ಕಡುಬಡತನದ ಕನಸುಗಾರರಿಗೆ ನೋಟಿನ ಕಂತೆ
Team Udayavani, Dec 20, 2019, 9:41 PM IST
ಕೋಲ್ಕತಾ: ಗುರುವಾರ ನಡೆದ ಐಪಿಎಲ್ ಹರಾಜು ಹಲವು ವಿಶೇಷಗಳನ್ನು ದಾಖಲಿಸಿದೆ. ಇದು ಹಲವು ಕನಸುಕಂಗಳನ್ನು ಅರಳಿಸಿದೆ. ಸಣ್ಣ ರೈತರೊಬ್ಬರ ಪುತ್ರ ಕಾರ್ತಿಕ್ ತ್ಯಾಗಿ, ವಾಹನ ಚಾಲಕನ ಪುತ್ರ ಪ್ರಿಯಂ ಗರ್ಗ್, 3 ವರ್ಷ ಟೆಂಟ್‌ನಲ್ಲಿ ಮಲಗಿ, ಪಾನಿಪುರಿ ಮಾರಿ ಕ್ರಿಕೆಟ್ ಕಲಿತ ಯಶಸ್ವಿ ಜೈಸ್ವಾಲ್ ಇವರೆಲ್ಲ ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ. ಒಂದು ಕಾಲದಲ್ಲಿ ಕಷ್ಟಗಳನ್ನಷ್ಟೇ ನೋಡಿದ್ದ ಈ ಹದಿಹರೆಯದ ಹುಡುಗರು, ಭಾರತದ ಅಂಡರ್-19 ವಿಶ್ವಕಪ್ ತಂಡದ ಸದಸ್ಯರು ಎನ್ನುವುದು ಗಮನಾರ್ಹ.
ಪಾನಿಪುರಿ ಮಾರಿದ ಬಳಿಕ ಕ್ರಿಕೆಟ್
ಬರೀ ಕನಸುಗಳನ್ನೇ ಹೊತ್ತ ಯಶಸ್ವಿ ಜೈಸ್ವಾಲ್ ಉತ್ತರಪ್ರದೇಶದಿಂದ ಮುಂಬಯಿಗೆ ಬಂದಾಗ ಕೇವಲ 11 ವರ್ಷ. ಆ ವೇಳೆ ಅವರು ಸಂಬಂಧಿಕರೊಬ್ಬರ ಹಾಲಿನ ಡೈರಿಯಲ್ಲಿ ಇರುತ್ತಿದ್ದರು. ಇನ್ನು ಇಲ್ಲಿರಬೇಡ ಎಂದು ಹೇಳಿದ್ದರಿಂದ, ಆಜಾದ್ ಮೈದಾನದ ಟೆಂಟ್‌ಗೆ ತೆರಳಿದರು.
ಮುಂದಿನ 3 ವರ್ಷ ಬಡತನ, ಹಸಿವಿನೊಂದಿಗೆ ಏಗುತ್ತ ಕ್ರಿಕೆಟ್ ಅಭ್ಯಾಸ ನಡೆಸಿದರು. ಜೀವನ ನಿರ್ವಹಣೆಗೆ ತಂದೆಯೊಂದಿಗೆ ಪಾನಿಪುರಿ ಮಾರಾಟ ಮಾಡತೊಡಗಿದರು. ಅನಂತರವಷ್ಟೇ ಕ್ರಿಕೆಟ್ ಅಂಗಳಕ್ಕೆ ಓಡುತ್ತಿದ್ದರು. ಅವರಿಗೆ ಕ್ರಿಕೆಟ್ ತರಬೇತಿ ನೀಡಿದ್ದು ಜ್ವಾಲಾ ಸಿಂಗ್. ಈಗ ಅವರ ಜತೆಯೇ ಜೈಸ್ವಾಲ್ ವಾಸಿಸುತ್ತಾರೆ. ಅವರನ್ನು ರಾಜಸ್ಥಾನ್ ರಾಯಲ್ಸ್ 2.40 ಕೋಟಿ ರೂ. ನೀಡಿ ಖರೀದಿಸಿದೆ. ಈ ಹಣವನ್ನು ಏನು ಮಾಡುವುದೆಂದು ನನಗೆ ಗೊತ್ತಿಲ್ಲ, ಅದರ ಹೊಣೆ ತರಬೇತುದಾರರದ್ದು ಎಂದು ಜೈಸ್ವಾಲ್ ಹೇಳಿದ್ದಾರೆ.
