ಚಹರ್‌ಗೆ ಮಂಡಿನೋವು: ಎರಡು ವಾರ ವಿಶ್ರಾಂತಿ
Team Udayavani, Apr 30, 2018, 6:55 AM IST
ಪುಣೆ: ಮುಂಬೈ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಚೆನ್ನೈ ತಂಡದ ವೇಗಿ ದೀಪಕ್ ಚಹರ್ ಮಂಡಿನೋವಿಗೆ ಒಳಗಾದ ಕಾರಣ ಎರಡು ವಾರ ವಿಶ್ರಾಂತಿ ಪಡೆಯಲಿದ್ದಾರೆ.
ತನ್ನ ಮೂರನೇ ಓವರಿನ ಮೊದಲ ಎಸೆತ ಹಾಕಿದ ವೇಳೆ ಚಹರ್ ನೋವಿಗೆ ಒಳಗಾದರು. ಆ ಎಸೆತದ ಬಳಿಕ ಅವರು ಮೈದಾನ ತೊರೆದರು ಮತ್ತು ಆಬಳಿಕ ಮರಳಲಿಲ್ಲ. ಈ ಹಿಂದೆಯೂ ಅವರಿಗೆ ಮಂಡಿ ನೋವು ಕಾಣಿಸಿತ್ತು. ಕೆಲವು ವಾರ ಅವರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ತಂದೆ ನಿಧನರಾದ ಕಾರಣ ತವರಿಗೆ ಮರಳಿದ್ದ ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಅವರು ತಂಡವನ್ನು ಸೇರಿಕೊಂಡಿದ್ದಾರೆ ಎಂದು ಫ್ಲೆಮಿಂಗ್ ದೃಢಪಡಿಸಿದರು.
ಚಹರ್ ಈ ಐಪಿಎಲ್‌ನಲ್ಲಿ ಏಳು ಪಂದ್ಯಗಳನ್ನಾಡಿದ್ದು ಆರು ವಿಕೆಟ್ ಪಡೆದಿದ್ದಾರೆ. ಹೈದರಾಬಾದ್ ವಿರುದ್ಧ 15 ರನ್ನಿಗೆ 3 ವಿಕೆಟ್ ಕಿತ್ತು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.