ಪಂತ್ ಆರ್ಭಟಕ್ಕೆ ಬೆಚ್ಚಿದ ಮುಂಬೈ
Team Udayavani, Mar 26, 2019, 6:00 AM IST
ಮುಂಬಯಿ: ಬದಲಾದ ಹೆಸರಿನೊಂದಿಗೆ ಆಡಲಿಳಿದ ಡೆಲ್ಲಿ ತಂಡ ರವಿವಾರದ ತನ್ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ವಿರುದ್ಧ 37 ರನ್ನುಗಳ ಜಯ ಸಾಧಿಸಿದೆ.
“ವಾಂಖೇಡೆ ಸ್ಟೇಡಿಯಂ’ನಲ್ಲಿ ಸಾಗಿದ ಈ ಮುಖಾಮುಖೀಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟಿಗೆ 213 ರನ್ ಪೇರಿಸಿತು. ಜವಾಬಿತ್ತ ಮುಂಬೈ 19.2 ಓವರ್‌ಗಳಲ್ಲಿ 176 ರನ್ನಿಗೆ ಆಲೌಟಾಗಿದೆ. ಹಿರಿಯ ಆಟಗಾರ ಯುವರಾಜ್ ಸಿಂಗ್ ಮಾತ್ರ ಎದುರಾಳಿ ದಾಳಿಯನ್ನು ಸಮರ್ಥವಾಗಿ ಎದುರಿಸಿ 53 ರನ್ ಹೊಡೆದರು.
ಡೆಲ್ಲಿ ಇನ್ನಿಂಗ್ಸ್ ವೇಳೆ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ಆಟಗಾರ ರಿಷಬ್ ಪಂತ್ ಕೇವಲ 27 ಎಸೆತಗಳಿಂದ 78 ರನ್ ಸಿಡಿಸಿ ಅಜೇಯರಾಗಿ ಉಳಿದರು. “360 ಡಿಗ್ರಿ’ ಶೈಲಿಯಲ್ಲಿ ಬ್ಯಾಟ್ ಬೀಸುತ್ತ ಮುಂಬೈ ಬೌಲರ್‌ಗಳ ಮೇಲೆರಗಿ ಹೋದ ಪಂತ್ ಆಕ್ರಮಣದ ವೇಳೆ 7 ಸಿಕ್ಸರ್ ಜತೆಗೆ 7 ಬೌಂಡರಿ ಸಿಡಿಯಿತು. ಅವರ ಅರ್ಧ ಶತಕ ಕೇವಲ 18 ಎಸೆತಗಳಲ್ಲಿ ದಾಖಲಾಯಿತು. ಪಂತ್-ತೆವಾಟಿಯಾ ಕೊನೆಯ 2.4 ಓವರ್‌ಗಳಲ್ಲಿ 48 ರನ್ ಸೂರೆಗೈದರು.
ಪಂತ್ ಹೊರತುಪಡಿಸಿದರೆ ಗಮನ ಸೆಳೆದವರೆಂದರೆ ಮರಳಿ ತವರು ತಂಡಕ್ಕೆ ಬಂದ ಶಿಖರ್ ಧವನ್ (36 ಎಸೆತ, 43 ರನ್, 4 ಬೌಂಡರಿ, 1 ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದ ಕಾಲಿನ್ ಇನ್‌ಗಾÅಮ್ (32 ಎಸೆತ, 47 ರನ್, 7 ಬೌಂಡರಿ, 1 ಸಿಕ್ಸರ್). ಮುಂಬೈ ಪರ ಮಿಚೆಲ್ ಮೆಕ್ಲೆನಗನ್ 40 ರನ್ನಿಗೆ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು.
