ಜೈಪುರದಲ್ಲಿ ಪಂಜಾಬ್ ಜಯಭೇರಿ
Team Udayavani, Mar 26, 2019, 6:00 AM IST
ಜೈಪುರ: ಕಿಂಗ್ಸ್ ಇಲೆವೆನ್ ಪಂಜಾಬ್ 12ನೇ ಐಪಿಎಲ್‌ನಲ್ಲಿ ರೋಚಕ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೋಮವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು 14 ರನ್ನುಗಳಿಂದ ಸೋಲಿಸಲು ಯಶಸ್ವಿಯಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 4 ವಿಕೆಟಿಗೆ 184 ರನ್ ಗಳಿಸಿತು. ಜವಾಬಿತ್ತ ರಾಜಸ್ಥಾನ್ ಒಂದು ಹಂತದಲ್ಲಿ 2 ವಿಕೆಟಿಗೆ 148 ರನ್ ಗಳಿಸಿ ಸುಲಭ ಗೆಲುವಿನ ಸನಿಹಕ್ಕೆ ತಲುಪಿದ್ದರೂ ಆಬಳಿಕ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟಿಗೆ 170 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಜಾಸ್ ಬಟ್ಲರ್ 43 ಎಸೆತಗಳಿಂದ 69 ರನ್ ಬಾರಿಸಿದರೂ ತಂಡಕ್ಕೆ ಗೆಲುವು ದೊರಕಿಸಿಕೊಡಲು ವಿಫಲರಾದರು. 148ರ ಮೊತ್ತಕ್ಕೆ ಮೂರನೇ ವಿಕೆಟ್ ಪತನಗೊಂಡ ಬಳಿಕ ರಾಜಸ್ಥಾನ ನಾಟಕೀಯ ಕುಸಿತ ಕಂಡಿತು. ಮುಂದಿನ 22 ರನ್ ಗಳಿಸುವಷ್ಟರಲ್ಲಿ ತಂಡ 7 ವಿಕೆಟ್ ಕಳೆದುಕೊಂಡು ಅನಿರೀಕ್ಷಿತ ಆಘಾತಕ್ಕೆ ಒಳಗಾಯಿತು. ಅಶ್ವಿನ್ ಸಹಿತ ಬೌಲರ್‌ಗಳ ಬಿಗು ದಾಳಿಯಿಂದಾಗಿ ಪಂಜಾಬ್ ಸೋಲುವ ಪಂದ್ಯದಲ್ಲಿ ಜಯದ ಸಂಭ್ರಮ ಆಚರಿಸಿತು.
ಪಂಜಾಬ್ ತಂಡದ ಕರ್ನಾಟಕದ ಆರಂಭಕಾರ ಕೆ.ಎಲ್. ರಾಹುಲ್ (4) ಬೇಗನೇ ವಿಕೆಟ್ ಒಪ್ಪಿಸಿದ ಬಳಿಕ ಗೇಲ್ ಮತ್ತು ಮಾಯಾಂಕ್ ಅಗರ್ವಾಲ್ ಜತೆಗೂಡಿದರು. ಇವರಿಂದ 2ನೇ ವಿಕೆಟಿಗೆ 56 ರನ್ ಒಟ್ಟುಗೂಡಿತು. ಆದರೆ ಆಟಕ್ಕೆ ಕುದುರಿಕೊಳ್ಳಲು ಗೇಲ್ ಸಾಕಷ್ಟು ಸಮಯ ತೆಗೆದುಕೊಂಡರು. ಈ ನಡುವೆ ಅಗರ್ವಾಲ್ ಕ್ರೀಸ್ ಆಕ್ರಮಿಸಿಕೊಳ್ಳುವ ಸೂಚನೆ ನೀಡುತ್ತಿದ್ದಂತೆಯೇ ಬೌಂಡರಿ ಲೈನ್‌ನಲ್ಲಿ ಧವಳ್ ಕುಲಕರ್ಣಿ ಪಡೆದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಅಗರ್ವಾಲ್ ಗಳಿಕೆ 24 ಎಸೆತಗಳಿಂದ 22 ರನ್ (1 ಬೌಂಡರಿ, 2 ಸಿಕ್ಸರ್).
ಗೇಲ್-ಸಫìರಾಜ್ ಖಾನ್ ಜತೆಗೂಡಿದ ಬಳಿಕ ಪಂಜಾಬ್ ರನ್‌ಗತಿ ತೀವ್ರಗೊಂಡಿತು. ಗೇಲ್ ಅಬ್ಬರಿಸತೊಡಗಿದರು, ಸಫìರಾಜ್ ಸ್ಟಾಂಡ್ ಕೊಟ್ಟರು. 16ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಗೇಲ್ 47 ಎಸೆತಗಳಿಂದ 79 ರನ್ ಬಾರಿಸಿದರು. 4 ಭರ್ಜರಿ ಸಿಕ್ಸರ್ ಜತೆಗೆ 8 ಬೌಂಡರಿಗಳನ್ನು ಇದು ಒಳಗೊಂಡಿತ್ತು. ಈ ಸಂದರ್ಭದಲ್ಲಿ ಗೇಲ್ ಐಪಿಎಲ್‌ನಲ್ಲಿ 4 ಸಾವಿರ ರನ್ ಪೂರ್ತಿಗೊಳಿಸಿದರು.
