ಕೋಲ್ಕತಾಗೆ ಪಂಜಾಬ್‌ ಸವಾಲು

ಕ್ರಿಸ್‌ ಗೇಲ್‌, ಆ್ಯಂಡ್ರೆ ರಸೆಲ್‌ ಪ್ರಮುಖ ಆಕರ್ಷಣೆ

Team Udayavani, Mar 27, 2019, 7:16 AM IST

w-23

ಕೋಲ್ಕತಾ: ಈ ಬಾರಿಯ ಐಪಿಎಲ್‌ನ ಎರಡನೇ ಪಂದ್ಯದಲ್ಲಿ ರೋಚಕತೆಗೆ ಸಾಕ್ಷಿಯಾದ “ಈಡನ್‌ ಗಾರ್ಡನ್‌’ ಬುಧವಾರ ಮತ್ತೂಂದು ಪಂದ್ಯಕ್ಕೆ ಸಜ್ಜಾಗಿದೆ. ತಮ್ಮ ಮೊದಲ ಪಂದ್ಯ ಜಯಿಸಿದ ಹುಮ್ಮಸ್ಸಿನಲ್ಲಿರುವ ಕೆಕೆಆರ್‌ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಇಲ್ಲಿ ಮುಖಾಮುಖೀ ಯಾಗಲಿದ್ದು ಗೆಲುವಿನ ಉತ್ಸಾಹದಲ್ಲಿವೆ.

ಶ್ರೇಷ್ಠ ನಿರ್ವಹಣೆ ನೀಡಿ ಮೊದಲ ಪಂದ್ಯ ಗೆದ್ದಿರುವ ಕೆಕೆಆರ್‌ ಮತ್ತು ಪಂಜಾಬ್‌ ಬಲಿಷ್ಠವಾಗಿ ಗೋಚರಿಸಿವೆ. ಕೆಕೆಆರ್‌ ರವಿವಾರದ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 6 ವಿಕೆಟ್‌ಗಳಿಂದ ಸೋಲಿ ಸಿತ್ತು. ಆ ಪಂದ್ಯದಲ್ಲಿ ಕೆಕೆಆರ್‌ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಲು ವಿಫ‌ಲವಾದರೂ ನಿತೀಶ್‌ ರಾಣ ಮತ್ತು ಆ್ಯಂಡ್ರೆ ರಸೆಲ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಜಯ ಸಾಧಿಸಿತ್ತು. ಪಂಜಾಬ್‌ ತಂಡ ಜೈಪುರದಲ್ಲಿ ರಾಜಸ್ಥಾನ್‌ವನ್ನು 14 ರನ್‌ಗಳಿಂದ ಸೋಲಿಸಿತ್ತು. ಇಲ್ಲಿ ಕ್ರಿಸ್‌ ಗೇಲ್‌ ಅವರ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದ ಸಂಘಟಿತ ಪ್ರದರ್ಶನ ತಂಡದ ಕೈಹಿಡಿದಿತ್ತು. ಇದೀಗ ಎರಡನೇ ಪಂದ್ಯಕ್ಕೆ ಎರಡೂ ತಂಡಗಳು ಸಿದ್ಧವಾಗಿವೆ.

