ಏಷ್ಯಾ ಕಿರಿಯರ ಬಾಕ್ಸಿಂಗ್: ಭಾರತಕ್ಕೆ ಒಲಿಯಿತು 8 ಚಿನ್ನ
Team Udayavani, Aug 30, 2021, 9:38 PM IST
ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಿರಿಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 8 ಚಿನ್ನ, 5 ಬೆಳ್ಳಿ, 6 ಕಂಚಿನ ಪದಕಗಳ ಸಾಧನೆಯೊಂದಿಗೆ ಕೂಟವನ್ನು ಯಶಸ್ವಿಯಾಗಿ ಮುಗಿಸಿದೆ.
ಫೈನಲ್ ಪ್ರವೇಶಿಸಿದ್ದ ಭಾರತದ 10 ಬಾಲಕಿಯರಲ್ಲಿ 6 ಮಂದಿ ಚಿನ್ನ ಗೆದ್ದಿರುವುದು ಮಹಿಳೆಯರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಉಳಿದ ನಾಲ್ವರು ಬೆಳ್ಳಿ ಪದಕ ಗೆದ್ದರು. ಬಾಲಕರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಮೂವರಲ್ಲಿ ಇಬ್ಬರು ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಕಿರಿಯರ ಈ ಸಾಧನೆ ಎನ್ನುವುದು ಭಾರತದ ಬಾಕ್ಸಿಂಗ್ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ನಿಖೀತಾ ಚಂದ್ ( 60 ಕೆಜಿ), ಮಾಹಿ ರಾಘವ್ (63 ಕೆಜಿ), ಪ್ರಾಂಜಲಾ ಯಾದವ್ (75 ಕೆಜಿ), ಕೀರ್ತಿ (+81 ಕೆಜಿ) ಬಂಗಾರಕ್ಕೆ ಕೊರಳೊಡ್ಡಿದ ಪ್ರತಿಭೆಗಳು.
ಇದಕ್ಕೂ ಮೊದಲು ರೋಹಿತ್ ಚಮೋಲಿ (48 ಕೆಜಿ), ಭರತ್ ಜೂನ್ (+81 ಕೆಜಿ), ಬಾಲಕಿಯರ ವಿಭಾಗದ ವಿಶು ರಥೀ (48 ಕೆಜಿ), ತನು (52 ಕೆಜಿ) ಚಿನ್ನದ ಪದಕ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Hockey: ಇಂದಿನಿಂದ ಜೂ. ಏಷ್ಯಾ ಕಪ್ ಹಾಕಿ; ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!
Border-Gavaskar Trophy: ತುರ್ತು ವೈಯಕ್ತಿಕ ಕಾರಣ: ಕೋಚ್ ಗಂಭೀರ್ ಭಾರತಕ್ಕೆ
BJP: ಬಸನಗೌಡ ಪಾಟೀಲ್ ಯತ್ನಾಳ್ ಸ್ವಪ್ರತಿಷ್ಠೆ ಸಮರ ನಿಲ್ಲಿಸಲಿ: ಯಡಿಯೂರಪ್ಪ
Fraud Case: ಎಪಿಕೆ ಫೈಲ್ ಕಳುಹಿಸಿ 1.31 ಲ.ರೂ. ವಂಚನೆ
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.