ತವರಲ್ಲಿ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್
ಹೈದರಾಬಾದ್ ವಿರುದ್ಧ 5 ವಿಕೆಟ್ ಅಪಜಯ ಬ್ಯಾಟಿಂಗ್
Team Udayavani, Apr 6, 2019, 6:00 AM IST
ಡೆಲ್ಲಿಯನ್ನು ಕಟ್ಟಿಹಾಕಿದ ಸಂಭ್ರಮದಲ್ಲಿರುವ ಹೈದರಾಬಾದ್‌ನ ರಶೀದ್‌ಖಾನ್, ನಾಯಕ ಭುವನೇಶ್ವರ್ ಕುಮಾರ್, ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್.
ನವದೆಹಲಿ: ಈ ಬಾರಿ ಹೊಸ ಸ್ವರೂಪ ಪಡೆದು, ಯುವ ಆಟಗಾರರು, ಖ್ಯಾತ ಬೌಲರ್‌ಗಳ ಸಮ್ಮಿಲನದೊಂದಿಗೆ ಬಲಿಷ್ಠ ತಂಡವಾಗಿ ರೂಪುಗೊಂಡ ಸೂಚನೆ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಳಿ ತಪ್ಪಿದಂತೆ ಕಂಡು ಬಂದಿದೆ. ಇದುವರೆಗೆ ಐದು ಪಂದ್ಯ ಆಡಿರುವ ಅದು, ಗುರುವಾರ ರಾತ್ರಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವೂ ಸೇರಿ; ಒಟ್ಟು 3 ಬಾರಿ ಸೋತಿದೆ. ಡೆಲ್ಲಿ ತಂಡ ನಿಧಾನಕ್ಕೆ ಆರ್‌ಸಿಬಿ ಹಾದಿ ಹಿಡಿದಿದೆಯಾ ಎಂಬ ಶಂಕೆ ಮೂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ, 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್ 18.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ, 131 ರನ್ ಗಳಿಸಿ, 5 ವಿಕೆಟ್‌ಗಳ ಜಯ ಸಾಧಿಸಿತು. ಈ ಜಯದೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು.
ಡೆಲ್ಲಿ ಅಂಕಣ ಬೌಲಿಂಗ್‌ಗೆ ಪೂರಕವಾಗಿದ್ದಂತೆ ಕಂಡುಬಂತು. ಅದು ನೀಡಿದ್ದು ಸಣ್ಣ ಗುರಿಯೇ ಆದರೂ, ಇದನ್ನು ತಲುಪಲು ಹೈದರಾಬಾದ್ 18.3 ಓವರ್‌ಗಳನ್ನು ಬಳಸಿಕೊಂಡಿತು. ಹೈದರಾ ಬಾದ್‌ನ ಬ್ಯಾಟಿಂಗ್ ದಿಗ್ಗಜರು ಭಾರೀ ಲಯದಲ್ಲಿದ್ದಂತೆ ಕಂಡುಬರಲಿಲ್ಲ. ಡೇವಿಡ್ ವಾರ್ನರ್ 10 ರನ್‌ಗೆ ಔಟಾದರು. ಜಾನಿ ಬೇರ್‌ಸ್ಟೊ 28 ಎಸೆತದಲ್ಲಿ 48 ರನ್ ಗಳಿಸದಿದ್ದರೆ, ಹೈದರಾಬಾದ್ ಪರಿಸ್ಥಿತಿ ಕೂಡ ಕಷ್ಟವಿತ್ತು. ಇವರಿಬ್ಬರ ವಿಕೆಟ್ 4 ರನ್ ಅಂತರದಲ್ಲಿ ಉರುಳಿತು. ಬಳಿಕ ಮನೀಶ್ ಪಾಂಡೆ (10), ವಿಜಯ್ ಶಂಕರ್ (16) ಆರು ರನ್ ಅಂತರದಲ್ಲಿ ನಿರ್ಗಮಿಸಿದರು. ದೀಪಕ್ ಹೂಡಾ ಕೂಡ ವಿಫಲರಾದರು (10). ಕೊನೆಯಲ್ಲಿ ಮೊಹಮ್ಮದ್ ನಬಿ ಮತ್ತು ಯೂಸುಫ್ ಪಠಾಣ್ ಸೇರಿಕೊಂಡು ತಂಡವನ್ನು ದಡ ಸೇರಿಸಿದರು. ಬ್ಯಾಟಿಂಗ್ ವಿಭಾಗದಲ್ಲಿ ಈ ನ್ಯೂನತೆಯನ್ನು ಹೈದರಾಬಾದ್
ಸರಿಪಡಿಸಿಕೊಳ್ಳಲೇಬೇಕಾಗಿದೆ.
