ಕೆಕೆಆರ್ ಬಿರುಗಾಳಿಗೆ ಮುಂಬೈ ತತ್ತರ
Team Udayavani, Apr 29, 2019, 12:02 PM IST
ಕೋಲ್ಕತಾ: ರವಿವಾರ ರಾತ್ರಿಯ ಮಾಡು- ಮಡಿ ಪಂದ್ಯದಲ್ಲಿ ಆತಿಥೇಯ ಕೆಕೆಆರ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿ ಮುಂಬೈಗೆ 34 ರನ್ನುಗಳ ಸೋಲುಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 2 ವಿಕೆಟಿಗೆ 232 ರನ್ ರಾಶಿ ಹಾಕಿತು. ಇದು ಈ ಋತುವಿನಲ್ಲಿ ದಾಖಲಾದ ತಂಡವೊಂದರ ಅತ್ಯಧಿಕ ಮೊತ್ತ. ಜವಾಬಿತ್ತ ಮುಂಬೈ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರೂ 7 ವಿಕೆಟಿಗೆ 198 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಆಟದಿಂದಾಗಿ ಮುಂಬೈ ಗೆಲುವಿಗೆ ನಿರೀಕ್ಷೆ ಇಟ್ಟುಕೊಂಡಿತು. ಆದರೆ 18ನೇ ಓವರಿನಲ್ಲಿ ಅವರು ಔಟಾಗುತ್ತಲೇ ಸೋಲು ಖಚಿತವಾಯಿತು. ಕೆಕೆಆರ್ ದಾಳಿಯಲ್ಲಿ ಪುಡಿಗಟ್ಟಿದ ಅವರು ಕೇವಲ 34 ಎಸೆತಗಳಿಂದ 91 ರನ್ ಸಿಡಿಸಿದರು. 6 ಬೌಂಡರಿ ಬಾರಿಸಿದ ಅವರು 9 ಭರ್ಜರಿ ಸಿಕ್ಸರ್ ಹೊಡೆದರು.
ಆರಂಭಿಕರಾದ ಶುಭಮನ್ ಗಿಲ್, ಕ್ರಿಸ್ ಲಿನ್, 3ನೇ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ಆ್ಯಂಡ್ರೆ ರಸೆಲ್ ಅವರ ಸ್ಫೋಟಕ ಅರ್ಧ ಶತಕ ಕೋಲ್ಕತಾ ಬ್ಯಾಟಿಂಗ್ ಸರದಿಯ ಆಕರ್ಷಣೆ ಆಗಿತ್ತು. ಶುಭಮನ್ ಗಿಲ್ 45 ಎಸೆತಗಳಿಂದ 76 ರನ್ ಬಾರಿಸಿದರು. ಇದರಲ್ಲಿ 6 ಬೌಂಡರಿ, 4 ಸಿಕ್ಸರ್ ಸೇರಿತ್ತು. ಲಿನ್ 29 ಎಸೆತಗಳನ್ನೆದುರಿಸಿ 54 ರನ್ ಸೂರೆಗೈದರು. ಸಿಡಿಸಿದ್ದು 8 ಬೌಂಡರಿ ಮತ್ತು 2 ಸಿಕ್ಸರ್.
ಹಿಂದಿನ ಕೆಲವು ಪಂದ್ಯಗಳಲ್ಲಿ ರನ್ ಬರಗಾಲ ಅನುಭವಿಸಿದ ರಸೆಲ್ ಇಲ್ಲಿ ನೈಜ ಆಟವಾಡಿ ಮುಂಬೈ ಬೌಲರ್‌ಗಳನ್ನು ಬೆಂಡೆತ್ತುತ್ತ ಹೋದರು. ಕೆಕೆಆರ್ ಇನ್ನಿಂಗ್ಸ್ ಮುಗಿಯುವಾಗ ರಸೆಲ್ 40 ಎಸೆತಗಳಿಂದ 80 ರನ್ ಬಾರಿಸಿ ಅಜೇಯರಾಗಿದ್ದರು. ಈ ಇನ್ನಿಂಗ್ಸ್ 8 ಸಿಕ್ಸರ್, 6 ಬೌಂಡರಿಗಳಿಂದ ರಂಗೇರಿಸಿಕೊಂಡಿತು.
ಇದು ಐಪಿಎಲ್‌ನಲ್ಲಿ ರಸೆಲ್ ಬಾರಿಸಿದ 8ನೇ ಅರ್ಧ ಶತಕವಾದರೆ, ಪ್ರಸಕ್ತ ಋತುವಿನಲ್ಲಿ ನಾಲ್ಕನೆಯದು. ದಿನೇಶ್ ಕಾರ್ತಿಕ್ 7 ಎಸೆತಗಳಿಂದ 15 ರನ್ ಮಾಡಿ ಔಟಾಗದೆ ಉಳಿದರು. ರಸೆಲ್-ಕಾರ್ತಿಕ್ ಜೋಡಿಯಿಂದ 4.4 ಓವರ್‌ಗಳಲ್ಲಿ 74 ರನ್ ಹರಿದು ಬಂತು.
