ಸೋತು ಹೈರಾಣಾದ ಹೈದರಾಬಾದ್‌ಗೆ ಅಜೇಯ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
Team Udayavani, Sep 29, 2020, 1:28 AM IST
ಅಬುಧಾಬಿ: ಐಪಿಎಲ್ ಕೂಟದ ಮಂಗಳವಾರದ ಮುಖಾಮುಖೀ ಪರಸ್ಪರ ವಿರುದ್ಧ ಸಾಧಕ ತಂಡಗಳೆರಡರ ನಡುವಿನ ಮೇಲಾಟವಾಗಿ ಪರಿಣಮಿಸಲಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎರಡರಲ್ಲೂ ಸೋತ ಸನ್‌ರೈಸರ್ ಹೈದರಾಬಾದ್ ಅಬುಧಾಬಿಯಲ್ಲಿ ಎದುರಾಗಲಿವೆ.
ಮೇಲ್ನೋಟಕ್ಕೆ ಸಾಮಾನ್ಯ ತಂಡವಾಗಿರುವ ಶ್ರೇಯಸ್ ಅಯ್ಯರ್ ಸಾರಥ್ಯದ ಡೆಲ್ಲಿ “ಸೂಪರ್’ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಬಳಿಕ ಚೆನ್ನೈಗೆ 44 ರನ್ನುಗಳ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಹ್ಯಾಟ್ರಿಕ್ ಗೆಲುವಿನ ಯೋಜನೆಯಲ್ಲಿದೆ.
ಇನ್ನೊಂದೆಡೆ ಸನ್‌ರೈಸರ್ ಹೈದರಾಬಾದ್ ಪಾಳೆ ಯದ ಮೇಲೆ ಇನ್ನೂ ಸೋಲಿನ ಕಾರ್ಮೋಡ ಕವುಚಿ ಕೊಂಡಿದೆ. ಡೆಲ್ಲಿ ವಿರುದ್ಧವಾದರೂ ಗೆಲುವಿನ ಸೂರ್ಯೋದಯವಾದೀತೇ ಎಂಬ ನಿರೀಕ್ಷೆ ವಾರ್ನರ್ ಬಳಗದ್ದು.
ಹೈದರಾಬಾದ್ ವೈಫಲ್ಯ
ಹೈದರಾಬಾದ್ ಬ್ಯಾಟಿಂಗ್, ಬೌಲಿಂಗ್ ವಿಭಾಗಗಳೆ ರಡರಲ್ಲೂ ವೈಫಲ್ಯ ಕಾಣುತ್ತಿದೆ. ಆರ್‌ಸಿಬಿ ಎದುರು ಬೇರ್‌ಸ್ಟೊ-ಪಾಂಡೆ ಸಾಹಸದಿಂದ ಗೆಲುವಿನ ಬಾಗಿಲಿನ ತನಕ ಬಂತಾದರೂ ಬಳಿಕ ನಾಟಕೀಯ ಕುಸಿತ ಕಂಡು 10 ರನ್ನಿನಿಂದ ಶರಣಾಯಿತು. ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿಯೂ ಬರೀ 142 ರನ್ ಗಳಿಸಿ ಸೋಲಿಗೆ ಹಾದಿ ಮಾಡಿಕೊಂಡಿತು.
ವಾರ್ನರ್, ಬೇರ್‌ಸ್ಟೊ, ಪಾಂಡೆ ಬಿಟ್ಟರೆ ಹೈದರಾ ಬಾದ್ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸ್ಟಾರ್ ಆಟ ಗಾರರ ಹೆಸರೇ ಕಾಣಿಸುತ್ತಿಲ್ಲ. ಡೆಲ್ಲಿ ವಿರುದ್ಧ ಕೇನ್ ವಿಲಿಯಮ್ಸನ್ ಆಡುತ್ತಾರೆಂಬುದು ತಂಡದ ಪಾಲಿನ ಸಿಹಿ ಸುದ್ದಿ. ಆದರೆ ಇವರಿಗಾಗಿ ಮತ್ತೂಬ್ಬ ವಿದೇಶಿ ಆಟ ಗಾರನನ್ನು ಕೈಬಿಡುವುದೇ ಸಮಸ್ಯೆಯಾಗಿ ಕಾಡಿದೆ. ಇಲ್ಲಿ ಅಫ್ಘಾನ್ ಆಲ್‌ರೌಂಡರ್ ಮೊಹಮ್ಮದ್ ನಬಿ ಜಾಗ ಖಾಲಿ ಮಾಡಬೇಕಾದುದು ಅನಿವಾರ್ಯ.
ಭುವನೇಶ್ವರ್, ರಶೀದ್ ಖಾನ್ ಹೊರತಾಗಿಯೂ ತಂಡದ ಬೌಲಿಂಗ್ ವಿಭಾಗ ತೀರಾ ದುರ್ಬಲ. ಆಸೀಸ್ ವೇಗಿ ಬಿಲ್ಲಿ ಸ್ಟಾನ್‌ಲೇಕ್ ಇದ್ದರೂ ವಿದೇಶಿ ಕೋಟಾ ದಲ್ಲಿ ಇವರನ್ನು ಒಳತರುವುದೇ ದೊಡ್ಡ ಸಮಸ್ಯೆ.
ಡೆಲ್ಲಿ ಸೈಲೆಂಟ್ ಕಿಲ್ಲರ್
ಸಾಮಾನ್ಯ ತಂಡವೆಂದು ಭಾವಿಸಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈಗ “ಸೈಲೆಂಟ್ ಕಿಲ್ಲರ್’ ಆಗಿ ಗೋಚರಿ ಸುತ್ತಿದೆ. ಈಗಾಗಲೇ ಪಂಜಾಬ್ ಮತ್ತು ಚೆನ್ನೈಗೆ ಆಘಾತ ವಿಕ್ಕಿದೆ. ಮೇಲ್ನೋಟಕ್ಕೆ ಹೈದರಾಬಾದ್‌ಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ಪೃಥ್ವಿ ಶಾ, ಧವನ್, ಅಯ್ಯರ್, ಹೆಟ್‌ಮೈರ್, ಆಲ್‌ರೌಂಡರ್ ಸ್ಟೋಯಿನಿಸ್, ಬೌಲಿಂಗ್‌ನಲ್ಲಿ ರಬಾಡ, ನೋರ್ಜೆ, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ ಅವರೆಲ್ಲ ಡೆಲ್ಲಿ ತಂಡಕ್ಕೆ ಶಕ್ತಿ ತುಂಬಿದ್ದಾರೆ. ಗಾಯಾಳಾಗಿದ್ದ ಆರ್. ಅಶ್ವಿನ್ ವಾಪಸಾದರೆ ಡೆಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.