ಡೆಲ್ಲಿ ಪರದಾಟ: ತವರಿನ ಅಂಕಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್‌ನ ಸಾಂ ಕ ದಾಳಿಗೆ ತತ್ತರಿಸಿತು. ಟಿ20 ಶೈಲಿಯಲ್ಲಿ ಆಡಲು ಸಂಪೂರ್ಣ ವಿಫಲವಾಯಿತು. ತಂಡದ ಯಾವುದೇ ಸ್ಫೋಟಕ ತಾರೆಯರು ಸಿಡಿಯಲಿಲ್ಲ. ನಾಯಕ ಶ್ರೇಯಸ್ ಐಯ್ಯರ್ ಕ್ರೀಸ್ ಆಕ್ರಮಿಸಿಕೊಂಡರೂ, ಇನ್ನೊಂದು ತುದಿಯಲ್ಲಿ ವಿಕೆಟ್ ಉರುಳುವುದನ್ನಷ್ಟೇ ಅವರು ಕಾಣಬೇಕಾಯಿತು. 43 ರನ್ ಹೊಡೆದ ಐಯ್ಯರ್ ಅವರದ್ದೇ ಡೆಲ್ಲಿ ಸರದಿಯ ಗರಿಷ್ಠ ಮೊತ್ತ. 41 ಎಸೆತಗಳ ಈ ಆಟದಲ್ಲಿ 3 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಕೊನೆಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಆಟಕ್ಕಿಳಿದು 13 ಎಸೆತಗಳಿಂದ ಅಜೇಯ 23 ರನ್
ಮಾಡಿದ್ದರಿಂದ (1 ಬೌಂಡರಿ, 2 ಸಿಕ್ಸರ್) 130ರ ಗುರಿ
ನಿಗದಿಪಡಿಸಲು ಸಾಧ್ಯವಾಯಿತು.
ಹೈದರಾಬಾದ್‌ನ ಎಲ್ಲ 5 ಮಂದಿ ಬೌಲರ್‌ಗಳು
ಸೇರಿಕೊಂಡು ಡೆಲ್ಲಿಗೆ ಕಡಿವಾಣ ಹಾಕಿದರು. ಮೊಹಮ್ಮದ್ ನಬಿ, ಭುವನೇಶ್ವರ್ ಕುಮಾರ್, ಕೌಲ್ ತಲಾ 2 ವಿಕೆಟ್ ಹಾರಿಸಿದರು. ರಶೀದ್ ಖಾನ್ ಮತ್ತು ಸಂದೀಪ್ ಶರ್ಮ ಒಂದೊಂದು ವಿಕೆಟ್ ಕಿತ್ತರು. ಪೃಥ್ವಿ ಶಾ (11), ಶಿಖರ್ ಧವನ್ (12), ರಿಷಭ್ ಪಂತ್ (5) ಅವರ ವೈಫಲ್ಯ ಡೆಲ್ಲಿಗೆ ಮುಳುವಾಯಿತು. ಕೇನ್ ವಿಲಿಯಮ್ಸನ್ ಗೈರಲ್ಲಿ ಈ ಪಂದ್ಯದಲ್ಲೂ ಭುವನೇಶ್ವರ್ ಕುಮಾರ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು.
