ವಾರ್ನರ್-ಬೇರ್‌ಸ್ಟೊ ಬೆಸ್ಟ್ ಶೋ
ಹೈದರಾಬಾದ್ 9 ವಿಕೆಟ್ ಜಯಭೇರಿ ವಾರ್ನರ್-ಬೇರ್‌ಸ್ಟೊ 131 ರನ್ ಜತೆಯಾಟ
Team Udayavani, Apr 22, 2019, 9:33 AM IST
ಹೈದರಾಬಾದ್: ಡೇವಿಡ್ ವಾರ್ನರ್-ಜಾನಿ ಬೇರ್‌ಸ್ಟೊ ಜೋಡಿಯ ಅಮೋಘ ಬ್ಯಾಟಿಂಗ್ ವೈಭವದ ನೆರವು ಪಡೆದ ಹೈದರಾಬಾದ್ ರವಿವಾರದ ತವರಿನ ಐಪಿಎಲ್ ಹಣಾಹಣಿಯಲ್ಲಿ ಕೆಕೆಆರ್‌ಗೆ 9 ವಿಕೆಟ್‌ಗಳ ಸೋಲುಣಿಸಿ ಮೆರೆದಾಡಿದೆ. 9ರಲ್ಲಿ 5 ಪಂದ್ಯ ಗೆದ್ದು ಪ್ಲೇ-ಆಫ್ ಹೋರಾಟವನ್ನು ಜಾರಿಯಲ್ಲಿರಿಸಿದೆ.
ಎಡಗೈ ಪೇಸರ್ ಖಲೀಲ್ ಅಹ್ಮದ್ ದಾಳಿಗೆ ತತ್ತರಿಸಿದ ಕೆಕೆಆರ್ 8 ವಿಕೆಟಿಗೆ 159 ರನ್ನುಗಳ ಸಾಧಾರಣ ಮೊತ್ತ ದಾಖಲಿಸಿತು. ದಿಟ್ಟ ಜವಾಬಿತ್ತ ಹೈದರಾಬಾದ್ 15 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 161 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
ವಾರ್ನರ್ 500 ರನ್
ವಾರ್ನರ್-ಬೇರ್‌ಸ್ಟೊ ಜೋಡಿಯ ಭರ್ಜರಿ ಜತೆಯಾಟ ಹೈದರಾಬಾದ್ ಸರದಿಯ ಆಕರ್ಷಣೆಯಾಗಿತ್ತು. ಇವರಿಬ್ಬರು 12.2 ಓವರ್‌ಗಳನ್ನು ನಿಭಾಯಿಸಿ 131 ರನ್ ಪೇರಿಸಿದರು. ಇದರಲ್ಲಿ ವಾರ್ನರ್ ಪಾಲು 67 ರನ್. ಈ ಪ್ರಚಂಡ ಇನ್ನಿಂಗ್ಸ್ ಕೇವಲ 38 ಎಸೆತಗಳಲ್ಲಿ ದಾಖಲಾಯಿತು. ಸಿಡಿಸಿದ್ದು 5 ಸಿಕ್ಸರ್ ಮತ್ತು 3 ಬೌಂಡರಿ. ಈ ಸಾಧನೆಯೊಂದಿಗೆ ಪ್ರಸಕ್ತ ಐಪಿಎಲ್‌ನಲ್ಲಿ 500 ರನ್ ಪೇರಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ವಾರ್ನರ್ ಅವರದಾಯಿತು. ಆಡಿದ ಎಲ್ಲ 5 ಋತುಗಳಲ್ಲೂ 500 ರನ್ ಗಡಿ ದಾಟಿದ ಹಿರಿಮೆಗೂ ವಾರ್ನರ್ ಪಾತ್ರರಾದರು. 2016ರಲ್ಲಿ 848 ರನ್ ಪೇರಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಬೇರ್‌ಸ್ಟೊ ಐಪಿಎಲ್ ದಾಖಲೆ
ಪ್ರಸಕ್ತ ಐಪಿಎಲ್‌ನಲ್ಲಿ ಕೊನೆಯ ಪಂದ್ಯವಾಡಿದ ಜಾನಿ ಬೇರ್‌ಸ್ಟೊ 43 ಎಸೆತಗಳಿಂದ ಅಜೇಯ 80 ರನ್ ಬಾರಿಸಿದರು. ಈ ಪ್ರಚಂಡ ಬ್ಯಾಟಿಂಗ್ ವೇಳೆ 4 ಸಿಕ್ಸರ್, 7 ಬೌಂಡರಿ ಸಿಡಿಯಿತು. ಈ ಸಾಹಸದೊಂದಿಗೆ ಬೇರ್‌ಸ್ಟೊ ಪದಾರ್ಪಣ ಐಪಿಎಲ್‌ನಲ್ಲೇ ಸರ್ವಾಧಿಕ 445 ರನ್ ಪೇರಿಸಿದ ದಾಖಲೆ ಬರೆದರು. ವಾರ್ನರ್-ಬೇರ್‌ಸ್ಟೊ ಪವರ್ ಪ್ಲೇ ಅವಧಿಯಲ್ಲಿ 72 ರನ್ ಸೂರೆಗೈದರು. ಇದು ಈ ಐಪಿಎಲ್ ಪವರ್ ಪ್ಲೇ ಅವಧಿಯಲ್ಲಿ ದಾಖಲಾದ ಅತ್ಯಧಿಕ ಮೊತ್ತ.
