ಚಾಂಪಿಯನ್ನರ ಆಟಕ್ಕೆ ವೇದಿಕೆ ಸಜ್ಜು

ಇಂದು ಮುಂಬೈ- ಚೆನ್ನೈ ಕಾದಾಟ

Team Udayavani, Apr 3, 2019, 6:14 AM IST

b-29

ಮುಂಬಯಿ: ಐಪಿಎಲ್‌ ಕೂಟದ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್‌-ಚೆನ್ನೈ ಸೂಪರ್‌ ಕಿಂಗ್ಸ್‌ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲು ಸಿದ್ಧವಾಗಿವೆ. ಬುಧವಾರ ರಾತ್ರಿ ನಡೆಯುವ ಮುಂಬೈ – ಚೆನ್ನೈ ನಡುವಿನ ಹೈ ವೊಲ್ಟೆಜ್‌ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಈಗಾಗಲೇ ಹ್ಯಾಟ್ರಿಕ್‌ ಜಯ ಸಾಧಿಸಿರುವ ಚೆನ್ನೈ ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿದ್ದರೆ, ತವರಿನ ಮೊದಲ ಪಂದ್ಯದಲ್ಲಿ ಸೋತಿರುವ ಮುಂಬೈ 2ನೇ ಪಂದ್ಯವನ್ನು ಜಯಿಸಲು ಕಾತರದಿಂದಿದೆ.

ಬಲಿಷ್ಠ ತಂಡಗಳ ನಡುವಣ ಈ ಮುಖಾಮುಖಿ ಐಪಿಎಲ್‌ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಸಂಶಯವಿಲ್ಲ. ಇತ್ತೀಚಿನ ಹೆಡ್‌ ಟು ಹೆಡ್‌ ಇತಿಹಾಸ ಕೂಡ ಮುಂಬೈ ಪರವಾಗಿದೆ. ರೋಹಿತ್‌ ಶರ್ಮ ಮುನ್ನಡೆಯ ತವರಿನ ತಂಡ ಚೆನ್ನೈ ವಿರುದ್ಧ ಕಳೆದ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಜಯಿಸಿದೆ. ಒಟ್ಟಾರೆಯಾಗಿ ಅಪ್ರಚಲಿತ ಚಾಂಪಿಯನ್ಸ್‌ ಟಿ20 ಮುಖಾಮುಖಿ ಸೇರಿದಂತೆ ಮುಂಬೈ ತಂಡ ಚೆನ್ನೈ ವಿರುದ್ಧ 14-12 ಗೆಲುವಿನ ದಾಖಲೆ ಹೊಂದಿದೆ. ಹೀಗಾಗಿ ಮುಂಬೈಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಅವಕಾಶ ಹೆಚ್ಚಿದೆ. ಇದರೊಂದಿಗೆ ಚೆನ್ನೈ ತಂಡದ ಪ್ರದರ್ಶನದಲ್ಲಿ ಯಾವುದೇ ಅನುಮಾನ ಬೇಡ. ಎಲ್ಲ ವಿಭಾಗಗಳಲ್ಲೂ ಸಂಘಟಿತ ಪ್ರದರ್ಶನ ನೀಡುತ್ತಿರುವ ಚೆನ್ನೈ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈಗಿಂತ ಒಂದು ಹೆಜ್ಜೆ ಮುಂದಿದೆ.

