ಆರ್‌ಸಿಬಿಗೆ ಮತ್ತೆ ಸೋಲು
Team Udayavani, Apr 16, 2019, 9:49 AM IST
ಮುಂಬಯಿ: ಆರ್‌ಸಿಬಿ ಮತ್ತೆ ಸೋಲಿನತ್ತ ಮುಖ ಮಾಡಿದೆ. ಸೋಮವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕೊಹ್ಲಿ ಪಡೆ 5 ವಿಕೆಟ್‌ಗಳಿಂದ ಎಡವಿ ಕೂಟದಿಂದ ಬಹುತೇಕ ಹೊರಬಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 171 ರನ್ ಮಾಡಿದರೆ, ಮುಂಬೈ 19 ಓವರ್‌ಗಳಲ್ಲಿ 5 ವಿಕೆಟಿಗೆ 172 ರನ್ ಬಾರಿಸಿ ಜಯ ಸಾಧಿಸಿತು.
ಎಬಿ ಡಿ ವಿಲಿಯರ್ (75) ಮತ್ತು ಮೊಯಿನ್ ಅಲಿ (50) ಅವರ ಅರ್ಧ ಶತಕದ ನೆರವಿನಿಂದ ಆರ್‌ಸಿಬಿ ಸವಾಲಿನ ಸ್ಕೋರ್ ದಾಖಲಿಸಿತು. ನಾಯಕ ವಿರಾಟ್ ಕೊಹ್ಲಿ (8) ಬಹಳ ಬೇಗನೇ ಔಟಾದುದರಿಂದ ಮುಂಬೈ ಆರಂಭಿಕ ಮೇಲುಗೈ ಸಾಧಿಸಿತು. ಬಹಳ ಜೋಶ್‌ನಲ್ಲಿದ್ದ ಮತ್ತೂಬ್ಬ ಆರಂಭಕಾರ ಪಾರ್ಥಿವ್ ಪಟೇಲ್ 20 ಎಸೆತಗಳಿಂದ 28 ರನ್ ಬಾರಿಸಿ ನಿರ್ಗಮಿಸಿದರು (4 ಬೌಂಡರಿ, 1 ಸಿಕ್ಸರ್). 7ನೇ ಓವರ್ ಮುಕ್ತಾಯಕ್ಕೆ 49 ರನ್ನಿಗೆ ಆರ್‌ಸಿಬಿಯ 2ನೇ ವಿಕೆಟ್ ಬಿತ್ತು. ಇದು ಹಾರ್ದಿಕ್ ಪಾಂಡ್ಯ ಪಾಲಾಯಿತು.
3ನೇ ವಿಕೆಟಿಗೆ ಜತೆಗೂಡಿದ ಡಿ ವಿಲಿಯರ್ ಮತ್ತು ಮೊಯಿನ್ ಅಲಿ 95 ರನ್ ಒಟ್ಟುಗೂಡಿಸಿತು. ಮೊಯಿನ್ ಅಲಿ 32 ಎಸೆತಗಳಿಂದ ಭರ್ತಿ 50 ರನ್ ಬಾರಿಸಿದರು. ಸಿಡಿಸಿದ್ದು 5 ಸಿಕ್ಸರ್ ಮತ್ತು ಒಂದು ಬೌಂಡರಿ. ಕೊನೆಯ ಓವರ್ ತನಕ ಕ್ರೀಸ್‌ನಲ್ಲಿದ್ದ ಎಬಿಡಿ 51 ಎಸೆತಗಳಿಂದ 75 ರನ್ ಬಾರಿಸಿದರು. ಪೊಲಾರ್ಡ್ ಅವರ ನೇರ ತ್ರೋಗೆ ರನೌಟಾದರು.
