ಪಂಜಾಬ್-ಮುಂಬೈ; ಮೊಹಾಲಿ ಮೇಲಾಟ
ಪಂಜಾಬ್‌ಗ ಮೊದಲ ತವರು ಪಂದ್ಯ ; ಮುಂಬೈಗೆ ಅದೃಷ್ಟದ ಬಲ?
Team Udayavani, Mar 30, 2019, 6:04 AM IST
ಮೊಹಾಲಿ: ಗುರುವಾರವಷ್ಟೇ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ “ಅದೃಷ್ಟದ ಗೆಲುವು’ ಸಾಧಿಸಿದ ಮುಂಬೈ ಇಂಡಿಯನ್ಸ್ ಮತ್ತೂಂದು ಪಂದ್ಯಕ್ಕೆ ಅಣಿಯಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ ರೋಹಿತ್ ಪಡೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಸೆಣಸಲಿದೆ. ಈ ಮೇಲಾಟ ಮೊಹಾಲಿಯಲ್ಲಿ ನಡೆಯಲಿದ್ದು, ಪಂಜಾಬ್‌ಗ ಮೊದಲ ತವರು ಪಂದ್ಯವಾಗಿದೆ.
ಎರಡೂ ತಂಡಗಳು ಒಂದು ಗೆಲುವು, ಒಂದು ಸೋಲಿನ ದಾಖಲೆ ಹೊಂದಿವೆ. ರಾಜಸ್ಥಾನ್ ವಿರುದ್ದ ಜೈಪುರದಲ್ಲಿ ಗೆಲುವು ಸಾಧಿಸಿದ ಪಂಜಾಬ್, ಬಳಿಕ ಈಡನ್‌ನಲ್ಲಿ ಕೆಕೆಆರ್‌ಗೆ ಶರಣಾಗಿತ್ತು. ಇನ್ನೊಂದೆಡೆ ಮುಂಬೈ ತವರಿನ ವಾಂಖೇಡೆಯಲ್ಲೇ ಡೆಲ್ಲಿಗೆ ಸೋತ ಬಳಿಕ, ಗುರುವಾರವ ರಾತ್ರಿ ಬೆಂಗಳೂರಿನಲ್ಲಿ ಆತಿಥೇಯ ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿತು. ನೋಬಾಲ್ ವಿವಾದದಿಂದ ಈ ಪಂದ್ಯಕ್ಕೆ ಕಳಂಕ ಮೆತ್ತಿಕೊಂಡರೂ ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರ ಸುಳ್ಳಲ್ಲ.
ಮುಂಬೈ ಬಲಿಷ್ಠ ಬೌಲಿಂಗ್
ಬೌಲಿಂಗೇ ಮಂಬೈ ತಂಡದ ಪ್ರಧಾನ ಅಸ್ತ್ರ. ಆರ್‌ಸಿಬಿ ವಿರುದ್ಧವೂ ಸೋಲಿನ ಭೀತಿಯಲ್ಲಿದ್ದ ಮುಂಬೈಗೆ 19ನೇ ಓವರ್ ಎಸೆದ ಬುಮ್ರಾ ದೊಡ್ಡ ರಿಲೀಫ್ ನೀಡಿದ್ದರು. ಕೊನೆಯಲ್ಲಿ ಮಾಲಿಂಗ ನಿಯಂತ್ರಣ ಸಾಧಿಸಿದರು. ನೋಬಾಲ್ ಕಪ್ಪುಚುಕ್ಕಿ ಬೇರೆ ವಿಷಯ.
ಸೀನಿಯರ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ತುಂಬಿದೆ. ಆರ್‌ಸಿಬಿ ವಿರುದ್ಧ ಅವರು ಚಾಹಲ್‌ಗೆ ಹ್ಯಾಟ್ರಿಕ್ ಸಿಕ್ಸರ್‌ಗಳ ರುಚಿ ತೋರಿಸಿದ್ದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಲಯದಲ್ಲಿದ್ದಾರೆ. ಡಿ ಕಾಕ್, ರೋಹಿತ್, ಸೂರ್ಯಕುಮಾರ್ ನಂಬುಗೆಯ ಬ್ಯಾಟ್ಸ್‌ಮನ್‌ಗಳು. ಆದರೆ ಪೊಲಾರ್ಡ್ ಫೇಲ್ ಆಗಿದ್ದಾರೆ. ಉಳಿದ ಕೆರಿಬಿಯನ್ ಕ್ರಿಕೆಟಿಗರಂತೆ ಪೊಲಾರ್ಡ್ ಕೂಡ ಸಿಡಿಯಬೇಕಿದೆ.
ಪಂಜಾಬ್‌ಗ ಗೇಲ್ ಬಲ
ರಾಜಸ್ಥಾನ್ ವಿರುದ್ದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಿಸ್ ಗೇಲ್ ಪಂಜಾಬ್‌ನ ಅಪಾಯಕಾರಿ ಬ್ಯಾಟ್ಸ್‌ಮನ್. ಆದರೆ ಕಳೆದ ಬಾರಿ ಮಿಂಚಿದ ರಾಹುಲ್, ಆ್ಯಂಡ್ರೂé ಟೈ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಬೌಲಿಂಗ್‌ನಲ್ಲೂ ಶಮಿ, ಅಶ್ವಿನ್ ಹೊರತುಪಡಿಸಿದರೆ ಉಳಿದವರಿಂದ ಘಾತಕ ಸ್ಪೆಲ್ ಕಂಡುಬಂದಿಲ್ಲ. ಹೀಗಾಗಿ ಗೇಲ್ ಬ್ಯಾಟಿಂಗ್ ಮೇಲೆ ಪಂಜಾಬ್ ಹೆಚ್ಚು ಭರವಸೆ ಇಡಬೇಕಾಗಿದೆ. ಮೊದಲ ಪಂದ್ಯದ ತಪ್ಪನ್ನು ತಿದ್ದುವ ಪ್ರಯತ್ನದಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ 5 ಬಬಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಮಿಲ್ಲರ್ ಮಾತ್ರ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರು.ತವರಿನ ಪಂದ್ಯವಾದ್ದರಿಂದ ಪಂಜಾಬ್ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.