ಬುರ್ಜ್ ಖಲೀಫಾಕ್ಕೆ ಕೆಕೆಆರ್ ವರ್ಣ
Team Udayavani, Sep 24, 2020, 1:19 AM IST
ದುಬಾೖ: ಇಲ್ಲಿನ ವಿಶ್ವವಿಖ್ಯಾತ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ಶಾರುಖ್ ಖಾನ್ ಒಡೆತನದ ಕೆಕೆಆರ್ ಬಣ್ಣದಿಂದ ಕಂಗೊಳಿಸಿದೆ. ಮುಂಬೈ-ಕೆಕೆಆರ್ ನಡುವಿನ ಬುಧವಾರದ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಈ ಅಲಂಕಾರ ಮಾಡಲಾಗಿದೆ. ಕಟ್ಟಡಕ್ಕೆ ಕೆಕೆಆರ್‌ನ ನೇರಳೆ ಹಾಗೂ ಚಿನ್ನದ ಬಣ್ಣದ ಎಲ್‌ಇಡಿ ಲೈಟಿಂಗ್ ಮಾಡಲಾಗಿದ್ದು, ಕ್ರಿಕೆಟಿಗರ ಚಿತ್ರಗಳೂ ಮೂಡಿಬಂದಿವೆ.
“ಇದು ಬುಧವಾರದ ಸುಡುಮದ್ದು ಸಂಭ್ರಕ್ಕೊಂದು ಮುನ್ನುಡಿಯಾಗಿದೆ. ಥ್ಯಾಂಕ್ಯೂ ಬುರ್ಜ್ ಖಲೀಫಾ ಫಾರ್ ಲೈಟಿಂಗ್ ಅಪ್ ಇನ್ ಕೆಕೆಆರ್. ವಾಟ್ ಎ ವೆಲ್‌ಕಮ್’ ಎಂದು ಕೆಕೆಆರ್ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.