ಪ್ಲೇಆಫ್ ಹೋರಾಟದಲ್ಲಿ ಪಂಜಾಬ್ ಮೇಲುಗೈ
ಸೋಲಿನೊಂದಿಗೆ 5ನೇ ಸ್ಥಾನಕ್ಕೇ ಕುಸಿದ ಕೋಲ್ಕತ
Team Udayavani, Oct 26, 2020, 11:48 PM IST
ಶಾರ್ಜಾ: ಪ್ಲೇಆಫ್ ಗೆರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಕೋಲ್ಕತ ನೈಟ್ ರೈಡರ್ಸ್ ವಿರುದ್ಧ ಸೋಮವಾರ 8 ವಿಕೆಟ್‌ಗಳಿಂದ ಸಲೀಸಾಗಿ ಗೆದ್ದಿದೆ. ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಕೋಲ್ಕತ 5ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಪ್ಲೇಆಫ್ ಹೋರಾಟದಲ್ಲಿ ಪಂಜಾಬ್ ಮೇಲುಗೈ ಸಾಧಿಸಿದೆ. ಈ ಎರಡೂ ತಂಡಗಳಿಗೆ ತಲಾ ಎರಡು ಪಂದ್ಯಗಳು ಬಾಕಿಯಿವೆ. ಎರಡನ್ನೂ ಗೆದ್ದ ತಂಡ ಪ್ಲೇಆಫ್ ಗೆರಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 149 ರನ್ ಗಳಿಸಿತ್ತು. ಇದನ್ನು ಹಿಂಬಾಲಿಸಿದ ಪಂಜಾಬ್ 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 150 ರನ್ ಗಳಿಸಿತು.
ರನ್ ಬೆನ್ನತ್ತಲು ಹೊರಟ ಪಂಜಾಬ್‌ಗ ಕ್ರಿಸ್ ಗೇಲ್ ಮತ್ತು ಮನ್‌ದೀಪ್ ಸಿಂಗ್ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ನೆರವಾದರು. ನಾಯಕ ರಾಹುಲ್ ಬೇಗನೆ ಔಟಾದರೂ ಈ ಇಬ್ಬರು ತಂಡವನ್ನು ದಡ ಹತ್ತಿಸಿದರು. ಗೇಲ್ 29 ಎಸೆತದಲ್ಲಿ 2 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 51 ರನ್ ಚಚ್ಚಿದರು. ಸ್ವಲ್ಪ ನಿಧಾನವಾಗಿ ಆಡಿದರೂ ಸ್ಥಿರವಾಗಿ ಆಡಿದ ಮನ್‌ದೀಪ್ 56 ಎಸೆತದಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳ ಮೂಲಕ 66 ರನ್ ಗಳಿಸಿದರು. ಅವರು ತಂದೆಯ ಸಾವಿನ ದುಃಖದಲ್ಲಿದ್ದಾರೆ ಎನ್ನುವುದನ್ನು ಮರೆಯಬಾರದು.
ಕುಸಿದ ಕೋಲ್ಕತ: ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ ತೀವ್ರ ಕುಸಿತ ಅನುಭವಿಸಿತು. ಆದರೆ ಆರಂಭಕಾರ ಶುಬ¾ನ್ ಗಿಲ್ ಹಾಗೂ ನಾಯಕ ಇಯಾನ್ ಮಾರ್ಗನ್ ಜವಾಬ್ದಾರಿಯುತ ಬ್ಯಾಟಿಂಗ್ ಸಾಹಸದಿಂದ ಹೀನಾಯ ಕುಸಿತದಿಂದ ಪಾರಾಯಿತು. ಗಿಲ್ ಬಹುಮೂಲ್ಯ 57 ರನ್ ಬಾರಿಸಿದರು. 45 ಎಸೆತಗಳ ಈ ಇನಿಂಗ್ಸ್‌ನಲ್ಲಿ 4 ಸಿಕ್ಸರ್, 3 ಬೌಂಡರಿ ಸೇರಿತ್ತು. ಮಾರ್ಗನ್ ಗಳಿಕೆ 25 ಎಸೆತಗಳಿಂದ 40 ರನ್ (5 ಬೌಂಡರಿ, 2 ಸಿಕ್ಸರ್).
ಮೊದಲು ಬೌಲಿಂಗ್ ಆಯ್ದುಕೊಳ್ಳುವ ಪಂಜಾಬ್ ಕಪ್ತಾನ ಕೆ.ಎಲ್.ರಾಹುಲ್ ನಿರ್ಧಾರ ಮೊದಲ ಓವರಿನಿಂದಲೇ ಯಶಸ್ಸು ಪಡೆಯುತ್ತ ಹೋಯಿತು. ಕೆಕೆಆರ್ 10 ರನ್ನಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ಈ ಹಂತದಲ್ಲಿ ಆರಂಭಕಾರ ಗಿಲ್ ಮತ್ತು ಮಾರ್ಗನ್ 81 ರನ್ನುಗಳ ಬಿರುಸಿನ ಜತೆಯಾಟವೊಂದನ್ನು ನಡೆಸಿದರು. ಮಾರ್ಗನ್ ಔಟಾದ ಬಳಿಕ ಮತ್ತೆ ಕೋಲ್ಕತ ಕುಸಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.