INDvsENG; ವಿಶಾಖಪಟ್ಟಣದಲ್ಲಿ ಭಾರತದ ದಿಗ್ವಿಜಯ; ಮಿಂಚಿದ ಅಶ್ವಿನ್, ಬುಮ್ರಾ
Team Udayavani, Feb 5, 2024, 2:21 PM IST
ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಂಡಿದೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 106 ರನ್ ಅಂತರದ ಗೆಲುವು ಸಾಧಿಸಿದೆ.
ಗೆಲುವಿಗೆ 399 ರನ್ ಗಳ ಸವಾಲು ಪಡೆದಿದ್ದ ಇಂಗ್ಲೆಂಡ್ 292 ರನ್ ಗಳಿಗೆ ಆಲೌಟಾಯಿತು. ಜ್ಯಾಕ್ ಕ್ರಾಲಿ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್ ಗಳು ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು.
ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ಪರವಾಗಿ ಕ್ರಾಲಿ 73 ರನ್ ಗಳಿಸಿದರು. ಉಳಿದಂತೆ ಬೆನ್ ಫೋಕ್ಸ್ ಮತ್ತು ಬೌಲರ್ ಟಾಮ್ ಹಾರ್ಟ್ಲಿ ತಲಾ 36 ರನ್ ಗಳ ಕಾಣಿಕೆ ನೀಡಿದರು. ಬೆನ್ ಡಕೆಟ್, ಒಲಿ ಪೋಪ್, ಜಾನಿ ಬೇರಿಸ್ಟೋ ಆರಂಭ ಪಡೆದಾರದರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಆಂಗ್ಲ ಬೌಲರ್ ಗಳನ್ನು ಕಟ್ಟಿ ಹಾಕಿದರು. ಇಬ್ಬರು ತಲಾ ಮೂರು ವಿಕೆಟ್ ಕಿತ್ತರು. ಉಳಿದಂತೆ ಮುಕೇಶ್ ಕುಮಾರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಿತ್ತರು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 396 ರನ್ ಗಳಿಸಿದ್ದರೆ, ಇಂಗ್ಲೆಂಡ್ 253 ರನ್ ಮಾಡಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತವು 255 ರನ್ ಮಾಡಿದ್ದರೆ ಇಂಗ್ಲೆಂಡ್ ತಂಡವು 292 ರನ್ ಗಳಿಗೆ ಆಲೌಟಾಯಿತು.
ಭಾರತದ ಪರ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಹೊಡೆದಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಶುಭ್ಮನ್ ಗಿಲ್ ಶತಕ ಬಾರಿಸಿದ್ದರು.
ಈ ಗೆಲುವಿನೊಂದಿಗೆ ಸರಣಿ 1-1 ರೊಂದಿಗೆ ಸಮಬಲಗೊಂಡಿದೆ. ಮೂರನೇ ಪಂದ್ಯವು ಫೆ.15ನಿಂದ ರಾಜ್ ಕೋಟ್ ನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.