ಏ. 7-ಮೇ 27: ಐಪಿಎಲ್ ಹಬ್ಬ
Team Udayavani, Jan 23, 2018, 6:35 AM IST
ಹೊಸದಿಲ್ಲಿ: ಹನ್ನೊಂದನೇ ಆವೃತ್ತಿಯ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಸೋಮವಾರ ಪ್ರಕಟವಾಗಿದೆ. ಏ. 6ಕ್ಕೆ ಉದ್ಘಾಟನೆ ನಡೆಯಲಿದ್ದು ಏ. 7ರಿಂದ ಮೇ 27ರ ವರೆಗೆ ಕೂಟ ನಡೆಯಲಿದೆ.
ಮುಂಬಯಿಯಲ್ಲಿ ಕೂಟದ ಆರಂಭಿಕ ಹಾಗೂ ಫೈನಲ್ ಪಂದ್ಯ ನಡೆಯಲಿದೆ. ಉದ್ಘಾಟನಾ ಸಮಾರಂಭ ಕೂಡ ಮುಂಬಯಿಯಲ್ಲೇ ನಡೆಯಲಿದೆ.
ಸಮಯದಲ್ಲಿ ಬದಲಾವಣೆ
ಈ ಸಲ ಪಂದ್ಯಗಳ ಆರಂಭದ ಸಮಯದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಈ ಕುರಿತಂತೆ ಸೋಮವಾರ ಐಪಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ರಾಜೀವ್ ಶುಕ್ಲಾ, “ಪಂದ್ಯದ ನೇರ ಪ್ರಸಾರಕರು ಪಂದ್ಯ ಆರಂಭವಾಗುವ ಸಮಯವನ್ನು ಬದಲಾಯಿಸುವಂತೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ನಾವು ಪುರಸ್ಕರಿಸಿದ್ದೇವೆ. ಹೀಗಾಗಿ ರಾತ್ರಿ 8 ಗಂಟೆಗೆ ಆರಂಭವಾಗುತ್ತಿದ್ದ ಪಂದ್ಯವನ್ನು ಒಂದು ಗಂಟೆ ಮುಂಚಿತವಾಗಿ ಅಂದರೆ ರಾತ್ರಿ 7ರಿಂದ ಆರಂಭಿಸುತ್ತೇವೆ. ಸಂಜೆ 4 ಗಂಟೆಗೆ ನಡೆಯುತ್ತಿದ್ದ ಪಂದ್ಯವನ್ನು ಸಂಜೆ 5.30ಕ್ಕೆ ಆರಂಭಿಸುತ್ತೇವೆ’ ಎಂದು ತಿಳಿಸಿದರು. ಎರಡೂ ಪಂದ್ಯಗಳ ಬಹುತೇಕ ಅವಧಿ ಒಂದೇ ಆದರೂ ಇದರ ನೇರ ಪ್ರಸಾರಕ್ಕೆ ಸಾಕಷ್ಟು ಚಾನೆಲ್‌ಗಳು ಇರುವುದರಿಂದ ಸಮಸ್ಯೆ ಆಗದು ಎಂಬುದೊಂದು ಸಮಜಾಯಿಶಿ. ಆದರೆ ಇದರಿಂದ ವೀಕ್ಷಕರಿಗೆ ಸಮಸ್ಯೆ ಆಗುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಹೇಗೆ ಹೊಂದಿಕೊಳ್ಳಬೇಕೆಂಬುದು ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ಪ್ರಶ್ನೆ.
ಈ ಸಲ ಕಿಂಗ್ಸ್ ಇಲೆವೆನ್ ಪಂಜಾಬ್ 4 ಪಂದ್ಯವನ್ನು ತವರು ನೆಲವಾದ ಮೊಹಾಲಿಯಲ್ಲಿ ಆಡಲಿದೆ. ಉಳಿದ 3 ಪಂದ್ಯಗಳನ್ನು ಇಂದೋರ್‌ನಲ್ಲಿ ಆಡಲಿದೆ. 2 ವರ್ಷ ಅಮಾನತಿಗೊಳಗಾಗಿದ್ದ ರಾಜಸ್ಥಾನ್ ರಾಯಲ್ಸ್ ಈ ಬಾರಿ ಮರಳಿ ಕೂಟಕ್ಕೆ ಮರಳುತ್ತಿದೆ. ಆದರೆ ತನ್ನ ತವರು ನೆಲ ಜೈಪುರದಲ್ಲಿ ಪಂದ್ಯ ಆಡುವುದು ಇನ್ನೂ ಖಚಿತಗೊಂಡಿಲ್ಲ. ಇದಕ್ಕೆ ಕಾರಣ, ರಾಜಸ್ಥಾನ್ ಕ್ರಿಕೆಟ್ ಸಂಸ್ಥೆ ಬಿಸಿಸಿಐನಿಂದ ಅಮಾನತಿಗೆ ಒಳಗಾಗಿರುವುದು. ಪ್ರಕರಣ ಸದ್ಯ ಹೈಕೋರ್ಟ್‌ನಲ್ಲಿದೆ. ಜ. 24ಕ್ಕೆ ವಿಚಾರಣೆ ಇದ್ದು, ನ್ಯಾಯಾಲಯದ ಆದೇಶ ಬಂದ ಬಳಿಕವಷ್ಟೇ ಮುಂದಿನ ನಿರ್ಧಾರ ಹೊರಬೀಳಲಿದೆ. ಜ. 27 ಹಾಗೂ 28ರಂದು ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.