IPL 2020 : ಇಂದು ಕಾಂಗರೂ ಕಪ್ತಾನರ ಫೈಟ್‌


Team Udayavani, Oct 22, 2020, 6:00 AM IST

IPL 2020 : ಇಂದು ಕಾಂಗರೂ ಕಪ್ತಾನರ ಫೈಟ್‌

ದುಬಾೖ: ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಸನ್‌ರೈಸರ್ ಹೈದರಾಬಾದ್‌ ತಂಡಗಳು ಗುರುವಾರ ದುಬಾೖಯಲ್ಲಿ ಮಹತ್ವದ ಪಂದ್ಯದದಲ್ಲಿ ಪಾಲ್ಗೊಳ್ಳಲಿವೆ.

ಇತ್ತಂಡಗಳನ್ನು ಕಾಂಗರೂ ನಾಡಿನ ಆಟಗಾರರು ಮುನ್ನಡೆಸುತ್ತಿರುವುದು ಈ ಪಂದ್ಯದ ವಿಶೇಷ. ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಪಡೆಗಳಿಲ್ಲಿ ಮುಖಾಮುಖೀ ಆಗಲಿವೆ. ಅ. 11ರ ಮೊದಲ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನ್‌ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಇದಕ್ಕೆ ಸೇಡು ತೀರಿಸಿಕೊಂಡರೆ ಹೈದರಾಬಾದ್‌ ಒಂದು ಸ್ಥಾನ ಮೇಲೇರಿ ಆರಕ್ಕೆ ತಲಪುವ ಸಾಧ್ಯತೆ ಇದೆ.

ಆತ್ಮವಿಶ್ವಾದಲ್ಲಿ ರಾಜಸ್ಥಾನ್‌
ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸಂಘಟಿತ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿ ಸ್ಮಿತ್‌ ಪಡೆ ಸಹಜವಾಗಿಯೇ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 10 ಪಂದ್ಯಗಳಿಂದ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಆದರೆ ಇನ್ನುಳಿದ ನಾಲ್ಕೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಿದೆ.

ಆರಂಭದ ಕೆಲವು ಪಂದ್ಯಗಳಲ್ಲಿ ಸ್ಫೋಟಕ ಆಟವಾಡಿದ ಕೇರಳದ ಸ್ಟಂಪರ್‌ ಸಂಜು ಸ್ಯಾಮ್ಸನ್‌ ಅನಂತರ ವಿಫ‌ಲರಾಗಿರುವುದು ಹಾಗೂ ರಾಬಿನ್‌ ಉತ್ತಪ್ಪ ಅವರ ಬ್ಯಾಟಿಂಗ್‌ ಬರಗಾಲ ತೀವ್ರಗೊಂಡಿರುವುದು ರಾಜಸ್ಥಾನ್‌ ಪಾಲಿನ ಚಿಂತೆಯ ಸಂಗತಿಯಾಗಿದೆ. ಉತ್ತಪ್ಪ ಬದಲು ಮನನ್‌ ವೋಹ್ರ ಅವಕಾಶ ಪಡೆದರೂ ಅಚ್ಚರಿ ಇಲ್ಲ.

ರಾಜಸ್ಥಾನದ ಬೌಲಿಂಗ್‌ ವಿಭಾಗ ಯುವ ವೇಗಿ ಕಾರ್ತಿಕ್‌ ತ್ಯಾಗಿ, ಜೋಫ್ರ ಆರ್ಚರ್‌, ಬೆನ್‌ ಸ್ಟೋಕ್ಸ್‌, ಕನ್ನಡಿಗ ಶ್ರೇಯಸ್‌ ಗೋಪಾಲ್‌ ಅವರಿಂದ ಉತ್ತಮ ಲಯದಲ್ಲಿದೆ.

ಸಂಭಾವ್ಯ ತಂಡಗಳು
ರಾಜಸ್ಥಾನ್‌: ರಾಬಿನ್‌ ಉತ್ತಪ್ಪ, ಬೆನ್‌ ಸ್ಟೋಕ್ಸ್‌, ಸಂಜು ಸ್ಯಾಮ್ಸನ್‌, ಸ್ಟೀವನ್‌ ಸ್ಮಿತ್‌ (ನಾಯಕ), ಜಾಸ್‌ ಬಟ್ಲರ್‌, ರಿಯಾನ್‌ ಪರಾಗ್‌, ರಾಹುಲ್‌ ತೆವಾತಿಯಾ, ಜೋಫ್ರ ಆರ್ಚರ್‌, ಶ್ರೇಯಸ್‌ ಗೋಪಾಲ್‌, ಅಂಕಿತ್‌ ರಜಪೂತ್‌, ಕಾರ್ತಿಕ್‌ ತ್ಯಾಗಿ.

ಹೈದರಾಬಾದ್‌: ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೇರ್‌ಸ್ಟೊ, ಮನೀಷ್‌ ಪಾಂಡೆ, ಕೇನ್‌ ವಿಲಿಯಮ್ಸನ್‌/ಜಾಸನ್‌ ಹೋಲ್ಡರ್‌, ಪ್ರಿಯಂ ಗರ್ಗ್‌, ವಿಜಯ್‌ ಶಂಕರ್‌, ಅಬ್ದುಲ್‌ ಸಮದ್‌, ರಶೀದ್‌ ಖಾನ್‌, ಸಂದೀಪ್‌ ಶರ್ಮ, ಟಿ. ನಟರಾಜನ್‌, ಬಾಸಿಲ್‌ ಥಂಪಿ.

ಪ್ರಯೋಗ ಸಲ್ಲದು
ಕಳೆದ ಪಂದ್ಯದಲ್ಲಿ ಹೈದರಾಬಾದ್‌ ನಾಯಕ ವಾರ್ನರ್‌ ಕೆಲವು ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದ್ದರು. ಸ್ವತಃ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫ‌ಲರಾಗಿದ್ದರು. ವಾರ್ನರ್‌ ಮತ್ತೆ ಇಂಥ ಪ್ರಯೋಗ ನಡೆಸಿದರೆ ಅದರಿಂದ ತಂಡಕ್ಕೆ ಹಾನಿಯಾಗುವ ಸಂಭವವೇ ಹೆಚ್ಚು. ಪವರ್‌ ಪ್ಲೇಯಲ್ಲಿ ದಾಖಲಾಗುವ ಮೊತ್ತವೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ ವಾರ್ನರ್‌-ಬೇರ್‌ಸ್ಟೊ ಆರಂಭಿಕರಾಗಿ ಕಣಕ್ಕಿಳಿಯುವುದೇ ಸೂಕ್ತವೆನಿಸುತ್ತದೆ. ಅಫ್ಘಾನ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೊರತುಪಡಿಸಿ ಘಾತಕ ಸ್ಪೆಲ್‌ ನಡೆಸುವಂಥ ಬೌಲರ್‌ ಹೈದರಾಬಾದ್‌ ತಂಡದಲ್ಲಿ ಕಾಣುತ್ತಿಲ್ಲ. ಹೀಗಾಗಿ ಅತ್ಯುತ್ತಮ ಮಟ್ಟದ ಬ್ಯಾಟಿಂಗ್‌ ಪ್ರದರ್ಶನವಷ್ಟೇ ತಂಡದ ಕೈ ಹಿಡಿಯಬೇಕಿದೆ.

 

ಟಾಪ್ ನ್ಯೂಸ್

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.