ಕೆಕೆಆರ್‌ಗೆ ಖಲೀಲ್ ಕಡಿವಾಣ
ಕೆಕೆಆರ್ ದಿಟ್ಟ ರೀತಿಯಲ್ಲೇ ಇನ್ನಿಂಗ್ಸ್ ಆರಂಭಿಸಿತ್ತು. ಕ್ರಿಸ್ ಲಿನ್-ಸುನೀಲ್ ನಾರಾಯಣ್ ಕೇವಲ 2.4 ಓವರ್‌ಗಳಿಂದ 42 ರನ್ ಪೇರಿಸಿ ಸಿಡಿದು ನಿಂತಿದ್ದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಹೈದರಾಬಾದ್ ಬೌಲರ್ ಮೇಲುಗೈ ಸಾಧಿಸಿದರು. ಅದರಲ್ಲೂ ಖಲೀಲ್ ಅಹ್ಮದ್ ಘಾತಕವಾಗಿ ಪರಿಣಮಿಸಿದರು. ಆರಂಭಿಕರಿಬ್ಬರ ವಿಕೆಟ್ ಕಬಳಿಸಿದ ಖಲೀಲ್, ವನ್‌ಡೌನ್‌ನಲ್ಲಿ ಬಂದ ಶುಭಮನ್ ಗಿಲ್ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಭುವನೇಶ್ವರ್ ಕುಮಾರ್ 2 ವಿಕೆಟ್ ಕಿತ್ತರು.
ಕ್ರಿಸ್ ಲಿನ್ 47 ಎಸೆತಗಳಿಂದ 51 ರನ್ ಹೊಡೆದು ಕೆಕೆಆರ್ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (4 ಬೌಂಡರಿ, 1 ಸಿಕ್ಸರ್). ನಾರಾಯಣ್ ಕೇವಲ 8 ಎಸೆತಗಳಿಂದ 25 ರನ್ ಬಾರಿಸಿದರು (3 ಬೌಂಡರಿ, 2 ಸಿಕ್ಸರ್). ಕೊನೆಯಲ್ಲಿ ರಿಂಕು ಸಿಂಗ್ 30 ರನ್ ಕೊಡುಗೆ ಸಲ್ಲಿಸಿದರು.
ಕೋಲ್ಕತಾ ನೈಟ್‌ರೈಡರ್
ಕ್ರಿಸ್ ಲಿನ್ ಸಿ ವಿಲಿಯಮ್ಸನ್ ಬಿ ಅಹ್ಮದ್ 51
ಸುನೀಲ್ ನಾರಾಯಣ್ ಬಿ ಅಹ್ಮದ್ 25
ಶುಭಮನ್ ಗಿಲ್ ಸಿ ಶಂಕರ್ ಬಿ ಅಹ್ಮದ್ 3
ನಿತೀಶ್ ರಾಣಾ ಸಿ ಬೆರ್‌ಸ್ಟೊ ಬಿ ಭುವನೇಶ್ವರ್ 11
ದಿನೇಶ್ ಕಾರ್ತಿಕ್ ರನೌಟ್ 6
ರಿಂಕು ಸಿಂಗ್ ಸಿ ರಶೀದ್ ಬಿ ಸಂದೀಪ್ 30
ಆ್ಯಂಡ್ರೆ ರಸೆಲ್ ಸಿ ರಶೀದ್ ಬಿ ಭುವನೇಶ್ವರ್ 15
ಪೀಯೂಷ್ ಚಾವ್ಲಾ ಸಿ ಬೆರ್‌ಸ್ಟೊ ಬಿ ರಶೀದ್ 4
ಯರ್ರಾ ಪೃಥ್ವಿರಾಜ್ ಔಟಾಗದೆ 0
ಕೆ.ಸಿ. ಕಾರಿಯಪ್ಪ ಔಟಾಗದೆ 9
ಇತರ 5
ಒಟ್ಟು (8 ವಿಕೆಟಿಗೆ) 159
ವಿಕೆಟ್ ಪತನ: 1-42, 2-50, 3-65, 4-73, 5-124, 6-133, 7-146, 8-150.
ಬೌಲಿಂಗ್: ಭುವನೇಶ್ವರ್ ಕುಮಾರ್ 4-0-35-2
ಶಹಬಾಝ್ ನದೀವ್ 4-0-30-0
ಖಲೀಲ್ ಅಹ್ಮದ್ 4-0-33-3
ಸಂದೀಪ್ ಶರ್ಮ 4-0-37-1
ರಶೀದ್ ಖಾನ್ 4-0-23-1
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಬಿ ಪೃಥ್ವಿರಾಜ್ 67
ಜಾನಿ ಬೇರ್‌ಸ್ಟೊ ಔಟಾಗದೆ 80
ಕೇನ್ ವಿಲಿಯಮ್ಸನ್ ಔಟಾಗದೆ 8
ಇತರ 6
ಒಟ್ಟು (15 ಓವರ್‌ಗಳಲ್ಲಿ ಒಂದು ವಿಕೆಟಿಗೆ) 161
ವಿಕೆಟ್ ಪತನ: 1-131.
ಬೌಲಿಂಗ್: ಹ್ಯಾರಿ ಗರ್ನಿ 2-0-16-0
ಯರ್ರಾ ಪೃಥ್ವಿರಾಜ್ 3-0-29-1
ಪೀಯೂಷ್ ಚಾವ್ಲಾ 3-0-38-0
ಸುನೀಲ್ ನಾರಾಯಣ್ 4-0-34-0
ಕೆ.ಸಿ. ಕಾರಿಯಪ್ಪ 2-0-34-0
ಆ್ಯಂಡ್ರೆ ರಸೆಲ್ 1-0-8-0
ಪಂದ್ಯಶ್ರೇಷ್ಠ: ಖಲೀಲ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.