5ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

ಟ್ರೋಫಿ ಉಳಿಸಿಕೊಂಡ 2ನೇ ತಂಡ ; ಐದೂ ಸಲ ರೋಹಿತ್‌ ನಾಯಕ

Team Udayavani, Nov 11, 2020, 6:30 AM IST

5ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

ದುಬಾೖ: ರೋಹಿತ್‌ ಶರ್ಮ ಸಾರಥ್ಯದ ಮುಂಬೈ ಇಂಡಿಯನ್ಸ್‌ ದಾಖಲೆ 5ನೇ ಸಲ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದೆ. ಮಂಗಳವಾರದ ಪ್ರಶಸ್ತಿ ಸಮರದಲ್ಲಿ ಅದು ಮೊದಲ ಬಾರಿಗೆ ಫೈನಲ್‌ ಆಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ಮಗುಚಿತು. ಜತೆಗೆ ಟ್ರೋಫಿ ಉಳಿಸಿಕೊಂಡ ಕೇವಲ 2ನೇ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಕಳೆದ ವರ್ಷ ಚೆನ್ನೈಯನ್ನು ಮಣಿಸಿದ್ದ ಮುಂಬೈ ಹಾಲಿ ಚಾಂಪಿಯನ್‌ ಆಗಿತ್ತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ 7 ವಿಕೆಟಿಗೆ 156 ರನ್‌ ಗಳಿಸಿದರೆ, ಮುಂಬೈ 18.4 ಓವರ್‌ಗಳಲ್ಲಿ 5 ವಿಕೆಟಿಗೆ 157 ರನ್‌ ಬಾರಿಸಿ ಮೆರೆಯಿತು. ಡೆಲ್ಲಿಯ ಕಪ್‌ ಕನಸು ಭಗ್ನಗೊಂಡಿತು. ಅರಬ್‌ ನಾಡಿನಲ್ಲಿ 13ನೇ ಐಪಿಎಲ್‌ ಸುಸಂಪನ್ನಗೊಂಡಿತು.

ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಸಲ ಫೈನಲ್‌ ಆಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು 7 ವಿಕೆಟಿಗೆ 156 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿದರೆ, ಮುನ್ನುಗ್ಗಿ ಬಾರಿಸತೊಡಗಿದ ಮುಂಬೈ 18.4 ಓವರ್‌ಗಳಲ್ಲಿ 5 ವಿಕೆಟಿಗೆ 157 ರನ್‌ ಪೇರಿಸಿ ಸಂಭ್ರಮಿಸಿತು. ಚೇಸಿಂಗ್‌ ವೇಳೆ ನಾಯಕ ರೋಹಿತ್‌ ಶರ್ಮ 51 ಎಸೆತಗಳಿಂದ 68 ರನ್‌ ಬಾರಿಸಿ ಮಿಂಚಿದರು (5 ಬೌಂಡರಿ, 4 ಸಿಕ್ಸರ್‌). ಇಶಾನ್‌ ಕಿಶನ್‌ ಅಜೇಯ 33, ಡಿ ಕಾಕ್‌ 20 ಹಾಗೂ ಸೂರ್ಯಕುಮಾರ್‌ 19 ರನ್‌ ಹೊಡೆದರು.

ಬೌಲ್ಟ್ ಭಯಾನಕ ಬೌಲಿಂಗ್‌
ಟ್ರೆಂಟ್‌ ಬೌಲ್ಟ್ ಅವರ ಘಾತಕ ಬೌಲಿಂಗ್‌, ಮೊದಲ ಎಸೆತದಲ್ಲೇ ಉರುಳಿದ ಸ್ಟೋಯಿನಿಸ್‌, 3 ವಿಕೆಟ್‌ಗಳ ಕ್ಷಿಪ್ರ ಪತನ, ಅಯ್ಯರ್‌-ಪಂತ್‌ ಜೋಡಿಯ ಹೋರಾಟ ಹಾಗೂ ಅರ್ಧ ಶತಕದ ಆಟ ಮೊದಲರ್ಧದ ಹೈಲೈಟ್‌ ಆಗಿತ್ತು. ಪಂತ್‌ 56 ರನ್‌ ಹೊಡೆದರೆ, ಭರ್ತಿ 50 ಎಸೆತ ನಿಭಾಯಿಸಿದ ಶ್ರೇಯಸ್‌ ಅಯ್ಯರ್‌ 65 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಕಪ್ತಾನನ ಆಟದಲ್ಲಿ 6 ಬೌಂಡರಿ, 2 ಸಿಕ್ಸರ್‌ ಸೇರಿತ್ತು.

