ಕೊಹ್ಲಿಯನ್ನು RCB ನಾಯಕ ಸ್ಥಾನದಿಂದ ಕೆಳಗಿಳಿಸುವುದು ಪರಿಹಾರವಲ್ಲ: ಸೆಹ್ವಾಗ್ ಹೇಳಿದ್ದೇನು ?
Team Udayavani, Nov 7, 2020, 7:27 PM IST
ನವದೆಹಲಿ: ಈ ಬಾರಿಯೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಕೊಹ್ಲಿ ನಾಯಕತ್ವದ ಕುರಿತು ಹಲವರು ಪ್ರೆಶ್ನೆಯೆತ್ತಿದ್ದಾರೆ.
ಏತನ್ಮಧ್ಯೆ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಕೂಡ, ಐಪಿಎಲ್ ಕೂಟದಲ್ಲಿ ಇದುವರೆಗೆ ಎಂಟು ಬಾರಿ ಆರ್ ಸಿಬಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ, ಒಂದೂ ಕಪ್ ಗೆದ್ದಿಲ್ಲ. ಹೀಗಾಗಿ ಆರ್ ಸಿಬಿಯ ನಾಯಕತ್ವವನ್ನು ವಿರಾಟ್ ತ್ಯೆಜಿಸಬೇಕು ಎಂದು ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ವಿರೇಂದ್ರ ಸೆಹ್ವಾಗ್, ಕೊಹ್ಲಿ ಒಬ್ಬ ಉತ್ತಮ ನಾಯಕ. ಆದರೇ ಅವರು ಆರ್ ಸಿಬಿ ಎಂಬ ಸಮತೋಲನವಿಲ್ಲದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರನ್ನು ನಾಯಕತ್ವದಿಂದ ಹೊರಗಿಡುವುದು ಶಾಶ್ವತ ಪರಿಹಾರವಲ್ಲ. ಮಾತ್ರವಲ್ಲದೆ ಆರ್ ಸಿಬಿ ಆಡಳಿತ ಮಂಡಳಿ ಇನ್ನೂ ಅತ್ಯುತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವುದರತ್ತ ಗಮನ ಹರಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಉಳಿದಿರುವುದು ಇದೊಂದೆ ಮಾರ್ಗ: ಕೊಹ್ಲಿಗೆ ಗೌತಮ್ ‘ಗಂಭೀರ’ ಸಲಹೆ
ವಿರಾಟ್ ಭಾರತೀಯ ಕ್ರಿಕೇಟ್ ತಂಡದ ನಾಯಕರಾಗಿ, ಏಕದಿನ, ಟಿ-ಟ್ವೆಂಟಿ, ಟೆಸ್ಟ್ ಪಂದ್ಯವನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಆದರೇ ಆರ್ ಸಿಬಿಯ ನೇತೃತ್ವ ವಹಿಸಿದ ಮೇಲೆ, ಅವರ ತಂಡ ಉತ್ತಮ ಪ್ರದರ್ಶನ ತೋರುತ್ತಿಲ್ಲ. ನಾಯಕನೊಬ್ಬ ಉತ್ತಮ ತಂಡವನ್ನು ಹೊಂದಿದ್ದಾಗ ಮಾತ್ರ ಗೆಲ್ಲಲು ಸಾಧ್ಯ. ಹೀಗಾಗಿ ಆರ್ ಸಿಬಿ ಆಡಳಿತ ಮಂಡಳಿ, ನಾಯಕತ್ವ ಬದಲಾವಣೆಯತ್ತ ಗಮನಹರಿಸದೆ, ತಂಡವನ್ನು ಬಲಾಢ್ಯವಾಗಿಸುವತ್ತ ಚಿಂತನೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ(ನ.6) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಗ್ಗರಿಸಿ ಐಪಿಎಲ್ 13ನೇ ಆವೃತ್ತಿಯ ಕೂಟದಿಂದಲೇ ಹೊರಬಿದ್ದಿತ್ತು. ಆರಂಭದ 10 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಬೆಂಗಳೂರು 7ರಲ್ಲಿ ಜಯಗಳಿಸಿತ್ತು. ನಂತರದಲ್ಲಿ ಸತತ 5 ಪಂದ್ಯ ಸೋಲುವ ಮೂಲಕ ಕಳಪೆ ಪ್ರದರ್ಶನ ನೀಡಿತ್ತು.
ಇದನ್ನೂ ಓದಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ದೀಪಾವಳಿ ಸಂಭ್ರಮ; ಈ ಬಾರಿ ಬೆಳಗಲಿದೆ 5 ಲಕ್ಷ ದೀಪಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.