ಗೆಲುವಿನ ಖಾತೆ ತೆರೆದ ಆರ್‌ಸಿಬಿ


Team Udayavani, Apr 14, 2019, 9:29 AM IST

virat

ಮೊಹಾಲಿ: ಕೊನೆಗೂ ಆರ್‌ಸಿಬಿ 12ನೇ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಸತತ 6 ಸೋಲುಗಳ ಬಳಿಕ ಶನಿವಾರ ಇಲ್ಲಿ ನಡೆದ ತನ್ನ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಕೊಹ್ಲಿ ಪಡೆ 8 ವಿಕೆಟ್‌ಗಳಿಂದ ಪಂಜಾಬ್‌ಗ ಸೋಲುಣಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಆತಿಥೇಯ ಪಂಜಾಬ್‌ 4 ವಿಕೆಟಿಗೆ 173 ರನ್‌ ಗಳಿಸಿದರೆ, ಆರ್‌ಸಿಬಿ 2 ವಿಕೆಟಿಗೆ 174 ರನ್‌ ಮಾಡಿ ಗೆದ್ದು ಬಂದಿತು.

ನಾಯಕ ವಿರಾಟ್‌ ಕೊಹ್ಲಿ ಮತ್ತು ಎಬಿಡಿ ನಡುವಿನ ಅಮೋಘ ಜತೆಯಾಟ ಆರ್‌ಸಿಬಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಕೊಹ್ಲಿ 67 ರನ್‌, ಎಬಿಡಿ ಅಜೇಯ 59 ರನ್‌ ಹೊಡೆದರು. ಪಂಜಾಬ್‌ ಸರದಿಯಲ್ಲಿ ಗೇಲ್‌ ಅಜೇಯ 99 ರನ್‌ ಮಾಡಿ ಮಿಂಚಿದರು. ಕೊನೆಯ ಎಸೆತದ ತನಕ ಕ್ರೀಸ್‌ ಆಕ್ರಮಿಸಿಕೊಂಡು ಆರ್‌ಸಿಬಿ ಬೌಲಿಂಗಿಗೆ ದಿಟ್ಟ ರೀತಿಯಲ್ಲಿ ಜವಾಬು ನೀಡುತ್ತ ಹೋದರು. ಮೊಹಮ್ಮದ್‌ ಸಿರಾಜ್‌ ಎಸೆದ ಅಂತಿಮ ಓವರಿನ ಅಂತಿಮ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರೆ ಗೇಲ್‌ ಸೆಂಚುರಿ ಪೂರೈಸಬಹುದಿತ್ತು. ಆದರೆ ಇದರಲ್ಲಿ ಬೌಂಡರಿ ಬಂತು. ಜಮೈಕಾ ದೈತ್ಯನಿಗೆ ಒಂದು ರನ್ನಿನಿಂದ ಸೆಂಚುರಿ ತಪ್ಪಿತು. ಗೇಲ್‌ ಐಪಿಎಲ್‌ ಇತಿಹಾಸದಲ್ಲಿ 2 ಸಲ 99 ರನ್‌ ಮಾಡಿ ಔಟಾಗದೆ ಉಳಿದ 2ನೇ ಆಟಗಾರ. ಸುರೇಶ್‌ ರೈನಾ ಮೊದಲಿಗ.