ಬೌಲ್ಟ್ ಮೊದಲ ಎಸೆತದಲ್ಲೇ ಮಾರ್ಕಸ್‌ ಸ್ಟೋಯಿನಿಸ್‌ ವಿಕೆಟ್‌ ಕಿತ್ತು ಡೆಲ್ಲಿಗೆ ಶಾಕ್‌ ಕೊಟ್ಟರು. ಡೆಲ್ಲಿಗೆ ಅರ್ಧ ಬ್ಯಾಟಿಂಗ್‌ ಶಕ್ತಿ ಉಡುಗಿ ಹೋದ ಅನುಭವವಾಯಿತು. ಈ ಆಘಾತದೊಂದಿಗೆ ಡೆಲ್ಲಿ ಪ್ರಸಕ್ತ ಐಪಿಎಲ್‌ನ ಮೊದಲ ಓವರಿನಲ್ಲಿ ಸರ್ವಾಧಿಕ 10 ವಿಕೆಟ್‌ ಉದುರಿಸಿಕೊಂಡ ಸಂಕಟಕ್ಕೆ ಸಿಲುಕಿತು. ಇದರಲ್ಲಿ 5 ವಿಕೆಟ್‌ ಮುಂಬೈ ವಿರುದ್ಧವೇ ಉರುಳಿತ್ತು.

ಈ ಪರಾಕ್ರಮದೊಂದಿಗೆ 2020ರ ಐಪಿಎಲ್‌ನ ಮೊದಲ ಓವರಿನಲ್ಲೇ ಟ್ರೆಂಟ್‌ ಬೌಲ್ಟ್ ಕಿತ್ತ ವಿಕೆಟ್‌ಗಳ ಸಂಖ್ಯೆ 8ಕ್ಕೆ ಏರಿತು. ಇದು ಐಪಿಎಲ್‌ ದಾಖಲೆಯಾಗಿದೆ. 2016ರಲ್ಲಿ ಭುವನೇಶ್ವರ್‌ ಕುಮಾರ್‌ 6 ವಿಕೆಟ್‌ ಉರುಳಿಸಿದ್ದು ಹಿಂದಿನ ದಾಖಲೆ. ಬೌಲ್ಟ್ 15 ಸಲ ಪಂದ್ಯದ ಮೊದಲ ಓವರ್‌ ಎಸೆದಿದ್ದರು.

ಮೊದಲ ಕ್ವಾಲಿಫೈಯರ್‌ ಪಂದ್ಯದ ಮೊದಲ ಓವರಿನಲ್ಲೇ ಡೆಲ್ಲಿಗೆ ಅವಳಿ ಆಘಾತ ನೀಡಿದ್ದ ಬೌಲ್ಟ್ ಅದೇ ಆವೇಶದಲ್ಲಿದ್ದರು. ದ್ವಿತೀಯ ಓವರಿನಲ್ಲಿ ಅವರು ಅಜಿಂಕ್ಯ ರಹಾನೆ ವಿಕೆಟ್‌ ಕಿತ್ತು ಇದನ್ನು ಸಾಬೀತುಪಡಿಸಿದರು. ರಹಾನೆ ಹೊಡೆದದ್ದು ಎರಡೇ ರನ್‌. 16 ರನ್ನಿಗೆ ಡೆಲ್ಲಿಯ 2 ವಿಕೆಟ್‌ ಬಿತ್ತು. ಇದರೊಂದಿಗೆ ಬೌಲ್ಟ್ ಈ ಕೂಟದ ಪವರ್‌ ಪ್ಲೇ ಅವಧಿಯಲ್ಲಿ 36 ಓವರ್‌ಗಳಿಂದ ಸರ್ವಾಧಿಕ 16 ವಿಕೆಟ್‌ ಕಿತ್ತು ಮಿಚೆಲ್‌ ಜಾನ್ಸನ್‌ ಅವರ 2013ರ ದಾಖಲೆಯನ್ನು ಸರಿದೂಗಿಸಿದರು.

