ಅವಕಾಶಕ್ಕಿಂತ ತಂಡದ ಗೆಲುವು ಮುಖ್ಯ: ತಾಹಿರ್
Team Udayavani, Oct 15, 2020, 7:05 PM IST
ಶಾರ್ಜಾ: ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಳೆದ ಆವೃತ್ತಿಯಲ್ಲಿ ಯಶಸ್ವಿಯಾಗಿದ್ದ ಇಮ್ರಾನ್ ತಾಹಿರ್ ಪ್ರಸಕ್ತ ಆವೃತ್ತಿಯಲ್ಲಿ ಇನ್ನೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಪಂದ್ಯದ ವೇಳೆ ನೀರಿನ ಬಾಟಲ್‌ಗಳೊಂದಿಗೆ ಅಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದ. ಆಫ್ರಿಕಾದ ಹಿರಿಯ ಲೆಗ್ ಸ್ಪಿನ್ನರ್ 2019ರ ಐಪಿಎಲ್ ಕೂಟದಲ್ಲಿ 26 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ಅವರು ಇನ್ನೂ ಒಂದೂ ಪಂದ್ಯವಾಡಿಲ್ಲ. ಬದಲಿಗೆ ಸಹ ಆಟಗಾರರಿಗೆ ನೀರನ್ನು ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಇದರಿಂದ ನನಗೆ ಯಾವುದೇ ಮುಜುಗರ ಅಥವಾ ಅವಮಾನವಿಲ್ಲ ಎಂಬುದನ್ನು ತಾಹಿರ್ ಹೇಳಿಕೊಂಡಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಬರೆದಿರುವ ಅವರು “ಈ ಹಿಂದೆ ನಾನು ಅಂಗಳದಲ್ಲಿ ಆಡುವಾಗ ನನಗೆ ಅದೆಷ್ಟೋ ಆಟಗಾರರು ನೀರನ್ನು ತಂದುಕೊಟ್ಟಿದ್ದಾರೆ. ಇದೀಗ ಅರ್ಹ ಆಟಗಾರರು ಅಂಗಳದಲ್ಲಿದ್ದಾರೆ. ಅವರಿಗೆ ನೀರು ನೀಡಿ ಬೆಂಬಲಿಸುವುದು ನನ್ನ ಕರ್ತವ್ಯ. ನಾನು ಆಡುವುದು ಅಥವಾ ಆಡದೇ ಇರುವುದು ಮುಖ್ಯವಲ್ಲ, ಪಂದ್ಯ ಗೆಲ್ಲುವುದು ಮುಖ್ಯ. ಆಡುವ ಅವಕಾಶ ಪಡೆದರೆ ಖಂಡಿತಾ ನನ್ನ ಕಡೆಯಿಂದ ಉತ್ತಮ ಪ್ರದರ್ಶನ ತಂಡಕ್ಕೆ ನೀಡುತ್ತೇನೆ ನನಗೆ ತಂಡ ಮುಖ್ಯ’ ಎಂದು ತಾಹಿರ್ ಹೇಳಿದ್ದಾರೆ.
ತಾಹಿರ್ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕ್ರಿಕೆಟ್ ಅಭಿಮಾನಿಗಳು ಸಿಎಸ್‌ಕೆ ಹಿರಿಯ ಸ್ಪಿನ್ನರ್ ನಿಜವಾದ ಕ್ರೀಡಾಪಟು ಎಂದು ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.