Injury Concern; ದುಲೀಪ್ ಟ್ರೋಫಿ ಮೊದಲು ಗಾಯಾಳುಗಳ ಚಿಂತೆ; ಪ್ರಮುಖ ಆಟಗಾರನಿಗೆ ಗಾಯ
Team Udayavani, Sep 1, 2024, 11:41 AM IST
ಮುಂಬೈ: ಸದ್ಯ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟ ಇಲ್ಲದೆ ಇರುವ ಕಾರಣದಿಂದ ಭಾರತೀಯ ಕ್ರಿಕೆಟಿಗರು ದೇಶಿಯ ಕೂಟಗಳಲ್ಲಿ ಆಡುತ್ತಿದ್ದಾರೆ. ಕೆಲವು ಆಟಗಾರರು ಆಯಾ ರಾಜ್ಯಗಳ ಟಿ20 ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಕೆಲ ಆಟಗಾರರು ಬುಚ್ಚಿ ಬಾಬು ಟೂರ್ನಮೆಂಟ್ ನಲ್ಲಿ ಆಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದುಲೀಪ್ ಟ್ರೋಫಿಯು (Duleep Trophy) ಆರಂಭವಾಗಲಿದ್ದಾರೆ ಎಲ್ಲಾ ಪ್ರಮುಖ ಆಟಗಾರರು ಆಡಲಿದ್ದಾರೆ. ಆದರೆ ಇದೀಗ ಗಾಯಾಳುಗಳ ಸಮಸ್ಯೆ ಎದುರಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಗಾಯದ ಸಮಸ್ಯೆಯಿಂದಾಗಿ ಮುಂಬರುವ ದುಲೀಪ್ ಟ್ರೋಫಿಯನ್ನು ಕಳೆದುಕೊಳ್ಳಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗುರುವಾರ ತಮಿಳುನಾಡು XI ವಿರುದ್ಧದ ಬುಚಿ ಬಾಬು ಆಹ್ವಾನಿತ ಟೂರ್ನಮೆಂಟ್ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಅವರ ಬಲ ಹೆಬ್ಬೆರಳಿಗೆ ಗಾಯವಾಗಿದೆ. ಬಳಿಕ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಗೆ ತೆರಳಿದ್ದಾರೆ ಎಂದು ವರದಿ ಹೇಳಿದೆ.
ದುಲೀಪ್ ಟ್ರೋಫಿಗೆ ಇನ್ನೂ ಕೆಲವೇ ದಿನ ಬಾಕಿ ಇದ್ದು ಅವರು ಸ್ಪರ್ಧೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಬಾಂಗ್ಲಾದೇಶ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿ ಕೆಲವೇ ವಾರಗಳಲ್ಲಿ ಆರಂಭವಾಗಲಿದ್ದು, ಭಾರತೀಯ ಕ್ರಿಕೆಟ್ ತಂಡಕ್ಕೂ ಇದು ಕೆಟ್ಟ ಸುದ್ದಿಯಾಗಿದೆ.
ಟಿ20 ಮತ್ತು ಏಕದಿನ ತಂಡದ ಭಾಗವಾಗಿರುವ ಸೂರ್ಯಕುಮಾರ್ ಯಾದವ್ ಅವರು ಟೆಸ್ಟ್ ತಂಡದಲ್ಲಿ ಆಡುವ ಹಂಬಲವನ್ನು ಕೆಲವೇ ದಿನಗಳ ಹಿಂದೆ ವ್ಯಕ್ತಪಡಿಸಿದ್ದರು.
82 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಅವರು 14 ಶತಕಗಳೊಂದಿಗೆ 43.62 ಆರೋಗ್ಯಕರ ಸರಾಸರಿಯೊಂದಿಗೆ 5,628 ರನ್ ಗಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.