4ನೇ ಓವರ್‌ ಮೂಲಕ ದಾಳಿಗಿಳಿದ ಜಯಂತ್‌ ಯಾದವ್‌ ಕೂಡ ಡೆಲ್ಲಿಗೆ ಕಂಟಕವಾಗಿ ಕಾಡಿದರು. ಶಿಖರ್‌ ಧವನ್‌ ಅವರ ಬಿಗ್‌ ವಿಕೆಟನ್ನು ಬುಟ್ಟಿಗೆ ಹಾಕಿಕೊಂಡರು. ಸ್ವೀಪ್‌ ಹೊಡೆತಕ್ಕೆ ಮುಂದಾದ ಧವನ್‌ (15) ಕ್ಲೀನ್‌ಬೌಲ್ಡ್‌ ಆಗಿ ನಿರ್ಗಮಿಸಿದರು. ಪವರ್‌ ಪ್ಲೇ ಅವಧಿಯಲ್ಲಿ ಡೆಲ್ಲಿ ಸ್ಕೋರ್‌ 3ಕ್ಕೆ 43 ರನ್‌ ಆಗಿತ್ತು. ಆಗಲೇ ಮುಂಬೈ ಫೀಲ್ಡರ್ 3 ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿಯಾಗಿತ್ತು.

ಅಯ್ಯರ್‌-ಪಂತ್‌ ಆಸರೆ
ಕುಸಿದ ಡೆಲ್ಲಿ ಸರದಿಗೆ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ಕೀಪರ್‌ ರಿಷಭ್‌ ಪಂತ್‌ ಸೇರಿ ಆಸರೆ ಒದಗಿಸಿದರು. ನಿಧಾನವಾಗಿ ಸ್ಕೋರ್‌ ಗತಿ ಏರುತ್ತ ಹೋಯಿತು. 10 ಓವರ್‌ ಮುಕ್ತಾಯಕ್ಕೆ ಡೆಲ್ಲಿ 75 ರನ್‌ ಪೇರಿಸಿ ಹೋರಾಟದ ಸೂಚನೆ ನೀಡಿತು. ಅಯ್ಯರ್‌ ಜವಾಬ್ದಾರಿಯುತ ಆಟವಾಡಿದರೆ, ಪಂತ್‌ ನೈಜ ಸ್ಫೋಟಕ ರೂಪ ತೋರತೊಡಗಿದರು.

ಸರಿಯಾದ ಹೊತ್ತಿನಲ್ಲಿ ಕ್ರೀಸ್‌ ಆಕ್ರಮಿಸಿಕೊಂಡ ಪಂತ್‌ 12ನೇ ಅರ್ಧ ಶತಕೊಂದಿಗೆ ಮೆರೆದರು. 38 ಎಸೆತಗಳಿಂದ 56 ರನ್‌ ಸಿಡಿಸಿದರು (4 ಬೌಂಡರಿ, 2 ಸಿಕ್ಸರ್‌). ಅಯ್ಯರ್‌ ಜತೆ 4ನೇ ವಿಕೆಟಿಗೆ 69 ಎಸೆತಗಳಿಂದ 96 ರನ್‌ ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಕೋಲ್ಟರ್‌ ನೈಲ್‌ ಈ ಜತೆಯಾಟವನ್ನು ಬೇರ್ಪಡಿಸಿದರು. ಅನಂತರ ಬಂದ ಹೆಟ್‌ಮೈರ್‌ ಬರೀ 5 ರನ್ನಿಗೆ ಆಟ ಮುಗಿಸಿದರು. ಬೌಲ್ಟ್ ಬುಟ್ಟಿಗೆ 3ನೇ ವಿಕೆಟ್‌ ಬಿತ್ತು. ಅಕ್ಷರ್‌ ಪಟೇಲ್‌ 9 ರನ್‌ ಮಾಡಿ ವಾಪಸಾದರು.ಮುಂಬೈ ಪರ ಬೌಲ್ಟ್ 3, ಕೋಲ್ಟರ್‌ ನೈಲ್‌ 2 ವಿಕೆಟ್‌ ಕಿತ್ತರು. ಆದರೆ ಬುಮ್ರಾ ವಿಫ‌ಲರಾದರು.

ಒಂದೇ ಬದಲಾವಣೆ
ಫೈನಲ್‌ ಪಂದ್ಯಕ್ಕಾಗಿ ಮುಂಬೈ ತಂಡದಲ್ಲಿ ಒಂದು ಬದಲಾವಣೆ ಕಂಡು ಬಂತು. ರಾಹುಲ್‌ ಚಹರ್‌ ಬದಲು ಜಯಂತ್‌ ಯಾದವ್‌ ಆಡಲಿಳಿದರು. ಆದರೆ ಡೆಲ್ಲಿ ತನ್ನ ತಂಡದಲ್ಲಿ ಯಾವುದೇ ಪರಿವರ್ತನೆ ಮಾಡಿಕೊಳ್ಳಲಿಲ್ಲ. ಹೈದರಾಬಾದ್‌ ವಿರುದ್ಧ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಜಯಿಸಿದ ತಂಡವನ್ನೇ ನೆಚ್ಚಿಕೊಂಡಿತು.