ಎಲ್ಲವೂ ಮಗನ ಕ್ರಿಕೆಟಿಗಾಗಿ
ಭಾರತದ ಅಂಡರ್-19 ತಂಡದ ನಾಯಕ ಪ್ರಿಯಂ ಗರ್ಗ್. ಮಗನಿಗಾಗಿ ತಂದೆ ಮಾಡದ ಕೆಲಸಗಳೇ ಇಲ್ಲ. ಹಾಲು ಹಾಕುವುದು, ಶಾಲಾ ವಾಹನಗಳನ್ನು ಓಡಿಸುವುದು, ಮೂಟೆ ಹೊರುವುದು… ಎಲ್ಲವೂ ಮಗನ ಕ್ರಿಕೆಟ್ ಏಳಿಗೆಗಾಗಿ. ಹಾಗೆ ದುಡಿದು ದಿನಾ ಸಂಜೆ 10 ರೂ.ಗಳನ್ನು ನೀಡುತ್ತಿದ್ದರು. ಅದನ್ನು ಪಡೆದು ಗರ್ಗ್ ಮರುದಿನ ಮೀರತ್‌ಗೆ ಹೋಗಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಹಣವಿಲ್ಲದ ದಿನಾ ಗರ್ಗ್ ಬಸ್ಸಿನ ಮೇಲೆ ಕುಳಿತು ಹೋಗಿದ್ದಾರೆ!
ಈಗ ತಂದೆ ಆರೋಗ್ಯ ಇಲಾಖೆಯಲ್ಲಿ ವಾಹನ ಓಡಿಸುತ್ತಾರೆ. ಗರ್ಗ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 1.9 ಕೋಟಿ ರೂ. ನೀಡಿ ಖರೀದಿಸಿದೆ.
ತ್ಯಾಗಿಗಾಗಿ ತಂದೆಯ ತ್ಯಾಗ
“ನನ್ನ ತಂದೆ ಸಣ್ಣ ರೈತ, ಉತ್ತರಪ್ರದೇಶದ ಹಪುರ್‌ನವರು. ಈ ಹಪುರ್ ಹೆಸರನ್ನು ನನ್ನ ಸಹ ಕ್ರಿಕೆಟಿಗರು ಕೇಳಿಯೇ ಇರಲಿಲ್ಲ. ಹರಾಜು ಮುಗಿದ ಮೇಲೆಯೇ ಹಲವರಿಗೆ ಗೊತ್ತಾದದ್ದು…’ ಎಂದು 19 ವರ್ಷದ ಮಧ್ಯಮ ವೇಗಿ ಕಾರ್ತಿಕ್ ತ್ಯಾಗಿ ಹೇಳುತ್ತಾರೆ. ಅವರನ್ನು ರಾಜಸ್ಥಾನ್ ರಾಯಲ್ಸ್ 1.3 ಕೋಟಿ ರೂ. ನೀಡಿ ಖರೀದಿಸಿದೆ.
ಆದರೆ ಇಷ್ಟು ಹಣವನ್ನು ತನಗೆ ನಿಭಾಯಿಸುವುದು ಹೇಗೆಂದು ಗೊತ್ತಿಲ್ಲ. ಇದರ ಉಸ್ತುವಾರಿಯೆಲ್ಲ ಅಪ್ಪನದ್ದೇ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ. ಕಾರ್ತಿಕ್‌ಗೆ ತನ್ನಪ್ಪ ತನಗಾಗಿ ಮಾಡಿದ ತ್ಯಾಗಗಳೆಲ್ಲ ಚೆನ್ನಾಗಿ ನೆನಪಿದೆ. ಸತತ 2 ವರ್ಷ ಬೆನ್ನುನೋವಿಗೆ ಸಿಲುಕಿದ್ದ ಅವರಿಗೆ, ತಂದೆ ಸಾಲಮಾಡಿ ಚಿಕಿತ್ಸೆ ಕೊಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.