ಸೂರ್ಯನ ಬಿಸಿಯಿಂದ ಪಾರಾದೀತೇ ಆರ್‌ಸಿಬಿ?
ಇಂದು ಬೆಂಗಳೂರು-ಹೈದರಾಬಾದ್ ಎಲಿಮಿನೇಟರ್ ಪಂದ್ಯ
Team Udayavani, Nov 6, 2020, 5:15 AM IST
ಅಬುಧಾಬಿ: ಇದು ನಿರ್ಗಮನದ ಹೊತ್ತು, ಎಲಿಮಿನೇಟ್ ಟೈಮ್. ಐಪಿಎಲ್ ಹಣಾಹಣಿ 4ರಿಂದ 3 ತಂಡಗಳಿಗೆ ಇಳಿಯುವ ಸಮಯ. ಲೀಗ್ ಹಂತದಲ್ಲಿ ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನ ಪಡೆದ ಸನ್‌ರೈಸರ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು ತಂಡಗಳ ಪೈಕಿ ಅದೃಷ್ಟ ಯಾರಿಗಿದೆ ಎಂಬುದು ಇತ್ಯರ್ಥವಾಗಬೇಕಾದ ಗಳಿಗೆ. ಶುಕ್ರವಾರ ಈ ನಿರ್ಣಾಯಕ ಮುಖಾಮುಖೀಯಲ್ಲಿ ಗೆದ್ದವರು ದ್ವಿತೀಯ ಕ್ವಾಲಿಫೈಯರ್ ಆಡುವ ಅರ್ಹತೆ ಸಂಪಾದಿಸಿದರೆ, ಸೋತವರು ನೇರವಾಗಿ ಮನೆಗೆ ತೆರಳುವ ಸಂಕಟಕ್ಕೆ ಸಿಲುಕಲಿದ್ದಾರೆ.
ಇಲ್ಲಿ ಇನ್ನೊಂದು ಅವಕಾಶದ ಪ್ರಶ್ನೆಯಿಲ್ಲ. ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು, ಅಷ್ಟೇ. ಹೀಗಾಗಿ ವಾರ್ನರ್ ಮತ್ತು ಕೊಹ್ಲಿ ತಂಡಗಳೆರಡೂ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡುವ ನಿರೀಕ್ಷೆ ಬಲವಾಗಿಯೇ ಇದೆ. ಕೊನೆಯ ಹಂತದ ಕೆಲವು ಫಲಿತಾಂಶಗಳನ್ನು ಗಮನಿಸಿದರೆ ಹೈದರಾಬಾದ್ ತುಸು ಬಲಾಡ್ಯವಾಗಿ ಕಾಣಿಸುತ್ತದೆ. ಇನ್ನೊಂದೆಡೆ ಆರ್‌ಸಿಬಿ ಅಸ್ಥಿರ ಪ್ರದರ್ಶನದಿಂದ ಬಳಲುತ್ತಿರುವುದು ಸ್ಪಷ್ಟ.
ಹೈದರಾಬಾದ್ ಬೌನ್ಸ್ ಬ್ಯಾಕ್
ಹೈದರಾಬಾದ್ ಆರಂಭದಲ್ಲಿ ಸತತವಾಗಿ ಸೋಲುತ್ತ ಬಂದ ತಂಡ. ಆರ್‌ಸಿಬಿಯಿಂದಲೇ ವಾರ್ನರ್ ಪಡೆಯ ಸೋಲಿನ ಆಟ ಮೊದಲ್ಗೊಂಡಿತ್ತು. ಅನಂತರ ತಂಡ ಗಾಯದ ಸಮಸ್ಯೆಗೆ ಸಿಲುಕಿತು. ಮಿಚೆಲ್ ಮಾರ್ಷ್, ಭುವನೇಶ್ವರ್ ಕುಮಾರ್, ವಿಜಯ್ ಶಂಕರ್… ಒಬ್ಬೊಬ್ಬರಾಗಿ ಹೊರಬಿದ್ದರು. ವಿಲಿಯಮ್ಸನ್ ಮೊದಲ ಕೆಲವು ಪಂದ್ಯಗಳಿಗೆ ಲಭ್ಯರಾಗಲಿಲ್ಲ. ಆದರೂ ತಂಡ ಅಮೋಘ ರೀತಿಯಲ್ಲಿ “ಬೌನ್ಸ್ ಬ್ಯಾಕ್’ ಆಗಿ ಪ್ಲೇ ಆಫ್ ಅರ್ಹತೆ ಪಡೆದದ್ದೊಂದು ಅದ್ಭುತ.
