಗಿಲ್ 0, ವಿರಾಟ್ ಕೊಹ್ಲಿ 6 ರನ್ ಮಾಡಿ ಪೆವಿಲಿಯನ್ ಸೇರಿದರು. ಆದರೆ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವಿ ಅಶ್ವಿನ್ ತಂಡದವನ್ನು ಭಾರೀ ಕುಸಿತದಿಂದ ಪಾರು ಮಾಡಿದರು.
ಗಿಲ್ ಅವರು ಔಟಾದ ರೀತಿಯು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ಬಲಗೈ ಬ್ಯಾಟರ್ ಗಿಲ್ ಅವರು ಭಾರತೀಯ ಕ್ರಿಕೆಟ್‌ನ ಬಾಬರ್ ಆಜಮ್ ಎಂದು ಅಭಿಮಾನಿಗಳು ಟೀಕೆ ಮಾಡಿದ್ದಾರೆ.
Shubman Gill proves me right everyday that he is Babar Azam of Indian Cricket who is playing in team just because of heavy PR investment and not because of his performance !! pic.twitter.com/jdrLE0wjG7
— Rajiv (@Rajiv1841) September 19, 2024
ಲೆಗ್ ಸೈಡ್‌ನಿಂದ ಕೆಳಕ್ಕೆ ಬಂದ ಚೆಂಡನ್ನು ಗಿಲ್ ಎಡ್ಜ್ ಮಾಡಿದರು. ಈ ಚೆಂಡು ನೇರವಾಗಿ ವಿಕೆಟ್ ಕೀಪರ್ ಲಿಟ್ಟನ್ ದಾಸ್ ಗ್ಲೌಸ್ ಸೇರಿತು. ಎಂಟು ಎಸೆತ ಎದುರಿಸಿದ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು.
Shubman Gill proves me right everyday that he is Babar Azam of Indian Cricket. #INDvsBANTEST pic.twitter.com/ds4abSsGjY
— 𝑨𝒏𝒊𝒗𝒆𝒔𝒉 (@itsanivesh_) September 19, 2024
ಬಾಂಗ್ಲಾದ ವೇಗಿ ಹಸನ್ ಮೆಹಮೂದ್ ಆರಂಭದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳನ್ನು ಕಾಡಿದರು. ಉರುಳಿದ ಮೊದಲ ನಾಲ್ಕು ವಿಕೆಟ್ ಗಳು ಹಸನ್ ಪಾಲಾಯಿತು.
ಪಾಕಿಸ್ತಾನದಲ್ಲಿ ಐತಿಹಾಸಿಕ 2-0 ಟೆಸ್ಟ್ ಸ್ವೀಪ್‌ನಿಂದ ಬಾಂಗ್ಲಾದೇಶ ಉತ್ಸಾಹದಲ್ಲಿದೆ. ಆದರೆ ಇದುವರೆಗೆ 13 ಪಂದ್ಯಗಳಲ್ಲಿ ಒಮ್ಮೆಯೂ ಭಾರತ ವಿರುದ್ದ ಗೆಲ್ಲಲಾಗಲಿಲ್ಲ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.