ಚೆನ್ನೈ ವಿರುದ್ಧ ಹೋರಾಡಲು ಆರ್‌ಸಿಬಿ ಸಿದ್ಧ
ಇಂದು ಎರಡು ಪಂದ್ಯ ಕೆಕೆಆರ್‌ಗೆ ಪಂಜಾಬ್ ಸವಾಲು
Team Udayavani, Oct 10, 2020, 6:00 AM IST
ಅಬುಧಾಬಿ: ಗುರುವಾರವಷ್ಟೇ ಹೈದರಾಬಾದ್ ವಿರುದ್ಧ 69 ರನ್‌ಗಳಿಂದ ಮುಗ್ಗರಿಸಿದ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತೂಂದು ಪಂದ್ಯವನ್ನಾಡಲು ಸಜ್ಜಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಅದು ಬಲಿಷ್ಠ ಕೆಕೆಆರ್ ತಂಡವನ್ನು ಎದುರಿಸಲಿದೆ. ದಿನದ ಮತ್ತೂಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು ಮುಖಾಮುಖೀಯಾಗಲಿವೆ.
ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್
ಸತತ ನಾಲ್ಕು ಸೋಲಿನಿಂದ ಕಂಗೆಟ್ಟಿ ರುವ ಕಿಂಗ್ಸ್ ಇಲೆವೆನ್ ಪಂಜಾಬ್‌ಗ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯವಿದೆ. ಬಹುತೇಕ ಪ್ಲೇ ಆಫ್ ಹಾದಿ ಮುಚ್ಚಿದ್ದರು ಮುಂದಿನ ಎಲ್ಲ ಪಂದ್ಯಗಳನ್ನು ಅತ್ಯಧಿಕ ರನ್‌ರೇಟ್‌ನಲ್ಲಿ ಗೆದ್ದರೆ ಎಲ್ಲೊ ಒಂದು ಅವಕಾಶ ಸಿಗುವ ಸಾಧ್ಯತೆ ಇರುವುದರಿಂದ ಪಂಜಾಬ್‌ಗ ಈ ಪಂದ್ಯ ಮಹತ್ವದ್ದಾಗಿದೆ.
ಇಲ್ಲಿಯೂ ಪಂಜಾಬ್ ಸೋತದ್ದೇ ಆದಲ್ಲಿ ಈ ಬಾರಿಯ ಐಪಿಎಲ್ ಕೂಟದಿಂದ ಹೊರನಡೆದ ಮೊದಲ ತಂಡವಾಗಲಿದೆ. ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಬರ ಪ್ರತಿ ಪಂದ್ಯದಲ್ಲಿಯೂ ಮುಂದುವರಿಯುತ್ತಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಕಳೆದ ಪಂದ್ಯದಲ್ಲಿ ಫುಡ್ ಪಾಯ್ಸನ್ ನಿಂದ ಅವಕಾಶ ವಂಚಿತರಾದ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಆತ್ಮವಿಶ್ವಾಸದಲ್ಲಿ ಕೆಕೆಆರ್
ಕಳೆದ ಚೆನ್ನೈ ವಿರುದ್ಧದ ಅಲ್ಪಮೊತ್ತದ ಪಂದ್ಯವನ್ನು ಹಿಡಿದುನಿಲ್ಲಿಸಿದ ಕೆಕೆಆರ್‌ಗೆ ತನ್ನ ತಂಡದ ಬೌಲರ್‌ಗಳ ಮೇಲೆ ಆತ್ಮವಿಶ್ವಾಸ ಮೂಡಿದೆ. ಅದರಂತೆ ಈ ಪಂದ್ಯದಲ್ಲಿಯೂ ಇವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಇದೇ ಮೊದಲ ಬಾರಿ ಆರಂಭಿಕನಾಗಿ ಆಡಲಿಳಿದ ರಾಹುಲ್ ತ್ರಿಪಾಠಿ ಉತ್ತಮವಾಗಿ ಆಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಕಮಲೇಶ್ ನಾಗರ್‌ಕೋಟಿ, ಶಿವಂ ಮಾವಿ, ವರುಣ್ ಚರ್ಕವರ್ತಿ ಉತ್ತಮ ಲಯದಲ್ಲಿದ್ದಾರೆ.ತಂಡದ ನ್ಯೂನತೆ ಬಗೆಹರಿಯಲಿ
ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅನೇಕ ನ್ಯೂನತೆಗಳಿವೆ. ನಾಯಕ ಧೋನಿ ಅವುಗಳನ್ನು ಸರಿಪಡಿಸಿಕೊಂಡರೆ ಮಾತ್ರ ಆ ತಂಡ ಮತ್ತೆ ಯಶಸ್ಸಿನ ಹಾದಿಗೆ ಮರಳಬಹುದು ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೆàಕರ್ ಹೇಳಿದ್ದರು ಅದರಂತೆ ಈ ಮಾತು ಇದೀಗ ಅಕ್ಷರಶಃ ನಿಜವಾದಂತಿದೆ. ಚೆನ್ನೈ ಆಡಿದ 6 ಪಂದ್ಯದಲ್ಲಿ ಕೇವಲ ಎರಡು ಪಂದ್ಯಗಳನ್ನಷ್ಟೆ ಗೆದ್ದುಕೊಂಡಿದೆ ಇದುವರೆಗಿನ ಐಪಿಎಲ್ ಕೂಟದಲ್ಲಿ ಚೆನ್ನೈ ಇಷ್ಟು ಕಳಪೆ ಪ್ರದರ್ಶನ ತೋರಿದ್ದೇ ಇಲ್ಲ ಎಲ್ಲೋ ಒಂದೆಡೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಧೋನಿ ಎಡವುತ್ತಿರುವುದು ತಂಡದ ಸೋಲಿಗೆ ಕಾರಣವಾಗಿದೆ ಎನ್ನಲಡ್ಡಿಯಿಲ್ಲ.
ಮತ್ತೆ ಎಡವುತ್ತಿರುವ ಆರ್‌ಸಿಬಿ
ಒಂದಿಷ್ಟು ಸುಧಾರಣೆ ಬಳಿಕ ಗೆಲುವಿನ ಹಳಿ ಏರಿದ ಆರ್‌ಸಿಬಿ ಇದೀಗ ಮತ್ತೆ ಹಳೇಯ ಚಾಳಿಯನ್ನೆ ಮುಂದು ವರಿಸಿದೆ. ಆರ್‌ಸಿಬಿ ಪ್ರತೀ ಕೂಟದಲ್ಲೂ ಅಚ್ಚರಿಯ ಹಾಗೂ ಕಳಪೆ ಪ್ರದರ್ಶನ ನೀಡುವುದು ಮಾಮೂಲು. ಒಮ್ಮೆ ಇನ್ನೂರರ ಗಡಿ ದಾಟುತ್ತದೆ, ಇನ್ನೊಮ್ಮೆ ನೂರರೊಳಗೆ ಗಂಟುಮೂಟೆ ಕಟ್ಟುತ್ತದೆ. ಒಟ್ಟಾರೆ ಅಸ್ಥಿರ ಪ್ರದರ್ಶನವೇ ತಂಡಕ್ಕೆ ಮುಳುವಾಗುತ್ತಿರುವುದು ವಿಪರ್ಯಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.