ಮಿಥಾಲಿ ಗ್ಲಾಮರ್ ಫೋಟೋಗೆ ಟೀಕೆ
Team Udayavani, Sep 8, 2017, 10:06 AM IST
ನವದೆಹಲಿ: ಇತ್ತೀಚೆಗೆ ಟ್ವೀಟರ್ನಲ್ಲಿ ತನ್ನ ಫೋಟೋ ಪ್ರಕಟಿಸಿ ಅಭಿಮಾನಿಯೊಬ್ಬನಿಂದ ಟೀಕೆಗೊಳಗಾಗಿದ್ದ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೂಮ್ಮೆ ಇಂತಹುದೇ ವಿಷಯದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದ ಸಲ ಮಿಥಾಲಿ ಫೋಟೋಗೆ ಅಭಿಮಾನಿ ಯೊಬ್ಬ “ನಿಮ್ಮ ಕಂಕುಳ ಬೆವರು ಅಸಹ್ಯ ವಾಗಿ ಕಾಣಿಸುತ್ತಿದೆ’ ಎಂದು ಅಸಭ್ಯ ಟ್ವೀಟ್ ಮಾಡಿದ್ದ. ಇದಕ್ಕೆ ಭಾರೀ ಟೀಕೆ ಕೇಳಿ ಬಂದಿತ್ತು. ಸ್ವತಃ ಮಿಥಾಲಿ ಆತನಿಗೆ ತಿರುಗೇಟು ಕೂಡ ನೀಡಿದ್ದರು. ಇದೀಗ ಮಿಥಾಲಿ ತನ್ನ ಗ್ಲಾಮರ್ ಫೋಟೋವೊಂದನ್ನು ಟ್ವೀಟರ್ನಲ್ಲಿ ಗುರುವಾರ ಪ್ರಕಟಿಸಿದ್ದಾರೆ. ಫೋಟೋದಲ್ಲಿ ಇವರ ಜತೆಗೆ ಸ್ನೇಹಿತರೂ ಇದ್ದಾರೆ. ಈ ಫೋಟೋ ಪ್ರಕಟಿಸುತ್ತಿದ್ದಂತೆ ಕೆಲವರು ಮಿಥಾಲಿ
ಪರ ಇನ್ನೂ ಕೆಲವರು ವಿರೋಧವಾಗಿಯೂ ಟ್ವೀಟ್ ಮಾಡಿದ್ದಾರೆ. “ಮೇಡಂ..ಈ ಡ್ರೆಸ್ ನಿಮಗೆ ಚೆನ್ನಾಗಿ ಕಾಣುವುದಿಲ್ಲ. ಮೊದಲು ನೀವು ಫೋಟೋ ಡಿಲಿಟ್ ಮಾಡಿ ‘ಎಂದು ಒಬ್ಬ ಹೇಳಿದ್ದಾನೆ.
“ನೀವು ದೇಶದ ಹೆಣ್ಣು ಮಕ್ಕಳಿಗೆ ಮಾದರಿ. ಹೀಗೆ ಬಟ್ಟೆ ತೊಡಬಾರದು’ ಎಂದು ಮತ್ತೂಬ್ಬ ಟ್ವೀಟ್ ಮಾಡಿದ್ದಾನೆ. ದೇಶದಲ್ಲಿ ಹೆಣ್ಣಿಗೆ ತನಗಿಷ್ಟವಾದ ಬಟ್ಟೆ ತೊಡುವ ಹಕ್ಕಿದೆ ಎಂದು ಮತ್ತೂಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಹಲವಾರು ಮಂದಿ ಪರ-ವಿರೋಧವಾಗಿ ಇಲ್ಲಿ ಚರ್ಚೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.