64 ಎಸೆತ ಎದುರಿಸಿದ ಕ್ರಿಸ್‌ ಗೇಲ್‌ 10 ಬೌಂಡರಿ, 5 ಭರ್ಜರಿ ಸಿಕ್ಸರ್‌ ನೆರವಿನಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಅವರ ಈ ಓಟದಲ್ಲಿ ಆರ್‌ಸಿಬಿ ಫೀಲ್ಡರ್‌ಗಳ ನೆರವಿನ ಪಾಲೂ ಇತ್ತು. 83 ರನ್‌ ಮಾಡಿದ್ದಾಗ ಸ್ವತಃ ವಿರಾಟ್‌ ಕೊಹ್ಲಿಯೇ ಕ್ಯಾಚ್‌ ಒಂದನ್ನು ಕೈಚೆಲ್ಲಿದ್ದರು. ಕ್ರಿಸ್‌ ಗೇಲ್‌-ಕೆ.ಎಲ್‌. ರಾಹುಲ್‌ ಓವರಿಗೆ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸುತ್ತ ಭರ್ಜರಿ ಆರಂಭ ನೀಡಿದರು. ಇವರಿಂದ 6.2 ಓವರ್‌ಗಳಲ್ಲಿ 66 ರನ್‌ ಒಟ್ಟುಗೂಡಿತು. ರಾಹುಲ್‌ (18) ಔಟಾದ ಬಳಿಕ ಬಂದ ಕರ್ನಾಟಕದ ಮತ್ತೂಬ್ಬ ಆಟಗಾರ ಮಾಯಾಂಕ್‌ ಅಗರ್ವಾಲ್‌ 9 ಎಸೆತಳಿಂದ 15 ರನ್‌ ಹೊಡೆದರು.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆ.ಎಲ್‌. ರಾಹುಲ್‌ ಸ್ಟಂಪ್ಡ್ ಪಾರ್ಥಿವ್‌ ಬಿ ಚಾಹಲ್‌ 18
ಕ್ರಿಸ್‌ ಗೇಲ್‌ ಔಟಾಗದೆ 99
ಮಾಯಾಂಕ್‌ ಅಗರ್ವಾಲ್‌ ಬಿ ಚಾಹಲ್‌ 15
ಸಫ‌ìರಾಜ್‌ ಖಾನ್‌ ಸಿ ಪಾರ್ಥಿವ್‌ ಬಿ ಸಿರಾಜ್‌ 15
ಸ್ಯಾಮ್‌ ಕರನ್‌ ಎಲ್‌ಬಿಡಬ್ಲ್ಯು ಮೊಯಿನ್‌ 1
ಮನ್‌ದೀಪ್‌ ಸಿಂಗ್‌ ಔಟಾಗದೆ 18
ಇತರ 7
ಒಟ್ಟು (4 ವಿಕೆಟಿಗೆ) 173
ವಿಕೆಟ್‌ ಪತನ: 1-66, 2-86, 3-110, 4-113.
ಬೌಲಿಂಗ್‌:
ಉಮೇಶ್‌ ಯಾದವ್‌ 4-0-42-0
ನವದೀಪ್‌ ಸೈನಿ 4-0-23-0
ಮೊಹಮ್ಮದ್‌ ಸಿರಾಜ್‌ 4-0-54-1
ಯಜುವೇಂದ್ರ ಚಾಹಲ್‌ 4-0-33-2
ಮೊಯಿನ್‌ ಅಲಿ 4-0-19-1

ರಾಯಲ್‌ ಚಾಲೆಂಜರ್ ಬೆಂಗಳೂರು
ಪಾರ್ಥಿವ್‌ ಪಟೇಲ್‌ ಸಿ ಅಗರ್ವಾಲ್‌ ಬಿ ಅಶ್ವಿ‌ನ್‌ 19
ವಿರಾಟ್‌ ಕೊಹ್ಲಿ ಸಿ ಎಂ. ಅಶ್ವಿ‌ನ್‌ ಬಿ ಶಮಿ 67
ಎಬಿ ಡಿ ವಿಲಿಯರ್ ಔಟಾಗದೆ 59
ಸ್ಟೋಯಿನಿಸ್‌ ಔಟಾಗದೆ 28
ಇತರ 1
ಒಟ್ಟು ( 19.2 ಓವರ್‌ಗಳಲ್ಲಿ 2 ವಿಕೆಟ್‌ಗೆ) 174
ವಿಕೆಟ್‌ ಪತನ: 1-43, 2-128
ಬೌಲಿಂಗ್‌:
ಸ್ಯಾಮ್‌ ಕರನ್‌ 3-0-31-0
ಮೊಹಮ್ಮದ್‌ ಶಮಿ 4-0-43-1
ಆರ್‌. ಅಶ್ವಿ‌ನ್‌ 4-0-30-1
ಮುರುಗನ್‌ ಅಶ್ವಿ‌ನ್‌ 4-0-24-0
ಆ್ಯಂಡ್ರೂ ಟೈ 4-0-40-0
ಸಫ‌ìರಾಜ್‌ ಖಾನ್‌ 0.2-0-6-0

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.