INDvsPAK; ಕೊಹ್ಲಿ,ರಾಹುಲ್ ಶತಕದ ಜುಗಲ್‌ಬಂದಿ; ಪಾಕ್ ಎದುರು ಸವಾಲಿನ ಮೊತ್ತ
Team Udayavani, Sep 11, 2023, 6:46 PM IST
ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ- ಪಾಕಿಸ್ಥಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅತ್ಯಮೋಘ ಶತಕಗಳನ್ನು ಸಿಡಿಸಿ ಭಾರತದ ಬ್ಯಾಟಿಂಗ್ ಬಲ ಸಾಬೀತುಪಡಿಸಿದ್ದಾರೆ. ಭಾರತ 50 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 356 ರನ್ ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.
ಕೊಹ್ಲಿ 122 ರನ್ ಗಳಿಸಿ ಅಜೇಯರಾಗಿ ಉಳಿದರು.93 ಎಸೆತಗಳಲ್ಲಿ ಆಕರ್ಷಕ 9 ಬೌಂಡರಿ ಮತ್ತು 3 ಸಿಕ್ಸರ್ ಅವರ ಇನ್ನಿಂಗ್ಸ್ ನ ಆಕರ್ಷಣೆಯಾಗಿತ್ತು. ಜವಾಬ್ದಾರಿಯುತ ಆಟವಾಡಿದ ರಾಹುಲ್ ಅಜೇಯ 111 ರನ್ ಗಳಿಸಿದರು.106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಅವರ ಆಟದ ಆಕರ್ಷಣೆಯಾಗಿತ್ತು. 3 ನೇ ವಿಕೆಟ್ ಗೆ ಇಬ್ಬರು 233 ರನ್ ಜತೆಯಾಟವಾಡಿದ್ದು ಇದು ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತೀ ದೊಡ್ಡ ಜತೆಯಾಟವಾಗಿದೆ.
ನಿನ್ನೆ ಭಾರಿ ಮಳೆಯಿಂದ ಪಂದ್ಯ ಮುಂದೂಡಿಕೆಯಾದ ವೇಳೆ 24.1 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. 8 ರನ್ ಗಳಿಸಿದ್ದ ಕೊಹ್ಲಿ ಮತ್ತು 17 ರನ್ ಗಳಿಸಿದ್ದ ರಾಹುಲ್ ಆಕರ್ಷಕ ಜತೆಯಾಟವನ್ನು ಆಡಿದರು.
ಪಾಕಿಸ್ಥಾನದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ ಮತ್ತು ರಾಹುಲ್ ಕ್ರೀಸ್ ಆಕ್ರಮಿಸಿಕೊಂಡರು ಕೊನೆಯವರೆಗೂ ಆಡಿದರು. ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ 13000 ರನ್ ಗಳನ್ನು ಗಳಿಸಿದ ದಾಖಲೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರರಾಗಿದ್ದು, ವಿಶ್ವದ ಎಂಟನೇ ಆಟಗಾರರಾಗಿದ್ದಾರೆ.
ಭರ್ಜರಿ ಪುನರಾಗಮನ ಮಾಡಿದ ಕೆ.ಎಲ್. ರಾಹುಲ್ ಶತಕವನ್ನು ಭಾವುಕವಾಗಿ ಸಂಭ್ರಮಿಸಿದರು. ವಿಶ್ವಕಪ್ ಗೂ ಮುನ್ನ ಪಾಕ್ ಬೌಲರ್ ಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಬ್ಯಾಟಿಂಗ್ ಬಲವನ್ನು ತೋರಿದರು.
ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ರೋಹಿತ್ ಶರ್ಮಾ 56 ರನ್ ಶುಭಮನ್ ಗಿಲ್ 58 ರನ್ ಗಳಿಸಿ ಔಟಾಗಿದ್ದರು. ಭಾರಿ ಮಳೆಯ ಕಾರಣದಿಂದಾಗಿ ಭಾನುವಾರ ನಡೆಯಬೇಕಾಗಿದ್ದ ಪಂದ್ಯ ಮೀಸಲು ದಿನವಾದ ಸೋಮವಾರ ಆಡಲಾಗುತ್ತಿದೆ.
357 ರನ್ ಗಳ ಸವಾಲು ಪಡೆದಿರುವ ಪಾಕಿಸ್ಥಾನದ ಪಡೆಯಲ್ಲಿ ಬ್ಯಾಟ್ಸ್ ಮ್ಯಾನ್ ಗಳ ಬಲವಿದ್ದು, ಮಳೆಯ ಅಡ್ಡಿಯಿಂದ ತೇವವಾಗಿರುವ ಕ್ರೀಡಾಂಗಣದಲ್ಲಿ ಭಾರತದ ಬೌಲಿಂಗ್ ನಿರ್ಣಾಯಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.