ರಾತ್ರಿ 2 ಗಂಟೆ ತನಕ ಕ್ರಿಕೆಟ್: ನೈಲ್ ಅಸಮಾಧಾನ
Team Udayavani, May 19, 2017, 3:45 AM IST
ಬೆಂಗಳೂರು: ರಾತ್ರಿ 2 ಗಂಟೆ ತನಕ ಕ್ರಿಕೆಟ್ ಆಡುವುದರಲ್ಲಿ ಅರ್ಥವಿಲ್ಲ, ಐಪಿಎಲ್‌ಗೆ ನಿಯಮವನ್ನು ಬದಲಿಸಲು ಇದು ಸೂಕ್ತ ಸಮಯ ಎಂದು ಕೆಕೆಆರ್‌ನ ಪಂದ್ಯಶ್ರೇಷ್ಠ ವೇಗಿ ನಥನ್ ಕೋಲ್ಟರ್ ನೈಲ್ ಸ್ವಲ್ಪ ಖಡಕ್ ಆಗಿ ಹೇಳಿದ್ದಾರೆ.
“ರಾತ್ರಿ 12.30ರ ವೇಳೆ ಅಂಪಾಯರ್‌ಗಳು ಅಂಗಳ ಪರಿಶೀಲನೆಗೆಂದು ಹೋದಾಗ ಯಾರೂ ನರ್ವಸ್ ಆಗಿರಲಿಲ್ಲ. ನಮ್ಮ ತಂಡದ ಎಲ್ಲರಿಗೂ ಆಡುವುದು ಅನಿವಾರ್ಯವಾಗಿತ್ತು. ಆಗ ಸಾಕಷ್ಟು ಸಮಯವೂ ಇತ್ತು. ಆದರೂ ಐಪಿಎಲ್ ನಿಯಮಾವಳಿಯಲ್ಲಿ ಪರಿವರ್ತನೆಯ ಅಗತ್ಯವಿದೆ. ರಾತ್ರಿ 2 ಗಂಟೆ ತನಕ ಕ್ರಿಕೆಟ್ ಆಡುವುದನ್ನು ಯಾವ ಆಟಗಾರನೂ ಬಯಸಲಾರ’ ಎಂದು ಆಸೀಸ್ ವೇಗಿ ಆಭಿಪ್ರಾಯಪಟ್ಟರು.
ಈ ಪಂದ್ಯದಲ್ಲಿ 4 ಓವರ್‌ಗಳ ಬಿಗಿಯಾದ ಬೌಲಿಂಗ್ ದಾಳಿ ಸಂಘಟಿಸಿದ ಕೋಲ್ಟರ್ ನೈಲ್ ಸಾಧನೆ 20 ರನ್ನಿಗೆ 3 ವಿಕೆಟ್. ವಿಲಿಯಮ್ಸನ್, ವಿಜಯ್ ಶಂಕರ್ ಮತ್ತು ಜೋರ್ಡನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಗೌರವವೂ ಅವರಿಗೆ ಒಲಿಯಿತು.
“ನಮ್ಮ ಬೌಲಿಂಗ್ ಪಡೆ ಉತ್ತಮ ಅದೃಷ್ಟವನ್ನು ಹೊಂದಿತ್ತು. ಕೆಲವು ಲಕ್ಕಿ ವಿಕೆಟ್‌ಗಳು ನಮ್ಮ ಪಾಲಾದವು. ಒಟ್ಟಾರೆಯಾಗಿ ನಾವೆಲ್ಲ ಸೇರಿ ಅಮೋಘ ಮಟ್ಟದ ದಾಳಿ ಸಂಘಟಿಸಿದೆವು. ಕಳೆದ ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ಸಿಕ್ಕಾಪಟ್ಟೆ ಸುಸ್ತಾಗಿದ್ದೆ. ಆದರೆ ಬೆಳಗ್ಗೆ ಎದ್ದಾಗ ಹೆಚ್ಚು ನಿರಾಳನಾಗಿದ್ದಂತೆ ಕಂಡುಬಂತು. ಹೀಗಾಗಿ ಈ ಪಂದ್ಯದಲ್ಲಿ ಆಡುವಂತಾಯಿತು…’ ಎಂದು ಕೋಲ್ಟರ್ ನೈಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.