ಸ್ಕೋರ್‌ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಮಾರ್ಕಸ್‌ ಸ್ಟೋಯಿನಿಸ್‌ ಸಿ ಡಿ ಕಾಕ್‌ ಬಿ ಬೌಲ್ಟ್ 0
ಶಿಖರ್‌ ಧವನ್‌ ಬಿ ಜಯಂತ್‌ 15
ಅಜಿಂಕ್ಯ ರಹಾನೆ ಸಿ ಡಿ ಕಾಕ್‌ ಬಿ ಬೌಲ್ಟ್ 2
ಶ್ರೇಯಸ್‌ ಅಯ್ಯರ್‌ ಔಟಾಗದೆ 65
ರಿಷಭ್‌ ಪಂತ್‌ ಸಿ ಹಾರ್ದಿಕ್‌ ಬಿ ಕೋಲ್ಟರ್‌ ನೈಲ್‌ 56
ಹೆಟ್‌ಮೈರ್‌ ಸಿ ಕೋಲ್ಟರ್‌ ನೈಲ್‌ ಬಿ ಬೌಲ್ಟ್ 5
ಅಕ್ಷರ್‌ ಪಟೇಲ್‌ ಸಿ ರಾಯ್‌ ಬಿ ಕೋಲ್ಟರ್‌ ನೈಲ್‌ 9
ಕಾಗಿಸೊ ರಬಾಡ ರನೌಟ್‌ 0

ಇತರ 4
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 156
ವಿಕೆಟ್‌ ಪತನ: 1-0, 2-16, 3-22, 4-118, 5-137, 6-149, 7-156.

ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-30-3
ಜಸ್‌ಪ್ರೀತ್‌ ಬುಮ್ರಾ 4-0-28-0
ಜಯಂತ್‌ ಯಾದವ್‌ 4-0-25-1
ನಥನ್‌ ಕೋಲ್ಟರ್‌ ನೈಲ್‌ 4-0-29-2
ಕೃಣಾಲ್‌ ಪಾಂಡ್ಯ 3-0-30-0
ಕೈರನ್‌ ಪೊಲಾರ್ಡ್‌ 1-0-13-0

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ದುಬೆ ಬಿ ನೋರ್ಜೆ 68
ಕ್ವಿಂಟನ್‌ ಡಿ ಕಾಕ್‌ ಸಿ ಪಂತ್‌ ಬಿ ಸ್ಟೋಯಿನಿಸ್‌ 20
ಸೂರ್ಯಕುಮಾರ್‌ ರನೌಟ್‌ 19
ಇಶಾನ್‌ ಕಿಶನ್‌ ಔಟಾಗದೆ 33
ಕೈರನ್‌ ಪೊಲಾರ್ಡ್‌ ಬಿ ರಬಾಡ 9
ಹಾರ್ದಿಕ್‌ ಪಾಂಡ್ಯ ಸಿ ರಹಾನೆ ಬಿ ನೋರ್ಜೆ 3
ಕೃಣಾಲ್‌ ಪಾಂಡ್ಯ ಔಟಾಗದೆ 1

ಇತರ 4
ಒಟ್ಟು(18.4 ಓವರ್‌ಗಳಲ್ಲಿ 5 ವಿಕೆಟಿಗೆ) 157
ವಿಕೆಟ್‌ ಪತನ: 1-45, 2-90, 3-137, 4-147, 5-156.

ಬೌಲಿಂಗ್‌
ಆರ್‌. ಅಶ್ವಿ‌ನ್‌ 4-0-28-0
ಕಾಗಿಸೊ ರಬಾಡ 3-0-32-1
ಆನ್ರಿಚ್‌ ನೋರ್ಜೆ 2.4-0-25-2
ಮಾರ್ಕಸ್‌ ಸ್ಟೋಯಿನಿಸ್‌ 2-0-23-1
ಅಕ್ಷರ್‌ ಪಟೇಲ್‌ 4-0-16-0
ಪ್ರವೀಣ್‌ ದುಬೆ 3-0-29-0

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.