INDvsENG; ವಿಶಾಖಪಟ್ಟಣದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ಉತ್ತಮ ಸ್ಥಿತಿಯಲ್ಲಿ ಭಾರತ
Team Udayavani, Feb 2, 2024, 1:28 PM IST
ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್ ನಂತರ ತುಸು ವೇಗವಾಗಿ ಬ್ಯಾಟ್ ಬೀಸಿದರು. 151 ಎಸೆತಗಳಲ್ಲಿ ಅವರು ಎರಡನೇ ಟೆಸ್ಟ್ ಶತಕ ಪೂರೈಸಿದರು. ಅದರಲ್ಲಿ ಅವರು 11 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದರು. ಸಿಕ್ಸ್ ಮೂಲಕವಾಗಿಯೇ ಶತಕದ ಗಡಿ ದಾಟಿದ್ದು ವಿಶೇಷ.
ಹೈದರಾಬಾದ್ ಪಂದ್ಯದಲ್ಲಿ ಏಕದಿನ ಮಾದರಿಯಲ್ಲಿ ಆಡಿದ್ದ ಜೈಸ್ವಾಲ್ ಇಂದು ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದರು. ನಾಯಕ ರೋಹಿತ್ ಜತೆ 40 ರನ್ ಜತೆಯಾಟ ಮತ್ತು ಗಿಲ್ ಜತೆಗೆ 49 ರನ್ ಜತೆಯಾಟವಾಡಿದರು. ಮೂರನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಅವರ ಜತೆಗೆ 90 ರನ್ ಜತೆಯಾಟವಾಡಿದರು. ರೋಹಿತ್ 14 ರನ್, ಗಿಲ್ 34 ರನ್ ಮತ್ತು ಅಯ್ಯರ್ 27 ರನ್ ಮಾಡಿ ಔಟಾದರು.
A TEST HUNDRED WITH A SIX…!!! 🤯
– Yashasvi Jaiswal special in Vizag.pic.twitter.com/C3QuPjjRBQ
— Mufaddal Vohra (@mufaddal_vohra) February 2, 2024
ಯುವ ಆಟಗಾರ ರಜತ್ ಪಟಿದಾರ್ ಅವರು ಇಂದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಗಾಯಗೊಂಡಿದ್ದ ಕೆಎಲ್ ರಾಹುಲ್ ಅವರಿಂದ ತೆರವಾಗಿದ್ದ ಸ್ಥಾನದಲ್ಲಿ ಪಟಿದಾರ್ ಅವಕಾಶ ಪಡೆದರು.
51 ಓವರ್ ಅಂತ್ಯಕ್ಕೆ ಭಾರತ ತಂಡವು ಮೂರು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.