ಗೇಲ್‌, ರಸೆಲ್‌ ಪ್ರಮುಖ ಆಕರ್ಷಣೆ
ಕೆರಿಬಿಯನ್‌ ದೈತ್ಯರಾದ ಕ್ರಿಸ್‌ ಗೇಲ್‌ ಮತ್ತು ಆ್ಯಂಡ್ರೆ ರಸೆಲ್‌ ಈಗಾಗಲೇ ತಮ್ಮ ಮೊದಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಕೋಲ್ಕತಾ ತಂಡಕ್ಕೆ ರಸೆಲ್‌ ಆಸರೆಯಾದರೆ ಪಂಜಾಬ್‌ಗ ಗೇಲ್‌ ಬಲ. ಇವರಿಬ್ಬರೂ ಮೊದಲ ಪಂದ್ಯದಲ್ಲಿÉ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಬುಧವಾರ ರಾತ್ರಿ ನಡೆಯುವ ಆಟದಲ್ಲಿ ಇವರಿಬ್ಬರ ಆಟ ಪ್ರಮುಖ ಆಕರ್ಷಣೆ. ಹೀಗಾಗಿ ಅವರಿಬ್ಬರ ಆಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕೋಲ್ಕತಾಗೆ ಬ್ಯಾಟಿಂಗ್‌ ಬಲ
ಕೋಲ್ಕತಾ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ನಿತೀಶ್‌ ರಾಣ, ಆ್ಯಂಡ್ರೆ ರಸೆಲ್‌, ಉತ್ತಪ್ಪ ಈಗಾಗಲೇ ತಮ್ಮ ಬಲವನ್ನು ತೋರ್ಪಡಿಸಿದ್ದಾರೆ. ಕ್ರಿಸ್‌ ಲಿನ್‌, ದಿನೇಶ್‌ ಕಾರ್ತಿಕ್‌, ಶುಬ್‌ಮನ್‌ ಗಿಲ್‌ ಮೊದಲ ಪಂದ್ಯದಲ್ಲಿ ಎಡವಿದ್ದರೂ ದ್ವಿತೀಯ ಪಂದ್ಯದಲ್ಲಿ ಸಿಡಿಯುವ ವಿಶ್ವಾಸದಲ್ಲಿದ್ದಾರೆ. ಉತ್ತಮ ಬೌಲರ್‌ಗಳಿದ್ದರೂ ಮೊದಲ ಪಂದ್ಯದಲ್ಲಿ ಆಲ್‌ರೌಂಡರ್‌ ರಸೆಲ್‌ ಹೊರತುಪಡಿಸಿ ಉಳಿದ ಬೌಲರ್‌ಗಳು ಮೋಡಿ ಮಾಡಿರಲಿಲ್ಲ. ಯಾದವ್‌, ಚಾವ್ಲಾ, ಸುನಿಲ್‌ ನಾರಾಯಣ್‌ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗಿದ್ದರು.

ಇತ್ತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪಂಜಾಬ್‌ ಬಲಿಷ್ಠವಾಗಿದೆ. ಕ್ರಿಸ್‌ ಗೇಲ್‌, ಮಾಯಾಂಕ್‌ ಅಗರ್ವಾಲ್‌, ಸಫ‌ìರಾಜ್‌ ಖಾನ್‌, ನಿಕೋಲಸ್‌ ಪೂರನ್‌ ಮತ್ತೂಮ್ಮೆ ಸಿಡಿಯಲು ಸಿದ್ಧರಾಗಿದ್ದಾರೆ. ರಾಜಸ್ಥಾನ ವಿರುದ್ಧ ಮುಗ್ಗರಿಸಿದ ಕನ್ನಡಿಗ ರಾಹುಲ್‌ ಈ ಪಂದ್ಯದ ಮೂಲಕ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಅನುಭವಿ ಬೌಲರ್‌ಗಳಾದ ಅಶ್ವಿ‌ನ್‌, ಮಹಮ್ಮದ್‌ ಶಮಿ ಜತೆಗೆ ಯುವ ಬೌಲರ್‌ಗಳಾದ ಅಂಕಿತ್‌ ರಜಪೂತ್‌, ಸ್ಯಾಮ್‌ ಕರನ್‌ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯಹೊಂದಿದ್ದಾರೆ.

ಕೆಕೆಆರ್‌-ಪಂಜಾಬ್‌ ಇಲ್ಲಿಯ ವರೆಗೆ 23 ಬಾರಿ ಎದುರಾಗಿವೆ. ಇದರಲ್ಲಿ ಕೆಕೆಆರ್‌ 15 ಪಂದ್ಯ ಗೆದ್ದಿದ್ದರೆ, ಪಂಜಾಬ್‌ 8 ಪಂದ್ಯವಷ್ಟೇ ಜಯಿಸಿದೆ. ಪಂಜಾಬ್‌ ಈಡನ್‌ನಲ್ಲಿ 3 ಬಾರಿಯಷ್ಟೇ ಗೆಲುವು ಸಾಧಿಸಿದೆ. ಹೀಗಾಗಿ ಕೋಲ್ಕತಾಗೆ ತವರಿನಂಗಳದ ಆಟ ಹೆಚ್ಚು ನೆಚ್ಚಿನದ್ದಾಗಿದೆ.

ಟಾಪ್ ನ್ಯೂಸ್

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ

Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ

Raichuru-hospi

ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Kinnigoli: ರಿಕ್ಷಾ ಪಲ್ಟಿ; ಚಾಲಕ ಗಂಭೀರ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

WhatsApp Image 2025-01-01 at 19.31.55

Udupi: ಅಸ್ವಸ್ಥಗೊಂಡ ರೈಲು ಪ್ರಯಾಣಿಕೆ ಸಾವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

6

Udupi: ಗಾಂಜಾ ಸೇವನೆ; ಓರ್ವ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.