ರಸೆಲ್-ರಬಾಡ ಮುಖಾಮುಖೀ ಕೌತುಕ
ಈಡನ್‌ನಲ್ಲಿ ಇಂದು ಕೆಕೆಆರ್-ಡೆಲ್ಲಿ ಮೇಲಾಟ
Team Udayavani, Apr 12, 2019, 9:34 AM IST
ಕೋಲ್ಕತಾ: ಐಪಿಎಲ್‌ನ ಮರು ಪಂದ್ಯಕ್ಕೆ ಕೋಲ್ಕತಾ ನೈಟ್‌ರೈಡರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅಣಿಯಾಗಿವೆ. ಶುಕ್ರವಾರ ರಾತ್ರಿ ಈ ಪಂದ್ಯ “ಈಡನ್ ಗಾರ್ಡನ್ಸ್’ನಲ್ಲಿ ನಡೆಯಲಿದೆ. ವಿಶೇಷವೆಂದರೆ, ಕೆಕೆಆರ್‌ನ ಮಾಜಿ ನಾಯಕ ಸೌರವ್ ಗಂಗೂಲಿ ತವರಿನಂಗಳದ ಮುಖಾಮುಖೀಯ ವೇಳೆ ಅತಿಥಿಯಾಗಿರುವುದು. ಕಾರಣ, ಅವರೀಗ ಡೆಲ್ಲಿ ತಂಡದ ಸಲಹೆಗಾರ!
ಕೋಟ್ಲಾದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯ ದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ತಂಡ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿತ್ತು. ಎರಡೂ ತಂಡಗಳು 185 ರನ್ ಬಾರಿಸಿದ್ದರಿಂದ ಪಂದ್ಯ ಟೈ ಆಗಿತ್ತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಸೂಪರ್ ಓವರ್‌ಗೆ ವಿಸ್ತರಿಸಲ್ಪಟ್ಟ ಏಕೈಕ ಪಂದ್ಯವಾಗಿದೆ.
ರಬಾಡ ಎಸೆದ ಸೂಪರ್ ಓವರ್‌ನ ಮೊದಲ ಎಸೆತದಲ್ಲೇ ರಸೆಲ್ ಬೌಂಡರಿ ಸಿಡಿಸಿದ್ದರು. ಬಳಿಕ ಅದ್ಭುತ ಯಾರ್ಕರ್ ಒಂದರ ಮೂಲಕ ಮಿಡ್ಲ್ ಸ್ಟಂಪ್ ಎಗರಿಸಿದ ರಬಾಡ, ರಸೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ಎಸೆತವನ್ನು ಗಂಗೂಲಿ “ಬಾಲ್ ಆಫ್ ದ ಟೂರ್ನಮೆಂಟ್’ ಎಂದು ಹೊಗಳಿದ್ದನ್ನು ನೆನಪಿಸಿಕೊಳ್ಳಬಹುದು. ಹೀಗಾಗಿ ಮತ್ತೂಮ್ಮೆ ರಬಾಡ-ರಸೆಲ್ ಎದುರುಗೊಳ್ಳುವುದನ್ನು ಕಾಣಲು ಅಭಿಮಾನಿಗಳು ಕಾತರಗೊಂಡಿದ್ದಾರೆ.