ಕೊನೆಯ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಹೈದರಾಬಾದ್ ತೃತೀಯ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿದ್ದನ್ನು ಮರೆಯುವಂತಿಲ್ಲ. ಮೊದಲು ಡೆಲ್ಲಿ, ಬಳಿಕ ಆರ್‌ಸಿಬಿ, ಕೊನೆಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಮುಂಬೈಯನ್ನು ವಾರ್ನರ್ ಸೇನೆ ಹೊಡೆದುರುಳಿಸಿತ್ತು. ಹೈದರಾಬಾದ್‌ಗೆ ಸೋತ ಈ ಮೂರೂ ತಂಡಗಳು ಪ್ಲೇ ಆಫ್ನಲ್ಲಿವೆ. ಆರ್‌ಸಿಬಿಯದ್ದು ಇದಕ್ಕೆ ತದ್ವಿರುದ್ಧ ಕತೆ. ಕೊನೆಯ ನಾಲ್ಕೂ ಪಂದ್ಯಗಳಲ್ಲಿ ಎದುರಾದ ಸೋಲು ಕೊಹ್ಲಿ ಬಳಗದ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. ಹಾಗೆಯೇ ಕೊನೆಯ 3 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಸೋಲಿಸಿದ ಮೂರೂ ತಂಡಗಳು ಪ್ಲೇ ಆಫ್ನಲ್ಲಿವೆ!
ವಾರ್ನರ್ ಕಪ್ತಾನನ ಆಟ
ಮುಂಬೈಯನ್ನು 10 ವಿಕೆಟ್‌ಗಳಿಂದ ಕೆಡ ವಿದ್ದು ಹೈದರಾಬಾದ್‌ನ ಆತ್ಮವಿಶ್ವಾಸವನ್ನು ಖಂಡಿತವಾ ಗಿಯೂ ಹೆಚ್ಚಿಸಲಿದೆ. 529 ರನ್ ಬಾರಿಸಿರುವ ವಾರ್ನರ್ ಕಪ್ತಾನನ ಆಟದ ಮೂಲಕ ಗಮನ ಸೆಳೆದಿ ದ್ದಾರೆ. ಇವರೊಂದಿಗೆ ಸಾಹಾ ಆರಂಭಿಕನಾಗಿ ಇಳಿದ ಬಳಿಕ ತಂಡದ ದೆಸೆಯೇ ಬದಲಾಗಿದೆ. ಮೊದಲ ವಿಕೆ ಟಿಗೆ ಡೆಲ್ಲಿ ವಿರುದ್ಧ 107 ರನ್, ಮುಂಬೈ ವಿರುದ್ಧ 151 ರನ್ ಬಾರಿಸಿದ ಹೆಗ್ಗಳಿಕೆ ಈ ಜೋಡಿಯದ್ದು. ಇವರನ್ನು ಬೇಗನೇ ಬೇರ್ಪಡಿಸಿದರಷ್ಟೇ ಆರ್‌ಸಿಬಿಗೆ ಲಾಭ.
ಪಾಂಡೆ, ವಿಲಿಯಮ್ಸನ್, ಗರ್ಗ್, ಹೋಲ್ಡರ್ ಅವರಿಂದ ಬ್ಯಾಟಿಂಗ್ ಸರದಿ ಬೆಳೆಯುತ್ತದೆ. ವಿಲಿಯಮ್ಸನ್ ಬದಲು ಬೇರ್‌ಸ್ಟೊ ಅವಕಾಶ ಪಡೆ ಯಲೂಬಹುದು. ಪವರ್ ಪ್ಲೇಯಲ್ಲಿ ಅತ್ಯಂತ ಅಪಾಯಕಾರಿಯಾಗಬಲ್ಲ ಸಂದೀಪ್ ಶರ್ಮ ಪ್ರಮುಖ ಬೌಲಿಂಗ್ ಅಸ್ತ್ರ. ನಟರಾಜನ್, ರಶೀದ್ ಖಾನ್ ಅವರನ್ನು ನಿಭಾಯಿಸುವುದು ಸುಲಭವಲ್ಲ.