ಪಂದ್ಯದ ತಿರುವು
ಹೈದರಾಬಾದ್ ಪರ ಆರಂಭಿಕರಾಗಿ ಬಂದ ಜಾನಿ ಬೇರ್‌ಸ್ಟೊ ಸ್ಫೋಟಕ ಬ್ಯಾಟಿಂಗ್ ಮಾಡಿ 48 ರನ್ ಬಾರಿಸಿದರು. ಇದೇ ಡೆಲ್ಲಿ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಡೆಲ್ಲಿ 20 ಓವರ್, 129/8
ಪೃಥ್ವಿ ಶಾ ಬಿ ಭುವನೇಶ್ವರ್ 11
ಶಿಖರ್ ಧವನ್ ಸಿ ಸಂದೀಪ್ ಬಿ ನಬಿ 12
ಶ್ರೇಯಸ್ ಐಯ್ಯರ್ ಬಿ ರಶೀದ್ 43
ರಿಷಭ್ ಪಂತ್ ಸಿ ಹೂಡಾ ಬಿ ನಬಿ 5
ರಾಹುಲ್ ತೆವಾಟಿಯ ಸಿ ನಬಿ ಬಿ ಸಂದೀಪ್ 5
ಕಾಲಿನ್ ಇಂಗ್ರಾಮ್ ಸಿ ಪಾಂಡೆ ಬಿ ಕೌಲ್ 5
ಕ್ರಿಸ್ ಮಾರಿಸ್ ಸಿ ನಬಿ ಬಿ ಭುವನೇಶ್ವರ್ 17
ಅಕ್ಷರ್ ಪಟೇಲ್ ಔಟಾಗದೆ 23
ಕ್ಯಾಗಿಸೊ ರಬಾಡ ಸಿ ಭುವನೇಶ್ವರ್ ಬಿ ಕೌಲ್ 3
ಇಶಾಂತ್ ಶರ್ಮ ಔಟಾಗದೆ 0
ಇತರೆ 5
ವಿಕೆಟ್ ಪತನ: 1-14, 2-36, 3-52, 4-61, 5-75,
6-93, 7-107, 8-115.
ಬೌಲಿಂಗ್
ಭುವನೇಶ್ವರ್ ಕುಮಾರ್ 4 0 27 2
ಮೊಹಮ್ಮದ್ ನಬಿ 4 0 21 2
ಸಿದ್ದಾರ್ಥ್ ಕೌಲ್ 4 0 35 2
ರಶೀದ್ ಖಾನ್ 4 0 18 1
ಸಂದೀಪ್ ಶರ್ಮ 4 0 25 1
ಹೈದರಾಬಾದ್ 18.3 ಓವರ್, 131/5
ಡೇವಿಡ್ ವಾರ್ನರ್ ಸಿ ಮಾರಿಸ್ ಬಿ ರಬಾಡ 10
ಜಾನಿ ಬೇರ್‌ಸ್ಟೊ ಎಲ್ಬಿ ಬಿ ತೆವಾಟಿಯ 48
ವಿಜಯ್ ಶಂಕರ್ ಸಿ ಐಯ್ಯರ್ ಬಿ ಅಕ್ಷರ್ 16
ಮನೀಶ್ ಪಾಂಡೆ ಸಿ ಪೃಥ್ವಿ ಬಿ ಇಶಾಂತ್ 10
ದೀಪಕ್ ಹೂಡಾ ಸಿ ರಬಾಡ ಬಿ ಲಮಿಚ್ಚಾನೆ 10
ಯೂಸುಫ್ ಪಠಾಣ್ ಅಜೇಯ 9
ಮೊಹಮ್ಮದ್ ನಬಿ ಅಜೇಯ 17
ಇತರೆ 11
ವಿಕೆಟ್ ಪತನ: 1-64, 2-68, 3-95, 4-101, 5-111.
ಬೌಲಿಂಗ್
ಸಂದೀಪ್ ಲಮಿಚ್ಚಾನೆ 4 0 32 1
ಅಕ್ಷರ್ ಪಟೇಲ್ 4 0 18 1
ಕ್ರಿಸ್ ಮಾರಿಸ್ 3 0 26 0
ಕ್ಯಾಗಿಸೊ ರಬಾಡ 3.3 0 32 1
ರಾಹುಲ್ ತೆವಾಟಿಯ 3 0 10 1
ಇಶಾಂತ್ ಶರ್ಮ 1 0 5 1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.