ರಾಯಲ್ ಚಾಲೆಂಜರ್ ಬೆಂಗಳೂರು
ಪಾರ್ಥಿವ್ ಪಟೇಲ್ ಸಿ ಯಾದವ್ ಬಿ ಹಾರ್ದಿಕ್ 28
ವಿರಾಟ್ ಕೊಹ್ಲಿ ಸಿ ಡಿ ಕಾಕ್ ಬಿ ಬೆಹೆಡಾಫ್ì 8
ಎಬಿ ಡಿ ವಿಲಿಯರ್ ರನೌಟ್ 75
ಮೊಯಿನ್ ಅಲಿ ಸಿ ಹಾರ್ದಿಕ್ ಬಿ ಮಾಲಿಂಗ 50
ಮಾರ್ಕಸ್ ಸ್ಟೋಯಿನಿಸ್ ಬಿ ಮಾಲಿಂಗ 0
ಅಕ್ಷದೀಪ್‌ನಾಥ್ ಸಿ ಡಿ ಕಾಕ್ ಬಿ ಮಾಲಿಂಗ 2
ಪವನ್ ನೇಗಿ ಡಿ ಕಾಕ್ ಬಿ ಮಾಲಿಂಗ 0
ಉಮೇಶ್ ಯಾದವ್ ಔಟಾಗದೆ 0
ಮೊಹಮ್ಮದ್ ಸಿರಾಜ್ ಔಟಾಗದೆ 0
ಇತರ 8
ಒಟ್ಟು (7 ವಿಕೆಟಿಗೆ) 171
ವಿಕೆಟ್ ಪತನ: 1-12, 2-49, 3-144, 4-151, 5-169, 6-169, 7-169.
ಬೌಲಿಂಗ್: ಜಾಸನ್ ಬೆಹೆಡಾಫ್ì 4-0-49-1
ಲಸಿತ ಮಾಲಿಂಗ 4-0-31-4
ಜಸ್‌ಪ್ರೀತ್ ಬುಮ್ರಾ 4-1-22-0
ಹಾರ್ದಿಕ್ ಪಾಂಡ್ಯ 3-0-21-1
ರಾಹುಲ್ ಚಹರ್ 4-0-31-0
ಕೃಣಾಲ್ ಪಾಂಡ್ಯ 1-0-10-0
ಮುಂಬೈ ಇಂಡಿಯನ್ಸ್
ಕ್ವಿಂಟನ್ ಡಿ ಕಾಕ್ ಎಲ್‌ಬಿಡಬ್ಲ್ಯು ಮೊಯಿನ್ 40
ರೋಹಿತ್ ಶರ್ಮ ಬಿ ಮೊಯಿನ್ 28
ಸೂರ್ಯಕುಮಾರ್ ಸಿ ಸೈನಿ ಬಿ ಚಾಹಲ್ 29
ಇಶಾನ್ ಕಿಶನ್ ಸ್ಟಂಪ್ಡ್ ಪಾರ್ಥಿವ್ ಬಿ ಚಾಹಲ್ 21
ಕೃಣಾಲ್ ಪಾಂಡ್ಯ ಸಿ ಮಿಲಿಂದ್ ಬಿ ಸಿರಾಜ್ 11
ಹಾರ್ದಿಕ್ ಪಾಂಡ್ಯ ಔಟಾಗದೆ 37
ಕೈರನ್ ಪೊಲಾರ್ಡ್ ಔಟಾಗದೆ 0
ಇತರ 6
ಒಟ್ಟು (19 ಓವರ್‌ಗಳಲ್ಲಿ 5 ವಿಕೆಟಿಗೆ) 172
ವಿಕೆಟ್ ಪತನ: 1-70, 2-71, 3-104, 4-129, 5-148.
ಬೌಲಿಂಗ್: ಉಮೇಶ್ ಯಾದವ್ 2-0-25-0
ನವದೀಪ್ ಸೈನಿ 3-0-34-0
ಮೊಹಮ್ಮದ್ ಸಿರಾಜ್ 2-0-21-1
ಯಜುವೇಂದ್ರ ಚಾಹಲ್ 4-0-27-2
ಪವನ್ ನೇಗಿ 4-0-47-0
ಮೊಯಿನ್ ಅಲಿ 4-0-18-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.