ಅನಂತರ ಬಂದ ನಿಕೋಲಸ್ ಪೂರಣ್ 12 ರನ್ನಿಗೆ ಔಟಾದರು. ಒಂದೆಡೆ ಗಟ್ಟಿಯಾಗಿ ನಿಂತ ಸಫìರಾಜ್ ಖಾನ್ 29 ಎಸೆತಗಳಿಂದ ಔಟಾಗದೆ 46 ರನ್ ಹೊಡೆದರು (6 ಬೌಂಡರಿ, 1 ಸಿಕ್ಸರ್). ಇನ್ನಿಂಗ್ಸಿನ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.
ಸ್ಕೋರ್‌ಪಟ್ಟಿ
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ ಸಿ ಬಟ್ಲರ್ ಬಿ ಕುಲಕರ್ಣಿ 4
ಕ್ರಿಸ್ ಗೇಲ್ ಸಿ ತ್ರಿಪಾಠಿ ಬಿ ಸ್ಟೋಕ್ಸ್ 79
ಮಾಯಾಂಕ್ ಅಗರ್ವಾಲ್ ಸಿ ಕುಲಕರ್ಣಿ ಬಿ ಗೌತಮ್ 22
ಸಫìರಾಜ್ ಖಾನ್ ಔಟಾಗದೆ 46
ನಿಕೋಲಸ್ ಪೂರಣ್ ಸಿ ರಹಾನೆ ಬಿ ಸ್ಟೋಕ್ಸ್ 12
ಮನ್‌ದೀಪ್ ಸಿಂಗ್ ಔಟಾಗದೆ 5
ಇತರ 16
ಒಟ್ಟು (4 ವಿಕೆಟಿಗೆ) 184
ವಿಕೆಟ್ ಪತನ: 1-4, 2-60, 3-144, 4-167.
ಬೌಲಿಂಗ್:
ಧವಳ್ ಕುಲಕರ್ಣಿ 4-0-30-1
ಕೆ. ಗೌತಮ್ 4-0-32-1
ಜೋಫÅ ಆರ್ಚರ್ 4-0-17-0
ಬೆನ್ ಸ್ಟೋಕ್ಸ್ 4-0-48-2
ಜೈದೇವ್ ಉನಾದ್ಕತ್ 3-0-44-0
ಶ್ರೇಯಸ್ ಗೋಪಾಲ್ 1-0-5-0
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ ಬಿ ಅಶ್ವಿನ್ 27
ಜಾಸ್ ಬಟ್ಲರ್ ರನೌಟ್ 69
ಸಂಜು ಸ್ಯಾಮ್ಸನ್ ಸಿ ಅಶ್ವಿನ್ ಬಿ ಕರನ್ 30
ಸ್ಟೀವ್ ಸ್ಮಿತ್ ಸಿ ರಾಹುಲ್ ಬಿ ಕರನ್ 20
ಬೆನ್ ಸ್ಟೋಕ್ಸ್ ಸಿ ಬದಲಿಗ ಬಿ ಮುಜೀಬ್ 6
ರಾಹುಲ್ ತ್ರಿಪಾಠಿ ಸಿ ರಾಹುಲ್ ಬಿ ಮುಜೀಬ್ 1
ಕೃಷ್ಣಪ್ಪ ಗೌತಮ್ ಸಿ ಶಮಿ ಬಿ ರಜ್‌ಪೂತ್ 3
ಜೆಸಿ ಆರ್ಚರ್ ರನೌಟ್ 2
ಜೈದೇವ್ ಉನಾದ್ಕತ್ ಸಿ ಮತ್ತು ಬಿ ರಜಪೂತ್ 1
ಶ್ರೇಯಸ್ ಗೋಪಾಲ್ ಔಟಾಗದೆ 1
ಧವಳ್ ಕುಲಕರ್ಣಿ ಔಟಾಗದೆ 5
ಇತರ: 5
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 170
ವಿಕೆಟ್ ಪತನ: 1-78, 2-108, 3-148, 4-150, 5-157, 6-158, 7-163, 8-164, 9-164
ಬೌಲಿಂಗ್:
ಸ್ಯಾಮ್ ಕರನ್ 4-0-52-2
ಮುಜೀಬ್ ಉರ್ ರೆಹಮಾನ್ 4-0-31-2
ಮೊಹಮ್ಮದ್ ಶಮಿ 4-0-33-0
ಆರ್. ಅಶ್ವಿನ್ 4-0-20-1
ಅಂಕಿತ್ ರಜಪೂತ್ 4-0-33-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.