ಅಸಭ್ಯ ವರ್ತನೆ: ರೋಹಿತ್‌ಗೆ ದಂಡ
Team Udayavani, Apr 30, 2019, 9:48 AM IST
ಐಪಿಎಲ್ ಮುಖಾಮುಖೀ ವೇಳೆ ಅಂಗಳದಲ್ಲಿ ತೋರಿದ ಅಸಭ್ಯ ವರ್ತನೆಗಾಗಿ ಮುಂಬೈ ನಾಯಕ ರೋಹಿತ್ ಶರ್ಮ ಅವರಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ.
ರವಿವಾರ ರಾತ್ರಿ ಕೆಕೆಆರ್ ಎದುರು ಚೇಸಿಂಗ್ ಮಾಡುತ್ತಿದ್ದಾಗ ರೋಹಿತ್ ಶರ್ಮ ಕೇವಲ 12 ರನ್ ಮಾಡಿ ಗರ್ನಿ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ವಾಪಸಾಗುವಾಗ ನಾನ್ ಸ್ಟ್ರೈಕಿಂಗ್ ತುದಿಯಲ್ಲಿದ್ದ ಸ್ಟಂಪ್‌ಗ್ಳಿಗೆ ಬ್ಯಾಟಿನಿಂದ ಬಡಿದಿದ್ದರು.
ಪ್ರಸಕ್ತ ಐಪಿಎಲ್‌ನಲ್ಲಿ ರೋಹಿತ್‌ಗೆ ದಂಡ ಹೇರಲಾದ 2ನೇ ನಿದರ್ಶನ ಇದಾಗಿದೆ. ಪಂಜಾಬ್ ಎದುರಿನ ಪಂದ್ಯದ ವೇಳೆ ಓವರ್ ಗತಿ ಕಾಯ್ದುಕೊಳ್ಳದ ಕಾರಣಕ್ಕೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.