ಭಾರೀ ಮೊತ್ತದ ಚೇಸಿಂಗ್ ವೇಳೆ ಮುಂಬೈ 3 ವಿಕೆಟ್‌ಗಳನ್ನು ಬೇಗ ಕಳೆದುಕೊಂಡಿತು. ಯುವರಾಜ್-ಪೊಲಾರ್ಡ್ ಮುನ್ನುಗ್ಗಿ ಬೀಸಲಾರಂಭಿಸಿದರು. ಆದರೆ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಒಟ್ಟೊಟ್ಟಿಗೆ ನಿರ್ಗಮಿಸಿದ್ದು ಮುಂಬೈಗೆ ದುಬಾರಿಯಾಗಿ ಪರಿಣಮಿಸಿತು. ಯುವರಾಜ್ ಅರ್ಧಶತಕ ಸಿಡಿಸಿದರೆ ಮುಂಬೈ 19.2 ಓವರ್‌ಗಳಲ್ಲಿ 176 ರನ್ನಿಗೆ ಆಲೌಟಾಯಿತು.
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ತೆವಾಟಿಯ ಬಿ ಇಶಾಂತ್ 14
ಕ್ವಿಂಟನ್ ಡಿ ಕಾಕ್ ಸಿ ಬೌಲ್ಟ್ ಬಿ ಇಶಾಂತ್ 27
ಸೂರ್ಯಕುಮಾರ್ ಯಾದವ್ ರನೌಟ್ 2
ಯುವರಾಜ್ ಸಿಂಗ್ ಸಿ ತೆವಾಟಿಯ ಬಿ ರಬಾಡ 53
ಕೈರನ್ ಪೊಲಾರ್ಡ್ ಸಿ ತೆವಾಟಿಯ ಬಿ ಪೌಲ್ 21
ಹಾರ್ದಿಕ್ ಪಾಂಡ್ಯ ಸಿ ಮತ್ತು ಬಿ ಅಕ್ಷರ್ 0
ಕೃಣಾಲ್ ಪಾಂಡ್ಯ ಸಿ ತೆವಾಟಿಯ ಬಿ ಬೌಲ್ಟ್ 32
ಬೆನ್ ಕಟ್ಟಿಂಗ್ ಸಿ ಪಂತ್ ಬಿ ರಬಾಡ 3
ಮಿಚೆಲ್ ಮೆಕ್ಲೆನಗನ್ ಸ್ಟಂಪ್ಡ್ ಪಂತ್ ಬಿ ತೆವಾಟಿಯ 10
ರಸಿಕ್ ಸಲಂ ಔಟಾಗದೆ 5
ಜಸ್‌ಪ್ರೀತ್ ಬುಮ್ರಾ ಗಾಯಾಳಾಗಿ ನಿವೃತ್ತಿ 0
ಇತರ: 9
ಒಟ್ಟು (19.2 ಓವರ್‌ಗಳಲ್ಲಿ ಆಲೌಟ್) 176
ವಿಕೆಟ್ ಪತನ: 1-33, 2-37, 3-45, 4-95, 5-95, 6-134, 7-153, 8-170, 9-176
ಬೌಲಿಂಗ್:
ಟ್ರೆಂಟ್ ಬೌಲ್ಟ್ 4-0-42-1
ಇಶಾಂತ್ ಶರ್ಮ 4-0-34-2
ಕಾಗಿಸೊ ರಬಾಡ 4-0-23-2
ರಾಹುಲ್ ತೆವಾಟಿಯ 1.2-0-12-1
ಕೀಮೊ ಪೌಲ್ 3-0-21-1
ಅಕ್ಷರ್ ಪಟೇಲ್ 3-0-42-1
ಪಂದ್ಯಶ್ರೇಷ್ಠ: ರಿಷಬ್ ಪಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Pro Kabaddi: ಜೈಪುರ್ ಮೇಲೆ ಪಾಟ್ನಾ ಸವಾರಿ
ODI; ಹ್ಯಾರಿಸ್ ರೌಫ್ ಗೆ ಹೆದರಿದ ಆಸೀಸ್ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.