ಸವಾಲುಗಳ ನಡುವೆ ಇಂದಿನಿಂದ ಐಪಿಎಲ್ ಸಂಭ್ರಮ
Team Udayavani, Apr 9, 2021, 7:30 AM IST
ಹೊಸದಿಲ್ಲಿ: ಕೋವಿಡ್ ಹಾವಳಿ, ಕೇಂದ್ರ-ರಾಜ್ಯ ಸರಕಾರಗಳ ತರಹೇವಾರಿ ನಿರ್ಬಂಧಗಳು, ಜೈವಿಕ ಸುರಕ್ಷಾ ವಲಯದ ಸಂಕಟಗಳ ನಡುವೆ ಈ ಬಾರಿಯ ಐಪಿಎಲ್ ಶುಕ್ರವಾರ ಆರಂಭವಾಗಲಿದೆ. ಎಲ್ಲ ರೀತಿಯ ಸವಾಲುಗಳ ನಡುವೆ ಬಿಸಿಸಿಐ ಎ. 9ರಿಂದ ಮೇ 30ರ ವರೆಗೆ ಕೂಟ ನಡೆಸಲಿದೆ.
ಎ. 9, ಶುಕ್ರವಾರ ಚೆನ್ನೈಯಲ್ಲಿ ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಾಟನ ಪಂದ್ಯ ನಡೆದರೆ ಮೇ 30ರಂದು ಅಹಮದಾಬಾದ್‌ನ ವಿಶ್ವದ ಬೃಹತ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ನಡೆಯಲಿದೆ.
ಪ್ರೇಕ್ಷಕರಿಗೆ ಪ್ರವೇಶವಿಲ್ಲ :
ಕೋವಿಡ್ ಕಾರಣ ಈ ಬಾರಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ ಎಂದು ಬಿಸಿಸಿಐ ಹೇಳಿದೆ. ಆರಂಭದ ಕೆಲವು ಪಂದ್ಯ ನೋಡಿಕೊಂಡು ಮತ್ತೆ ಪ್ರವೇಶ ನೀಡುವ ಬಗ್ಗೆ ಆಲೋಚಿಸುವುದಾಗಿ ಒಂದೆರಡು ತಿಂಗಳುಗಳ ಹಿಂದೆ ಬಿಸಿಸಿಐ ಹೇಳಿತ್ತು.
ಆರೇ ತಾಣಗಳಲ್ಲಿ ಇಡೀ ಕೂಟ :
ಬೆಂಗಳೂರು, ಹೊಸದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾ, ಅಹ್ಮದಾಬಾದ್‌ನಲ್ಲಿ ಈ ಬಾರಿಯ ಕೂಟ ನಡೆಯಲಿದೆ. ಕೋವಿಡ್ ಮುಕ್ತ ಸಂದರ್ಭ ಕನಿಷ್ಠ 8ರಿಂದ 9 ತಾಣಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಈ ಬಾರಿ ಪ್ರತೀ ತಾಣದಲ್ಲೂ ತಲಾ 10 ಪಂದ್ಯಗಳು ನಡೆಯಲಿವೆ. ವಿಶೇಷ ವೆಂದರೆ ಯಾವುದೇ ತಂಡಕ್ಕೂ ತನ್ನದೇ ನೆಲದಲ್ಲಿ ಆಡುವ ಅವಕಾಶವಿಲ್ಲ.
ಕನ್ನಡ ಸೇರಿ 8 ಭಾಷೆಗಳಲ್ಲಿ ಕಮೆಂಟ್ರಿ :
ಹಿಂದಿ, ಇಂಗ್ಲಿಷ್ ಜತೆಗೆ ಭಾರತದ ಇತರ 6 ಸ್ಥಳೀಯ ಭಾಷೆಗಳಲ್ಲಿ ವೀಕ್ಷಕ ವಿವರಣೆ ಇರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಲಿ, ಮರಾಠಿ ಭಾಷಿಕರೂ ವಿವರಣೆಯನ್ನು ಕೇಳಬಹುದು. ಭಾಷೆಗಳ ಮಟ್ಟಿಗೆ ಇದು ಉತ್ತಮ ಬೆಳವಣಿಗೆ.
52 : ಒಟ್ಟು 52 ದಿನಗಳ ಕೂಟ. ಎ. 9ರಂದು ಆರಂಭ, ಮೇ 30ಕ್ಕೆ ಮುಕ್ತಾಯ.
90 : ಸ್ಟಾರ್‌ನ್ಪೋರ್ಟ್ಸ್ ಪರ ಪಾಲ್ಗೊಳ್ಳುವ ವೀಕ್ಷಕ ವಿವರಣೆಗಾರರು.
60 : ಐಪಿಎಲ್‌ನಲ್ಲಿ ನಡೆಯುವ ಪಂದ್ಯಗಳ ಸಂಖ್ಯೆ. 56 ಲೀಗ್ ಪಂದ್ಯ ಗಳು, ಫೈನಲ್ ಸೇರಿ 4 ಅಂತಿಮ ಸುತ್ತಿನ ಪಂದ್ಯಗಳು.
196 : ಈ ಬಾರಿ ಒಟ್ಟು 8 ತಂಡಗಳ 196 ಆಟಗಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.