INDvsNZ: ನಡೆಯದ ಮ್ಯಾಜಿಕ್; 36 ವರ್ಷದ ಬಳಿಕ ಭಾರತದಲ್ಲಿ ಟೆಸ್ಟ್ ಗೆದ್ದ ಕಿವೀಸ್
Team Udayavani, Oct 20, 2024, 12:30 PM IST
ಬೆಂಗಳೂರು: ನಿರೀಕ್ಷೆ ಮಾಡಿದ್ದ ಮ್ಯಾಜಿಕ್ ನಡೆಯಲಿಲ್ಲ. ಹಲವು ತಿರುವುಗಳಿಗೆ ಸಾಕ್ಷಿಯಾದ ಬೆಂಗಳೂರು ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ ತಂಡವು ಅಧಿಕಾರಯುತವಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಗೆಲುವಿಗೆ 107 ರನ್ ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ ತಂಡವು ಕೇವಲ ಎರಡು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಉತ್ತಮ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಕಾರಣವಾದರು.
ಇಂದು ಬ್ಯಾಟಿಂಗ್ ಆರಂಭವಾದ ಕೂಡಲೇ ಕಿವೀಸ್ ನಾಯಕ ಮೊದಲ ಬಲಿಯಾದರು. ಲ್ಯಾಥಮ್ ಅವರು ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಕಾನ್ವೇ ಕೂಡಾ 17 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಜೊತೆಯಾದ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಅಜೇಯ ಅರ್ಧಶತಕದ ಜೊತೆಯಾಡಿದರು.
ವಿಲ್ ಯಂಗ್ 45 ರನ್ ಮಾಡಿದರೆ, ಮೊದಲ ಇನ್ನಿಂಗ್ಸ್ ನ ಶತಕವೀರ ರಚಿನ್ ರವೀಂದ್ರ 39 ರನ್ ಮಾಡಿದರು. ಭಾರತದ ಪರ ಜಸ್‌ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದರು.
A memorable win for New Zealand as they take a 1-0 lead in the #WTC25 series against India 👊#INDvNZ | 📝 Scorecard: https://t.co/Ktzuqbb61r pic.twitter.com/sQI74beYr8
— ICC (@ICC) October 20, 2024
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಕೇವಲ 46 ರನ್ ಗಳಿಗೆ ಆಲೌಟಾಗಿತ್ತು. ಆದರೆ ನ್ಯೂಜಿಲ್ಯಾಂಡ್ ತಂಡವು 402 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಸರ್ಫರಾಜ್ ಸಿಂಗ್ 150 ರನ್, ರಿಷಭ್ ಪಂತ್ 99 ರನ್ ನೆರವಿನಿಂದ 462 ರನ್ ಮಾಡಿತ್ತು.
36 ವರ್ಷದ ಬಳಿಕ ಟೆಸ್ಟ್ ಗೆಲುವು
ನ್ಯೂಜಿಲ್ಯಾಂಡ್ ತಂಡವು 36 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಗೆಲುವು ಕಂಡಿತು. ಕಿವೀಸ್ ಪಡೆ ಕೊನೆ ಸಲ ಭಾರತದಲ್ಲಿ ಟೆಸ್ಟ್ ಪಂದ್ಯವೊಂದನ್ನು ಜಯಿಸಿದ್ದು 1989 ರಲ್ಲಿ. ಮುಂಬೈ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ವನ್ನು ನ್ಯೂಜಿಲೆಂಡ್ 136 ರನ್ನುಗಳಿಂದ ಗೆದ್ದಿತ್ತು. ಈ ಪಂದ್ಯ ದಲ್ಲಿ ಕಿವೀಸ್‌ನ ರಿಚರ್ಡ್ ಹ್ಯಾಡ್ಲಿ 10 ವಿಕೆಟ್ ಪಡೆದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.