ತವರಿನಲ್ಲೇ ಕೂಟ ಆರಂಭಿಸಿದ ಮುಂಬೈ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 37 ರನ್‌ಗಳ ಸೋಲನುಭವಿಸಿತ್ತು. ಬಳಿಕ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತ್ತು. ಅನಂತರ 3ನೇ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಮುಗ್ಗರಿಸಿತ್ತು. ತವರಿನಲ್ಲಿ ಇನ್ನೂ ಗೆಲುವಿನ ಹುಡುಕಾಟದಲ್ಲಿರುವ ರೋಹಿತ್‌ ಪಡೆ ಚೆನ್ನೈ ವಿರುದ್ಧದ ಮೊದಲ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಇತ್ತ 3 ಬಾರಿಯ ಚಾಂಪಿಯನ್‌ ಆಗಿರುವ ಸೂಪರ್‌ ಕಿಂಗ್ಸ್‌ ಈ ಬಾರಿಯ ಐಪಿಎಲ್‌ನಲ್ಲೂ ರಾಜನಂತೆ ಮೆರೆದಾಡುತ್ತಿದೆ. ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಜಯಿಸಿದ ಚೆನ್ನೈ ತಂಡ ರಾಜಸ್ಥಾನ ವಿರುದ್ದದ ಕಳೆದ ಪಂದ್ಯದ ಆರಂಭದಲ್ಲಿ ಸ್ವಲ್ಪ ಹಿನ್ನಡೆ ಎದುರಿಸಿತ್ತಾದರೂ ಗೆದ್ದು ಸಂಭ್ರಮಿಸಿತ್ತು.
ಸೂಪರ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ಆಳ ಹಾಗೂ ಸ್ಪಿನ್‌ ಬೌಲಿಂಗ್‌ನಲ್ಲಿ ಬಲಿಷ್ಠವಾಗಿ ದ್ದರೆ ಆಕ್ರಮಣಕಾರಿ ಬೌಲಿಂಗ್‌ನಲ್ಲಿ ಮುಂಬೈ ಬಲಿಷ್ಠವಾಗಿದೆ.

ಚೆನ್ನೈ ತಂಡದ ಸಂಘಟಿತ ಪ್ರದರ್ಶನ
ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಚೆನ್ನೈ ಬಲಿಷ್ಠವಾಗಿದೆ. ಬ್ಯಾಟಿಂಗ್‌ ನಲ್ಲಿ ಧೋನಿ, ವಾಟ್ಸನ್‌, ರೈನಾ, ಕೇದರ್‌ ಜಾದವ್‌ ಉತ್ತಮ ಫಾರ್ಮ್ ಕಂಡುಕೊಂಡಿ ದ್ದಾರೆ. ಸ್ಪಿನ್‌ ವಿಭಾಗದಲ್ಲಿ ಹರ್ಭಜನ್‌, ಜಡೇಜ ಮತ್ತು ಇಮ್ರಾನ್‌ ತಾಹಿರ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಾಗಿದ್ದಾರೆ. ಸಂಕಷ್ಟ ಬಂದಾಗ ಒಬ್ಬ ಆಟಗಾರ ತಂಡದ ಕೈ ಹಿಡಿಯುತ್ತಾರೆ ಎಂಬುದಕ್ಕೆ ರಾಜಸ್ಥಾನ ವಿರುದ್ಧದ ಪಂದ್ಯವೇ ಸಾಕ್ಷಿ. ಹೀಗಾಗಿ 3 ಪಂದ್ಯಗಳನ್ನು ಗೆದ್ದಿರುವ ಚೆನ್ನೈನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.

ನಾಯಕನನ್ನು ನೆಚ್ಚಿಕೊಂಡಿರುವ ಮುಂಬೈ
ಮುಂಬೈ ಸ್ಟಾರ್‌ ಆಟಗಾರರನ್ನು ಒಳಗೊಂಡಿ ದ್ದರೂ ಕಳೆದ 3 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ . ಆರಂಭಿಕರಾದ ರೋಹಿತ್‌-ಕ್ವಿಂಟನ್‌ ಡಿ ಕಾಕ್‌ ಅವರನ್ನೇ ತಂಡ ನೆಚ್ಚಿಕೊಂಡಿದೆ. ಉಳಿದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ನೆರವಾಗುವ ಅಗತ್ಯವಿದೆ. ಬೌಲಿಂಗ್‌ನಲ್ಲಿ ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ ಅವರ ಮೇಲೆ ಅವಲಂಬಿತವಾಗಿದೆ. ಪೊಲಾರ್ಡ್‌, ಬೆನ್‌ ಕಟ್ಟಿಂಗ್‌, ಸೂರ್ಯಕುಮಾರ್‌ ಯಾದವ್‌ ಈ ಪಂದ್ಯದಲ್ಲಿ ಸಿಡಿದರೆ ಮುಂಬೈಗೆ ಗೆಲುವು ಖಚಿತ. ಸ್ವಿನ್‌ ವಿಭಾಗದಲ್ಲಿ ಮಾತ್ರ ಮುಂಬೈ ಹಿಂದಿದೆ.

ಟಾಪ್ ನ್ಯೂಸ್

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.