ಐಪಿಎಲ್: ಅಂಪಾಯರ್‌ಗಳಿಗೂ ಕೋವಿಡ್ ಹೆದರಿಕೆ
Team Udayavani, Sep 3, 2020, 6:13 PM IST
ಸಾಂದರ್ಭಿಕ ಚಿತ್ರ
ದುಬಾೖ: ಐಪಿಎಲ್‌ಗೂ ಕೋವಿಡ್ ಭೀತಿ ತಟ್ಟಿರುವುದರಿಂದ ಇಲ್ಲಿ ಕರ್ತವ್ಯ ನಿಭಾಯಿಸುವ ಅಂಪಾಯರ್‌ಗಳಿಗೂ ಹೆದರಿಕೆ ಶುರುವಾಗಿದೆ. ಎಲೈಟ್ ಪ್ಯಾನಲ್‌ನಿಂದ ಆರರ ಬದಲು ಕೇವಲ ನಾಲ್ವರು ಅಂಪಾಯರ್‌ಗಳಷ್ಟೇ ಬಿಸಿಸಿಐ ಆಹ್ವಾನವನ್ನು ಸ್ವೀಕರಿಸಿದ್ದು, ಉಳಿದಿಬ್ಬರು ಕೋವಿಡ್ ಕಾರಣದಿಂದ ದೂರವೇ ಉಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್‌ಗಾಗಿ ಎಲೈಟ್ ಪ್ಯಾನಲ್‌ನ 6 ಹಾಗೂ ಭಾರತದ 10 ಅಂಪಾಯರ್‌ಗಳಿಗೆ ಬಿಸಿಸಿಐ ಆಹ್ವಾನ ನೀಡಿತ್ತು. ಆದರೀಗ ಎಲೈಟ್ ಪ್ಯಾನಲ್‌ನ ಕೇವಲ ನಾಲ್ವರಷ್ಟೇ ಒಪ್ಪಿಗೆ ಸಲ್ಲಿಸಿದ್ದಾರೆ. ಇವರೆಂದರೆ ಕ್ರಿಸ್ ಗಫಾನಿ (ನ್ಯೂಜಿಲ್ಯಾಂಡ್), ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್), ಪಾಲ್ ರೀಫೆಲ್ (ಆಸ್ಟ್ರೇಲಿಯ) ಮತ್ತು ನಿತಿನ್ ಮೆನನ್ (ಭಾರತ). ದೂರ ಉಳಿದ ಇಬ್ಬರು ಅಂಪಾಯರ್‌ಗಳು ಯಾರೆಂಬುದು ತಿಳಿದು ಬಂದಿಲ್ಲ. ಆಹ್ವಾನ ಸ್ವೀಕರಿಸಿದ ಅಂಪಾಯರ್‌ಗಳೆಲ್ಲ ಸೆ. 10ರ ಒಳಗೆ ಯುಎಇಗೆ ಆಗಮಿಸಲಿದ್ದಾರೆ.
ರೆಫ್ರಿ ನೇಮಕಕ್ಕೂ ಸಮಸ್ಯೆ
ಮ್ಯಾಚ್ ರೆಫ್ರಿ ನೇಮಕವೂ ಬಿಸಿಸಿಐಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈವರೆಗೆ ಬಿಸಿಸಿಐ ಆಹ್ವಾನಕ್ಕೆ ಸ್ಪಂದಿಸಿದ ಎಲೈಟ್ ಪ್ಯಾನಲ್‌ನ ಏಕೈಕ ರೆಫ್ರಿಯೆಂದರೆ ಜಾವಗಲ್ ಶ್ರೀನಾಥ್. ಐಪಿಎಲ್‌ಗೆ ಬೇರೆ ಯಾವುದೇ ಅಂತಾರಾಷ್ಟ್ರೀಯ ಸರಣಿಯಿಂದ ಹೇಳಿಕೊಳ್ಳುವಂಥ ಅಡಚಣೆ ಆಗದಿರುವುದರಿಂದ ಎಲೈಟ್ ಪ್ಯಾನಲ್‌ನಲ್ಲಿ ಅಧಿಕ ಅಂಪಾಯರ್‌ಗಳನ್ನು ನೇಮಿಸುವುದು ಬಿಸಿಸಿಐ ಯೋಜನೆಯಾಗಿತ್ತು. ಆದರೀಗ ಇದಕ್ಕೆ ಹಿನ್ನಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.