ತಾಹಿರ್‌,ಹರ್ಭಜನ್‌, ಹಳೆಯ ವೈನ್‌ನಂತೆ: ಧೋನಿ


Team Udayavani, Apr 11, 2019, 6:30 AM IST

dhoni-2

ಚೆನ್ನೈ: ಹರ್ಭಜನ್‌ ಸಿಂಗ್‌ ಮತ್ತು ಇಮ್ರಾನ್‌ ತಾಹಿರ್‌ ವಯಸ್ಸೆಂಬುದು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಧೋನಿ ಇವರಿಬ್ಬರ ಪ್ರಬುದ್ಧತೆಯನ್ನು ಹಳೆಯ ವೈನ್‌ಗೆ ಹೋಲಿಸಿದ್ದಾರೆ.

ಮಂಗಳವಾರ ಕೆಕೆಆರ್‌ ವಿರುದ್ಧ ಪಂದ್ಯ ಗೆದ್ದ ಬಳಿಕ 37 ವರ್ಷದ ಧೋನಿ ಹರ್ಭಜನ್‌ ಹಾಗೂ ತಾಹಿರ್‌ ಅವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
“ವಯಸ್ಸು ಅವರ ಬಳಿಯಿದೆ. ಅವರಿಬ್ಬರೂ ಹಳೆಯ ವೈನ್‌ ಇದ್ದಂತೆ ಮತ್ತು ಸಮಯದೊಂದಿಗೆ ಪ್ರಬುದ್ಧತೆ ಪಡೆಯುತ್ತಿದ್ದಾರೆ. ಭಜ್ಜಿ (ಹರ್ಭಜನ್‌) ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಾಹಿರ್‌ ಅವರಿಂದಲೂ ಅಗತ್ಯ ಇದ್ದಾಗಲೆಲ್ಲ ಅತ್ಯುತ್ತಮ ಪ್ರದರ್ಶನ ಬರುತ್ತಿದೆ. ಬೌಲಿಂಗ್‌ ವಿಭಾಗ ಉತ್ತಮ ಲಯದಲ್ಲಿದೆ. ತಾಹಿರ್‌ ಉತ್ತಮ ಕೆಲಸ ಮಾಡುತ್ತಿದ್ದು, ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ’ ಎಂದು ಧೋನಿ ಹೇಳಿದ್ದಾರೆ.

ಚೆನ್ನೈ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ
ನಿಧಾನಗತಿಯ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 108 ರನ್‌ ಬಾರಿಸಿತು. ಈ ಅಲ್ಪ ರನ್‌ಗಳ ಗುರಿಯನ್ನು ಚೆನ್ನೈ17.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಬೆನ್ನಟ್ಟಿತು. ಈ ಮೂಲಕ ಚೆನ್ನೈ ಅಂಕಪಟ್ಟಿಯಲ್ಲಿ ಮತ್ತೂಮ್ಮೆ ಅಗ್ರಸ್ಥಾನಕ್ಕೇರಿ ಸಂಭ್ರಮಿಸಿದೆ. ಒಟ್ಟು 6 ಪಂದ್ಯಗಳನ್ನಾಡಿರುವ ಚೆನ್ನೈ ಬಿಟ್ಟುಕೊಟ್ಟಿದ್ದು ಒಂದು ಪಂದ್ಯ ಮಾತ್ರ.

ದೀಪಕ್‌ ಚಹರ್‌ ಮೋಡಿ
ಮೊದಲ ಪಂದ್ಯದಿಂದಲೂ ಹೊಡಿಬಡಿ ಆಟಕ್ಕಿಳಿಯುತ್ತಿದ್ದ ಕೆಕೆಆರ್‌ ಉಳಿದ ತಂಡಗಳಲ್ಲಿ ಸ್ಪಲ್ಪ ಹೆದರಿಕೆ ಹುಟ್ಟಿಸಿತ್ತು. ಆದರೆ ಹಾಲಿ ಚಾಂಪಿಯನ್‌ ಚೆನ್ನೈ ಆಟದ ಎದುರು ಮಂಕಾದ ಕೆಕೆಆರ್‌ ಐಪಿಎಲ್‌ ಇತಿಹಾಸದಲ್ಲೇ 20 ಓವರ್‌ಗಳಲ್ಲಿ ಅತಿ ಕಡಿಮೆ ರನ್‌ ದಾಖಲಿಸಿತು.