ಗಿಲ್-ಲಿನ್ ಹತ್ತರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತ 9.3 ಓವರ್‌ಗಳಲ್ಲಿ 96 ರನ್ ಪೇರಿಸಿ ಭರ್ಜರಿ ಆರಂಭ ಒದಗಿಸಿದರು. ರಸೆಲ್ ಅವರನ್ನು ಕೂಡಿಕೊಂಡ ಗಿಲ್ ದ್ವಿತೀಯ ವಿಕೆಟಿಗೆ ಮತ್ತೆ 62 ರನ್ ಪೇರಿಸಿದರು. ಕೊನೆಯಲ್ಲಿ ಕಾರ್ತಿಕ್ ನೆರವು ಪಡೆದ ರಸೆಲ್ ರನ್ ಸುರಿಮಳೆಗೈದರು. ಮುಂಬೈ ಪರ 6 ಮಂದಿ ಬೌಲಿಂಗ್ ದಾಳಿಗಿಳಿದರೂ ಕೆಕೆಆರ್‌ಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲರಾದರು.
ಕೋಲ್ಕತಾ ನೈಟ್‌ರೈಡರ್
ಶುಭಮನ್ ಗಿಲ್ ಸಿ ಲೆವಿಸ್ ಬಿ ಹಾರ್ದಿಕ್ 76
ಕ್ರಿಸ್ ಲಿನ್ ಸಿ ಲೆವಿಸ್ ಬಿ ಚಹರ್ 54
ಆ್ಯಂಡ್ರೆ ರಸೆಲ್ ಔಟಾಗದೆ 80
ದಿನೇಶ್ ಕಾರ್ತಿಕ್ ಔಟಾಗದೆ 15
ಇತರ 7
ಒಟ್ಟು (2 ವಿಕೆಟಿಗೆ) 232
ವಿಕೆಟ್ ಪತನ: 1-96, 2-158.
ಬೌಲಿಂಗ್:
ಬರೀಂದರ್ ಸ್ರಾನ್ 2-0-27-0
ಕೃಣಾಲ್ ಪಾಂಡ್ಯ 3-0-27-0
ಲಸಿತ ಮಾಲಿಂಗ 4-0-48-0
ಜಸ್‌ಪ್ರೀತ್ ಬುಮ್ರಾ 4-0-44-0
ರಾಹುಲ್ ಚಹರ್ 4-0-54-1
ಹಾರ್ದಿಕ್ ಪಾಂಡ್ಯ 3-0-31-1
ಮುಂಬೈ ಇಂಡಿಯನ್ಸ್
ಕ್ವಿಂಟನ್ ಡಿ ಕಾಕ್ ಸಿ ರಸೆಲ್ ಬಿ ನಾರಾಯಣ್ 0
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ಗರ್ನಿ 12
ಎವಿನ್ ಲೆವಿಸ್ ಸಿ ಕಾರ್ತಿಕ್ ಬಿ ರಸೆಲ್ 15
ಸೂರ್ಯಕೆ. ಯಾದವ್ ಸಿ ಕಾರ್ತಿಕ್ ಬಿ ರಸೆಲ್ 26
ಕೈರನ್ ಪೊಲಾರ್ಡ್ ಸಿ ರಾಣ ಬಿ ನಾರಾಯಣ್ 20
ಹಾರ್ದಿಕ್ ಪಾಂಡ್ಯ ಸಿ ರಸೆಲ್ ಬಿ ಗರ್ನಿ 91
ಕೃಣಾಲ್ ಪಾಂಡ್ಯ ಸಿ ಮತ್ತು ಬಿ ಚಾವ್ಲಾ 24
ಬರೀಂದರ್ ಸ್ರಾನ್ ಔಟಾಗದೆ 3
ರಾಹುಲ್ ಚಾಹರ್ ಔಟಾಗದೆ 0
ಇತರ 6
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 198
ವಿಕೆಟ್ ಪತನ: 1-0, 2-21, 3-41, 4-58, 5-121, 6-185, 7-196
ಬೌಲಿಂಗ್:
ಸಂದೀಪ್ ವಾರಿಯರ್ 4-0-29-0
ಸುನೀಲ್ ನಾರಾಯಣ್ 4-0-44-2
ಹ್ಯಾರಿ ಗರ್ನಿ 4-0-37-2
ಆ್ಯಂಡ್ರೆ ರಸೆಲ್ 4-0-25-2
ಪೀಯೂಷ್ ಚಾವ್ಲಾ 4-0-57-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.