INDvsPAK: ಪಂದ್ಯ ಸೋತ ಬಳಿಕ ಅಳುತ್ತಿದ್ದ ಪಾಕ್ ಆಟಗಾರನಿಗೆ ಸಂತೈಸಿದ ರೋಹಿತ್ ಶರ್ಮಾ
Team Udayavani, Jun 10, 2024, 12:58 PM IST
ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ನ ಬಹುನಿರೀಕ್ಷಿತ ಪಂದ್ಯಕ್ಕೆ ರವಿವಾರ ನ್ಯೂಯಾರ್ಕ್ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದೆ. ಲೋ ಸ್ಕೋರಿಂಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯುವ ಆರು ರನ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 19 ಓವರ್ ಗಳಲ್ಲಿ 119 ರನ್ ಗೆ ಆಲೌಟಾದರು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 113 ರನ್ ಮಾತ್ರ ಗಳಿಸಲು ಶಕ್ತವಾಯಿತು. ಕೊನೆಯ ಓವರ್ ನಲ್ಲಿ ನಸೀಂ ಶಾ ಪ್ರಯತ್ನಪಟ್ಟರಾದರೂ ಪಾಕ್ ತಂಡವನ್ನು ಗೆಲುವಿನ ಗುರಿ ತಲುಪಿಸಲು ಸಾಧ್ಯವಾಗಲಿಲ್ಲ.
ನಸೀಂ ಶಾ ನಾಲ್ಕು ಎಸೆತಗಳಲ್ಲಿ ಹತ್ತು ರನ್ ಗಳಿಸಿ ಅಜೇಯರಾಗಿ ಉಳಿದರು. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡ ಬಳಿಕ ಡಗೌಟ್ ಕಡೆ ಬರುತ್ತಿದ್ದ ನಸೀಂ ಶಾ ಬೇಸರ ತಡೆಯಲಾರದೆ ಬಿಕ್ಕಿ ಅತ್ತರು. ಸಹ ಆಟಗಾರ ಶಾಹೀನ್ ಅಫ್ರಿದಿ ಅವರು ನಸೀಂ ಅವರಿಗೆ ಸಂತೈಸಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೂಡಾ ಅಳುತ್ತಿದ್ದ ನಸೀಂ ಶಾ ಅವರನ್ನು ಸಂತೈಸುವುದು ಕಂಡು ಬಂತು.
Rohit Sharma appreciating the efforts of Naseem Shah after the match. He asked him to not cry. What a moment ❤️❤️❤️#T20WorldCup #PAKvsIND #INDvsPAK #tapmad #HojaoADFree pic.twitter.com/YNnLEbra8h
— Farid Khan (@_FaridKhan) June 9, 2024
ಪಂದ್ಯದ ಬಳಿಕ ಮಾತನಾಡಿದ ಪಾಕ್ ನಾಯಕ ಬಾಬರ್ ಅಜಂ ಅವರು ತಂಡದ ಬ್ಯಾಟರ್ ಗಳನ್ನು ಸೋಲಿಗೆ ಹೊಣೆ ಮಾಡಿದರು. “ನಾವು ಉತ್ತಮವಾಗಿ ಬೌಲಿಂಗ್ ಮಾಡಿದೆವು. ಆದರೆ ಬ್ಯಾಟಿಂಗ್ ವೇಳೆ ಸತತ ವಿಕೆಟ್ ಕಳೆದುಕೊಂಡೆವು. ಸರಳವಾಗಿ ಆಡಬೇಕಿತ್ತು. ತಪ್ಪುಗಳ ಬಗ್ಗೆ ಕುಳಿತು ಮಾತನಾಡುತ್ತೇವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.