ಕೆಕೆಆರ್‌ ಆಟಕ್ಕೆ ಬ್ರೇಕ್‌ ಹಾಕಿದವರು ದೀಪಕ್‌ ಚಹರ್‌. 4 ಓವರ್‌ಗಳಲ್ಲಿ 20 ರನ್‌ ನೀಡಿ 3 ವಿಕೆಟ್‌ ಕಬಳಿಸಿದ ಚಹರ್‌ ಕೆಕೆಆರ್‌ ಅನ್ನು ಕಾಡಿದರು. ಚಹರ್‌ ಎಸೆದ ನಾಲ್ಕು ಓವರ್‌ಗಳಲ್ಲಿ 20 ಡಾಟ್‌ ಬಾಲ್‌ಗ‌ಳೇ ಸೇರಿವೆ. ಮೊದಲ ಓವರ್‌ನಲ್ಲೇ ಆರಂಭಕಾರ ಕ್ರಿಸ್‌ ಲಿನ್‌ ಅವರನ್ನು ಪೆವಿಲಿಯನ್‌ಗಟ್ಟಿದ ಚಹರ್‌ ಕೋಲ್ಕತಾದ ದೊಡ್ಡ ದೊಡ್ಡ ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. ಉಳಿದಂತೆ ಹರ್ಭಜನ್‌ ಸಿಂಗ್‌,ಇಮ್ರಾನ್‌ ತಾಹಿರ್‌ ಬೌಲಿಂಗ್‌ನಲ್ಲಿ ಮಿಂಚಿದರು.

“ಚಿಪಾಕ್‌ ಪಿಚ್‌’ ಬಗ್ಗೆ ಮಹೇಂದ್ರ ಸಿಂಗ್‌ ಧೋನಿ ಅಸಮಾಧಾನ
ಚೆನ್ನೈ ಸೂಪರ್‌ ಕಿಂಗ್ಸ್‌ ತವರಿನ 4 ಪಂದ್ಯಗಳಲ್ಲೂ ಗೆಲುವು ದಾಖಲಿಸಿದ್ದರೂ “ಚಿಪಾಕ್‌ ಪಿಚ್‌’ ಮೇಲೆ ಧೋನಿಗಿರುವ ಅಸಮಾಧಾನವಿನ್ನೂ ಕಡಿಮೆಯಾಗಿಲ್ಲ. “ಈ ಟ್ರ್ಯಾಕ್ಸ್‌ನಲ್ಲಿ ನಾವು ಆಡಬೇಕೆಂದು ಬಯಸುವುದಿಲ್ಲ. ಇದು ನಿಧಾನಗತಿಯ ರನ್‌ಗೆ ಕಾರಣವಾಗಿದೆ. ನಮ್ಮ ಬ್ಯಾಟ್ಸಮನ್‌ಗಳಿಗೂ ಸಲ್ಪ ಕಷ್ಟವಾಗುತ್ತದೆ. ಬ್ರಾವೊ ಅವರ ವಿಕೆಟ್‌ ಹೋದ ಅನಂತರ ನಮಗೆ ಸರಿಯಾದ ಸಂಯೋಜನೆ ಕಂಡುಕೊಳ್ಳಲು ಸಮಸ್ಯೆಯಾಯಿತು. ಇಲ್ಲಿನ ಟ್ರ್ಯಾಕ್‌ ಬಗ್ಗೆ ಹೇಳುತ್ತಲೇ ಕೊನೆಯಲ್ಲಿ ಗೆದ್ದು ಬಂದೆವು’ ಎಂದು ಧೋನಿ ಪಿಚ್‌ ಬಗ್ಗೆ ಹೇಳಿದ್ದಾರೆ

ಎಕ್ಸ್‌ಟ್ರಾ ಇನ್ನಿಂಗ್ಸ್‌
ಜ ಕೋಲ್ಕತಾ ನೈಟರ್‌ ರೈಡರ್ ಐಪಿಎಲ್‌ನಲ್ಲಿ 20 ಓವರ್‌ಗಳಲ್ಲಿ ಹೊಡೆದಿರುವ ಅತಿ ಕಡಿಮೆ ಮೊತ್ತ 108/9. 2013ರ ಆವೃತ್ತಿಯಲ್ಲಿ ಕೋಲ್ಕತಾ ಪಂದ್ಯದಲ್ಲಿ ಚೆನ್ನೈ ವಿರುದ್ಧ 20 ಓವರ್‌ಗಳಲ್ಲಿ 119/9 ಹೊಡೆದಿರುವುದು ಹಿಂದಿನ ದಾಖಲೆ.
ಜ ಸಂಪೂರ್ಣ 20 ಓವರ್‌ಗಳಲ್ಲಿ ಚೆನ್ನೈ ನೀಡಿದ 3ನೇ ಅತೀ ಕಡಿಮೆ ಮೊತ್ತ ಇದಾಗಿದೆ. ಚೆನ್ನೈ ವಿರುದ್ಧ 2009 ಮತ್ತು 2015ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 20 ಓವರ್‌ಗಳಲ್ಲಿ ಕ್ರಮವಾಗಿ 92/8, 95/9 ಗಳಿಸಿರುವುದು ಹಿಂದಿನ ನಿದರ್ಶನ.

