INDWvsAUSW: 51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ
Team Udayavani, Dec 12, 2024, 12:18 PM IST
ಪರ್ತ್: ಟೀಂ ಇಂಡಿಯಾ ಉಪನಾಯಕಿ, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಸ್ಮೃತಿ ಮಂಧನಾ ಅವರ ಶತಕದ ಹೊರತಾಗಿಯೂ ಭಾರತ ಈ ಪಂದ್ಯದಲ್ಲಿ ಸೋಲನುಭವಿಸಿತು.
ಮಂಧನಾ ಅವರು 2024 ರ ನಾಲ್ಕನೇ ಶತಕ ಗಳಿಸಿದರು. ಈ ಗಮನಾರ್ಹ ಸಾಧನೆಯು ವಿಸ್ಡನ್ ಪ್ರಕಾರ, ಮಹಿಳಾ ಏಕದಿನಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ ಅತಿ ಹೆಚ್ಚು ಶತಕಗಳ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿತು.
ಆಶ್ಲೀ ಗಾರ್ಡ್ನರ್ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಸಹ ಅರ್ಧಶತಕಗಳ ಕೊಡುಗೆ, ಅನ್ನಾಬೆಲ್ ಸದರ್ಲ್ಯಾಂಡ್ ಅವರ 99 ಎಸೆತಗಳಲ್ಲಿ 110 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 299 ರನ್ ಗುರಿ ನೀಡಿತ್ತು. ಆದರೆ ಭಾರತದ ಪರ ಸ್ಮೃತಿ ಹೊರತಾಗಿ ಯಾವ ಆಟಗಾರ್ತಿಯೂ ಸಾಥ್ ನೀಡಲಿಲ್ಲ. ಹೀಗಾಗಿ ಭಾರತ ಸೋಲು ಕಂಡಿತು.
ಜೂನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಮತ್ತು ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸತತ ಒಂದು ಶತಕಗಳ ನಂತರ ಮಂಧಾನ ಅವರ ವರ್ಷದ ನಾಲ್ಕನೇ ಶತಕವಾಗಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕ ಬಾರಿಸಿದ ಸ್ಮೃತಿ ಮಹಿಳಾ ಏಕದಿನಗಳಲ್ಲಿ ಹೊಸ ದಾಖಲೆ ನಿರ್ಮಿಸಿದರರು. ಒಂದು ವರ್ಷದಲ್ಲಿ ತಲಾ ಮೂರು ಶತಕಗಳನ್ನು ಗಳಿಸಿದ ಏಳು ಆಟಗಾರರ ಹಿಂದಿನ ದಾಖಲೆಯನ್ನು ಮೀರಿಸಿದರು.
ಇದೇ ವೇಳೆ ಮಂಧಾನಾ ಅವರು ಮಹಿಳಾ ಏಕದಿನಗಳಲ್ಲಿ ಸಾರ್ವಕಾಲಿಕ ಶತಕಗಳ ಪಟ್ಟಿಯಲ್ಲಿ ಮತ್ತಷ್ಟು ಮೇಲಕ್ಕೇರಿದರು. ಈದು ಅವರ 9ನೇ ಶತಕವಾಗಿದೆ. ಅವರು ಈಗ ನ್ಯಾಟ್ ಸಿವರ್-ಬ್ರಂಟ್, ಚಾಮರಿ ಅತ್ತಪತ್ತು ಮತ್ತು ಚಾರ್ಲೊಟ್ ಎಡ್ವರ್ಡ್ಸ್ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡ ʼದಾಸʼ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Kittur: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾ*ವು
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.