ಇಂದು ಪಂಜಾಬ್-ಗುಜರಾತ್ ಸೆಣಸಾಟ
Team Udayavani, May 7, 2017, 12:41 PM IST
ಮೊಹಾಲಿ: ಪ್ಲೇ ಆಫ್ ಹಾದಿಯನ್ನು ಇನ್ನೂ ಜೀವಂತವಾಗಿ ಇಟ್ಟುಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಗುಜರಾತ್ ಲಯನ್ಸ್ ತಂಡಗಳು ರವಿವಾರ ಮುಖಾಮುಖೀಯಾಗಲಿವೆ. ಪಂಜಾಬ್‌ಗ ಗೆಲುವು ಅನಿವಾರ್ಯ. ಆದರೆ ಗುಜರಾತ್ ಗೆದ್ದರೂ ಅಷ್ಟೇ ಸೋತರೂ ಅಷ್ಟೇ ಅದರ ಮೇಲೆ ಯಾವುದೇ ಪರಿಣಾಮ ಬೀರದರು.
ಪಂಜಾಬ್‌ಗ ಗೆಲುವು ಅಗತ್ಯ
ಪಂಜಾಬ್ ಈಗಾಗಲೇ 10 ಪಂದ್ಯದಲ್ಲಿ 5 ಜಯ, 5 ಸೋಲಿನಿಂದ 10 ಅಂಕ ಸಂಪಾದಿಸಿದೆ. ಹೀಗಾಗಿ ಪ್ಲೇ ಆಫ್ ಹಾದಿ ಜೀವಂತವಾಗಿದೆ. ಒಮ್ಮೆ ಗುಜರಾತ್ ವಿರುದ್ಧ ಸೋತರೆ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಂತೆ. ಕಳೆದ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಭರ್ಜರಿ ಜಯ ಸಾಧಿಸಿದ ಪಂಜಾಬ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ತಂಡದಲ್ಲಿ ಆಮ್ಲ, ಮ್ಯಾಕ್ಸ್‌ವೆಲ್, ಗಪ್ಟಿಲ್ ಅವರಂತಹ ದಿಗ್ಗಜ ಆಟಗಾರರಿದ್ದಾರೆ. ಬೌಲಿಂಗ್ ವೈಫಲ್ಯ ಎದುರಿಸುತ್ತಿದ್ದ ಪಂಜಾಜ್‌ಗೆ ಕಳೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಮತ್ತು ಸಂದೀಪ್ ಶರ್ಮ ಯಶಸ್ವಿ ದಾಳಿ ನಡೆಸಿರುವುದು ತಂಡಕ್ಕೆ ಕೊಂಚ ನೆಮ್ಮದಿ ತಂದಿದೆ.
ಗುಜರಾತ್ ಕಡೆಗಣಿಸಲಾಗದು
ಸುರೇಶ್ ರೈನಾ, ಬ್ರೆಂಡನ್ ಮೆಕಲಮ್, ದಿನೇಶ್ ಕಾರ್ತಿಕ್, ಫಿಂಚ್…ಅವರನ್ನು ಒಳಗೊಂಡ ಗುಜರಾತ್‌ನ ಬ್ಯಾಟಿಂಗ್ ವಿಭಾಗ ಭಾರೀ ಪ್ರಬಲವಾಗಿದೆ. ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜ ಬಂದ ಮೇಲೆ ಸುಧಾರಿಸಿಕೊಂಡಿದೆ. ಬಾಸಿಲ್ ಥಂಪಿ ಚುರುಕಿನ ದಾಳಿ ನಡೆಸುತ್ತಿದ್ದಾರೆ. ಆದರೆ ಸಂಘಟನಾತ್ಮಕ ಹೋರಾಟದ ಕೊರತೆ ಕಂಡುಬರುತ್ತಿದೆ. ಹೀಗಾಗಿ ಕೂಟದಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚಿನದಾಗಿ ಕಂಡಿದೆ. ಬ್ಯಾಟಿಂಗ್ ವಿಭಾಗ ಬಲಾಡ್ಯವಾಗಿರುವುದರಿಂದ ಗುಜರಾತ್ ಅನ್ನು ಕಡೆಗಣಿಸಲಾಗದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.