– ಈ ಪಂದ್ಯದ ದೀಪಕ್‌ ಚಹರ್‌ ಎಸೆದ 4 ಓವರ್‌ಗಳಲ್ಲಿ 20 ಡಾಟ್‌ ಬಾಲ್‌ಗ‌ಳು ದಾಖಲಾಗಿವೆೆ. ಒಂದು ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಇಂಥಹ ದಾಖಲೆಯೂ ಇದೇ ಮೊದಲು. ಬೌಲರ್‌ ಒಬ್ಬ 19 ಡಾಟ್‌ ಬಾಲ್‌ ಎಸೆದ ಅನೇಕ ನಿರ್ದಶನಗಳಿವೆ.

– ಆ್ಯಂಡ್ರೆ ರಸೆಲ್‌- ಹ್ಯಾರಿ ಗರ್ನಿ ನಡುವಿನ ಅಜೇಯ 29 ರನ್‌ಗಳ ಜತೆಯಾಟ ಐಪಿಎಲ್‌ನಲ್ಲಿ ಜಂಟಿ ಅತ್ಯಧಿಕ 10ನೇ ವಿಕೆಟ್‌ ಜತೆಯಾಟವಾಗಿದೆ. 2009ರ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ನ ಸಿದ್ದಾರ್ಥ್ ತ್ರಿವೇದಿ-ಮುನಾಫ್ ಪಟೇಲ್‌ ಜೋಡಿ 10ನೇ ವಿಕೆಟಿಗೆ ಅಜೇಯ 29 ರನ್‌ ಗಳಿಸಿರುವುದು ಇನ್ನೊಂದು ನಿದರ್ಶನ.

– ಆ್ಯಂಡ್ರೆ ರಸೆಲ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಕಳೆದ 3 ಇನ್ನಿಂಗ್ಸ್‌ ಗಳಲ್ಲಿಯೂ 50 ರನ್‌ ದಾಖಲಿಸಿದರು. ಚೆನ್ನೈ ವಿರುದ್ಧ ಕಳೆದ 3 ಇನ್ನಿಂಗ್ಸ್‌ ಗಳಲ್ಲಿ ಔಟಾಗದೆ 193 ರನ್‌ ಗಳಿಸಿದ್ದಾರೆ. ಇದರೊಂದಿಗೆ ಚೆನ್ನೈ ವಿರುದ್ಧ 10 ಬೌಂಡರಿ ಮತ್ತು 18 ಸಿಕ್ಸರ್‌ ಹೊಡೆದಿದ್ದಾರೆ.

– ಈ ಪಂದ್ಯದಲ್ಲಿ ರಸೆಲ್‌ ಅರ್ಧಶತಕ ಬಾರಿಸಲು 44 ಎಸೆತ ತೆಗೆದುಕೊಂಡರು. ಇದು ಅವರು ಫಿಫ್ಟಿ ಬಾರಿಸಲು ತೆಗೆದುಕೊಂಡ ಅತ್ಯಧಿಕ ಎಸೆತಗಳಾಗಿವೆ. 2011ರಲ್ಲಿ ವೆಸ್ಟ್‌ವಿಂಡೀಸ್‌ ಪರ ಬಿಸಿಬಿ ಎಕ್ಸ್‌ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯದಲ್ಲಿ 32 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. ಅದು ಅವರ ಮೊದಲ ಟಿ20 ಫಿಫ್ಟಿಯಾಗಿತ್ತು.

– ಪೀಯೂಷ್‌ ಚಾವ್ಲಾ ಅವರಿಗಿದು 150ನೇ ಐಪಿಎಲ್‌ ಪಂದ್ಯವಾಗಿತ್ತು. ಅವರು 150 ಪಂದ್ಯಗಳನ್ನಾಡಿದ 11 ಆಟಗಾರರಾಗಿದ್ದಾರೆ. ಭಾರತದಲ್ಲಿ ಇದು ಅವರ 200ನೇ ಟಿ20 ಪಂದ್ಯವಾಗಿತ್ತು. ಇದರೊಂದಿಗೆ ಅವರು 200 ಪ್ಲಸ್‌ ಟಿ20 ಪಂದ್ಯಗಳನ್ನಾಡಿದ 6ನೇ ಆಟಗಾರರಾಗಿದ್ದಾರೆ.

ಟಾಪ್ ನ್ಯೂಸ್

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.