ಆರ್‌ಸಿಬಿ ಮೇಲೆ ವಿಶ್ವಾಸ ಮೂಡಿದೆ
Team Udayavani, Apr 15, 2019, 9:28 AM IST
ಮುಂಬಯಿ: ಶನಿವಾರವಷ್ಟೇ ಈ ಬಾರಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿಗೆ ಒಂದೇ ದಿನದ ವಿರಾಮದ ಬಳಿಕ ಮತ್ತೂಂದು ಪ್ರಬಲ ಸವಾಲು ಎದುರಾಗಿದೆ. ಸೋಮವಾರ ರಾತ್ರಿ ವಾಂಖೇಡೆ ಸ್ಟೇಡಿಯಂನಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ ಕೊಹ್ಲಿ ಪಡೆ ಸೆಣಸಲಿದೆ. ಆರ್‌ಸಿಬಿ ಮೇಲೀಗ ವಿಶ್ವಾಸ ಮೂಡಿರುವುದರಿಂದ ಪಂದ್ಯದ ಕುತೂಹಲ ಸಹಜವಾಗಿಯೇ ತೀವ್ರಗೊಂಡಿದೆ.
ಇದು ಮುಂಬೈಗೆ ತವರಿನ ಪಂದ್ಯವಾದರೂ ಆರ್‌ಸಿಬಿಗೆ ಸೇಡಿನ ಪಂದ್ಯ. ಮೊದಲ ಸುತ್ತಿನ ಮುಖಾಮುಖೀಯಲ್ಲಿ ಆರ್‌ಸಿಬಿ ತವರಿನ ಚಿನ್ನಸ್ವಾಮಿ ಅಂಗಳದಲ್ಲಿ ಕೇವಲ 6 ರನ್ನುಗಳಿಂದ ಎಡವಿತ್ತು. ಎಬಿಡಿ ಕ್ರೀಸಿನಲ್ಲಿದ್ದರೂ ಗೆಲುವು ಮರೀಚಿಕೆ ಆಗಿತ್ತು. ಲಸಿತ ಮಾಲಿಂಗ ಅವರ ಕೊನೆಯ ಎಸೆತ ನೋಬಾಲ್ ಆಗಿದ್ದರೂ ಅಂಪಾಯರ್ ಮೌನ ವಹಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಇದಕ್ಕೆಲ್ಲ ಸೇಡು ತೀರಿಸಿಕೊಳ್ಳಲು ಆರ್‌ಸಿಬಿಗೆ ಇದು ಪ್ರಶಸ್ತ ಸಮಯ.
ವಾಂಖೇಡೆಯಲ್ಲಿ ಈ ಬಾರಿ 4 ಪಂದ್ಯ ಆಡಿರುವ ಮುಂಬೈ, ಎರಡನ್ನು ಗೆದ್ದು ಉಳಿದೆರಡರಲ್ಲಿ ಸೋತಿದೆ. ಡೆಲ್ಲಿ ಮತ್ತು ರಾಜಸ್ಥಾನ್ ಸೋಲಿನ ಆಘಾತವಿಕ್ಕಿವೆ. ರಾಯಲ್ ಚಾಲೆಂಜರ್ ಕೂಡ ಇಂಥದೇ ಸಾಧನೆಯನ್ನು ದಾಖಲಿಸಬೇಕಿದೆ.
ಗೆದ್ದರೂ ಸಮಸ್ಯೆ ಇದೆ…
ಸತತ ಸೋಲಿನಿಂದ ಹೊರಬಂದಿರುವ ಆರ್‌ಸಿಬಿಗೆ ಶನಿವಾರದ ಗೆಲುವು ಸ್ಫೂರ್ತಿ ಆಗಬೇಕಿದೆ. ಜತೆಗೆ ಸೇಡು ತೀರಿಸುವ ಛಲ ಮೂಡಬೇಕಿದೆ. ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲಿಷ್ಠವಾಗಿದೆ. ಮಿಡ್ಲ್ ಆರ್ಡರ್ ಬ್ಯಾಟಿಂಗ್‌ನಲ್ಲಿ ನಂಬಿಕೆ ಸಾಲದು. ಬೌಲಿಂಗ್ ಘಾತಕವಲ್ಲ. ಫೀಲ್ಡಿಂಗ್ ತೀರಾ ಕಳಪೆ. ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವುದು ಹವ್ಯಾಸವೇ ಆಗಿದೆ. ಈ ತಪ್ಪನ್ನು ತಿದ್ದಿಕೊಂಡಲ್ಲಿ ಆರ್‌ಸಿಬಿಗೆ ಗೆಲುವು ಕಷ್ಟವಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.