INDvsSA; ಒಂದೇ ಇನ್ನಿಂಗ್ಸ್ ನಲ್ಲಿ ಹಲವು ದಾಖಲೆ ಬರೆದ ಸೂರ್ಯಕುಮಾರ್ ಯಾದವ್
Team Udayavani, Dec 15, 2023, 8:34 AM IST
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲ ಜಯವನ್ನು ಗುರುವಾರ ಸಂಪಾದಿಸಿದೆ. ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯರನ್ನು 106 ರನ್ ಗಳಿಗೆ ಬಗ್ಗು ಬಡಿದ ಭಾರತ ಸರಣಿಯನ್ನು ಸಮಬಲಗೊಳಿಸುವಲ್ಲಿ ಸಶಕ್ತವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಏಳು ವಿಕೆಟ್ ಕಳೆದುಕೊಂಡು 201 ರನ್ ಪೇರಿಸಿತು. ಬಳಿಕ ಕುಲದೀಪ್ ಯಾದವ್ ದಾಳಿಗೆ ಬೆದರಿದ ಹರಿಣಗಳು ಕೇವಲ 13.5 ಓವರ್ ಗಳಲ್ಲಿ 95 ರನ್ ಗೆ ಆಲೌಟಾದರು.
ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಧಾರವಾದರು. 56 ಎಸೆತ ಎದುರಿಸಿದ ಸೂರ್ಯ ಭರ್ತಿ ನೂರು ರನ್ ಗಳಿಸಿದರು. ಏಳು ಬೌಂಡರಿ ಮತ್ತು ಮತ್ತು ಎಂಟು ಸಿಕ್ಸರ್ ಸೂರ್ಯ ಬ್ಯಾಟಿಂದ ಬಂತು.
ಸೂರ್ಯಕುಮಾರ್ ಯಾದವ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗಳನ್ನು ಪಡೆದರು. ಈ ಇನ್ನಿಂಗ್ಸ್ ವೇಳೆ ಸೂರ್ಯ ಹಲವು ದಾಖಲೆ ಬರೆದರು.
T20I ಗಳಲ್ಲಿ ನಾಲ್ಕನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗೆ ಆಡಿ 50 ಪ್ಲಸ್ ಸ್ಕೋರ್‌ಗಳು:
15 – ಸೂರ್ಯಕುಮಾರ್ ಯಾದವ್ (39 ಇನ್ನಿಂಗ್ಸ್)
14 – ಇಯಾನ್ ಮಾರ್ಗನ್ (105 ಇನ್ನಿಂಗ್ಸ್)
11 – ಗ್ಲೆನ್ ಮ್ಯಾಕ್ಸ್‌ವೆಲ್ (74 ಇನ್ನಿಂಗ್ಸ್)
10 – ರಿಚಿ ಬೆರಿಂಗ್ಟನ್ (59 ಇನ್ನಿಂಗ್ಸ್)
10 – ಗ್ಲೆನ್ ಫಿಲಿಪ್ಸ್ (48 ಇನ್ನಿಂಗ್ಸ್)
ಭಾರತದ ಪರ T20I ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು:
10 – ರೋಹಿತ್ ಶರ್ಮಾ, ಶ್ರೀಲಂಕಾ ವಿರುದ್ಧ, ಇಂದೋರ್, 2017
9 – ಸೂರ್ಯಕುಮಾರ್ ಯಾದವ್, ಶ್ರೀಲಂಕಾ ವಿರುದ್ಧ, ರಾಜ್‌ಕೋಟ್, 2023
8 – ಕೆಎಲ್ ರಾಹುಲ್, ಶ್ರೀಲಂಕಾ ವಿರುದ್ಧ, ಇಂದೋರ್, 2017
8 – ಸೂರ್ಯಕುಮಾರ್ ಯಾದವ್, ದಕ್ಷಿಣ ಆಫ್ರಿಕಾ ವಿರುದ್ಧ, ಜೋಹಾನ್ಸ್‌ಬರ್ಗ್, 2023
ಪುರುಷರ T20I ಗಳಲ್ಲಿ ಅತಿ ಹೆಚ್ಚು ಶತಕಗಳು:
4 – ರೋಹಿತ್ ಶರ್ಮಾ
4 – ಗ್ಲೆನ್ ಮ್ಯಾಕ್ಸ್‌ವೆಲ್
4 – ಸೂರ್ಯಕುಮಾರ್ ಯಾದವ್
3 – ಬಾಬರ್ ಆಜಮ್
3 – ಕಾಲಿನ್ ಮುನ್ರೋ
3 – ಸಬಾವೂನ್ ಡೇವಿಜಿ
ಭಾರತಕ್ಕಾಗಿ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು:
182 – ರೋಹಿತ್ ಶರ್ಮಾ (140 ಇನ್ನಿಂಗ್ಸ್)
123 – ಸೂರ್ಯಕುಮಾರ್ ಯಾದವ್ (57 ಇನ್ನಿಂಗ್ಸ್)
117 – ವಿರಾಟ್ ಕೊಹ್ಲಿ (107 ಇನ್ನಿಂಗ್ಸ್)
99 – ಕೆಎಲ್ ರಾಹುಲ್ (68 ಇನ್ನಿಂಗ್ಸ್)
74 – ಯುವರಾಜ್ ಸಿಂಗ್ (51 ಇನ್ನಿಂಗ್ಸ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.