“ರಸೆಲ್ ಫ್ಯಾಕ್ಟರ್’
ಮಾ. 27ರ ಬಳಿಕ ಕೆಕೆಆರ್ ಈಡನ್ ಅಂಗಳದಲ್ಲಿ ಆಡಲಿ ಳಿಯಲಿದೆ. ಈ ಅವಧಿಯಲ್ಲಿ ಕೋಟ್ಲಾ ಪಂದ್ಯದಲ್ಲಿ ಅದೃಷ್ಟ ಕೈಕೊಟ್ಟರೆ, ಬೆಂಗಳೂರು ಮತ್ತು ಜೈಪುರದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ತಂಡಗಳಿಗೆ ಸೋಲುಣಿಸಿ ಮೆರೆದಾಡಿದೆ. ಈ ಎಲ್ಲ ಪಂದ್ಯ ಗಳಲ್ಲೂ “ರಸೆಲ್ ಫ್ಯಾಕ್ಟರ್’ ಎದುರಾಳಿಗಳನ್ನು ಕಾಡಿತ್ತು. ಕೂಟದಲ್ಲಿ ಏಕರೀತಿಯ ಫಾರ್ಮ್ ಕಾಯ್ದು ಕೊಂಡು ಬಂದಿರುವ ಕೆರಿಬಿಯನ್‌ನ ಬಿಗ್ ಹಿಟ್ಟರ್ ಆ್ಯಂಡ್ರೆ ರಸೆಲ್ ಅಸಾಧ್ಯವಾದುದನ್ನೆಲ್ಲ ತಮ್ಮ ಸ್ಫೋಟಕ ಬ್ಯಾಟಿಂಗಿನಿಂದ ಸಾಧ್ಯವಾಗಿಸುತ್ತ ಬಂದಿದ್ದಾರೆ. 5 ಇನ್ನಿಂಗ್ಸ್‌ಗಳಿಂದ 257 ರನ್ ಪೇರಿಸಿದ್ದಾರೆ. ಸರಾಸರಿ 128.50; ಸ್ಟ್ರೈಕ್‌ರೇಟ್ 212.39. ಇದರಲ್ಲಿ 150 ರನ್ ಸಿಕ್ಸರ್ ಮೂಲಕವೇ ಸಿಡಿಯಲ್ಪಟ್ಟಿರುವುದು ರಸೆಲ್ ಅಬ್ಬರಕ್ಕೆ ಸಾಕ್ಷಿ. ಚೆನ್ನೈ ವಿರುದ್ಧದ ಕಳೆದ ಪಂದ್ಯದಲ್ಲಿ ಇಡೀ ಬ್ಯಾಟಿಂಗ್ ಸರದಿಯೇ ಕೈಕೊಟ್ಟಾಗ ರಸೆಲ್ ಅರ್ಧ ಶತಕ ಬಾರಿಸಿದ್ದನ್ನು ಮರೆಯುವಂತಿಲ್ಲ.
ಡೆಲ್ಲಿಗೆ ಯುವಪಡೆಯ ಬಲಯುವ ಪಡೆಯನ್ನೇ ಹೊಂದಿರುವ ಡೆಲ್ಲಿ ತಂಡದ ದೊಡ್ಡ ಸಮಸ್ಯೆಯೆಂದರೆ ಯಾರೂ ಸ್ಥಿರ ಬ್ಯಾಟಿಂಗ್ ನಡೆಸದಿರುವುದು. ಪೃಥ್ವಿ ಶಾ, ಧವನ್, ಅಯ್ಯರ್, ಪಂತ್, ವಿಹಾರಿ, ಇನ್‌ಗಾಮ್ ಅವರನ್ನೊಳಗೊಂಡ ಡೆಲ್ಲಿ ಬ್ಯಾಟಿಂಗ್ ಸರದಿ ಕೆಕೆಆರ್‌ಗೆ ಹೋಲಿಸಿದರೆ ದುರ್ಬಲ. ಬೌಲಿಂಗ್ ಕೂಡ ಘಾತಕವೇನಲ್ಲ. ಬದ್ರಿ ಆಗಮನ ಬದಲಾವಣೆ ತಂದೀತೇ ಎಂದು ಕಾದು ನೋಡಬೇಕು.
ಕೆಕೆಆರ್ ತ್ರಿವಳಿ ಸ್ಪಿನ್ನರ್‌ಗಳ ಬಲದೊಂದಿಗೆ ಸಶಕ್ತವಾಗಿದೆ. ಚಾವ್ಲಾ, ಕುಲದೀಪ್, ನಾರಾಯಣ್ ದಾಳಿಯನ್ನು ಡೆಲ್ಲಿ ಹೇಗೆ ನಿಭಾಯಿ ಸಲಿದೆ ಎಂಬುದು ನಿರ್ಣಾಯಕವಾಗಲಿದೆ.
ಸೇಡಿಗೆ ಕಾದಿದೆ ಕೆಕೆಆರ್
ಅಂದು ಅನುಭವಿಸಿದ ಸೋಲಿಗೆ ಕೆಕೆಆರ್ ಈಗ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿ ಕುಳಿತಿದೆ. ಕಾರ್ತಿಕ್ ಬಳಗಕ್ಕೆ ಇದು ಅಸಾಧ್ಯ ಸವಾಲೇನೂ ಅಲ್ಲ. ಕೋಲ್ಕತಾದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಆತಿಥೇಯ ತಂಡವೇ ಜಯ ಸಾಧಿಸಿದೆ. ಬಲಿಷ್ಠ ಹೈದರಾಬಾದ್ ಮತ್ತು ಪಂಜಾಬ್ ತಂಡಗಳಿಗೆ ಕೆಕೆಆರ್ ಇಲ್ಲಿ ಸೋಲುಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.