ಪಡಿಕ್ಕಲ್ ಮೇಲೆ ಅವಲಂಬನೆ
ಆರ್‌ಸಿಬಿ ಬ್ಯಾಟಿಂಗ್ ಯುವ ಆರಂಭಕಾರ ಪಡಿಕ್ಕಲ್ ಅವರನ್ನು ಹೆಚ್ಚು ಅವಲಂಬಿಸಿದೆ. ಇನ್ನೊಂದು ಸ್ಥಾನಕ್ಕೆ ಫಿಲಿಪ್‌ಗಿಂತ ಫಿಂಚ್ ಹೆಚ್ಚು ಪರಿಣಾಮ ಕಾರಿಯಾಗಬಲ್ಲರು. ಈ ಜೋಡಿ ಅಮೋಘ ಆರಂಭವೊಂದನ್ನು ಒದಗಿಸುವುದು ಅಗತ್ಯ. ಕೊಹ್ಲಿ, ಎಬಿಡಿ, ದುಬೆ, ಮಾರಿಸ್ ಪೈಕಿ ಇಬ್ಬರಾದರೂ ಸಿಡಿದು ನಿಲ್ಲುವುದು ಅತ್ಯಗತ್ಯ.
ಆರ್‌ಸಿಬಿ ಬೌಲಿಂಗ್ ಹೈದರಾಬಾದ್‌ನಷ್ಟು ಅಪಾ ಯಕಾರಿಯಲ್ಲ. ಚಹಲ್, ವಾಷಿಂಗ್ಟನ್, ಸೈನಿ, ಸಿರಾಜ್, ಉದಾನ ಎದುರಾಳಿ ಬ್ಯಾಟಿಂಗ್ ಸರದಿಯನ್ನು ಉಡಾಯಿಸಲು ಶಕ್ತರಾದರೆ ಅದೊಂದು ಅಸಾಮಾನ್ಯ ಸಾಹಸವೆನಿಸಲಿದೆ.
ಆರ್‌ಸಿಬಿ ಬ್ಯಾಟಿಂಗ್: ಅಸ್ಥಿರ. ಪಡಿಕ್ಕಲ್, ಎಬಿಡಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಫಿಂಚ್, ಕೊಹ್ಲಿ, ಮಾರಿಸ್ ಸಿಡಿದು ನಿಲ್ಲುವುದು, ಕೆಳ ಕ್ರಮಾಂಕದ ಆಟಗಾರರು ರನ್‌ಗತಿ ಏರಿಸುವುದು ಮುಖ್ಯ.
ಆರ್‌ಸಿಬಿ ಬೌಲಿಂಗ್: ತೀರಾ ಅಪಾಯಕಾರಿಯಲ್ಲ. ಕ್ಲಿಕ್ ಆದರೆ ಎಲ್ಲರೂ ವಿಕೆಟ್ ಕೀಳುತ್ತಾರೆ. ಇಲ್ಲವಾದರೆ ಯಾರೂ ಇಲ್ಲ. ಚಹಲ್ ಸ್ಪಿನ್ ಮ್ಯಾಜಿಕ್ ನಡೆಯಬೇಕಿದೆ.
ಹೈದರಾಬಾದ್ ಬ್ಯಾಟಿಂಗ್: ವಾರ್ನರ್ ಕಪ್ತಾನನ ಆಟಕ್ಕೆ ಸೈ ಎನಿಸಿದ್ದಾರೆ. ಸಾಹಾ ಓಪನಿಂಗ್, ಆಲ್‌ರೌಂಡರ್ ಹೋಲ್ಡರ್ ಆಗಮನದಿಂದ ಹೆಚ್ಚು ಸಮತೋಲನ ಹೊಂದಿದೆ.
ಹೈದರಾಬಾದ್ ಬೌಲಿಂಗ್: ವೈವಿಧ್ಯಮಯ ಹಾಗೂ ಅಷ್ಟೇ ಅಪಾಯಕಾರಿ. ಸಂದೀಪ್ ಶರ್ಮ, ರಶೀದ್ ಖಾನ್, ನಟರಾಜನ್ ಅತ್ಯುತ್ತಮ ಫಾರ್ಮ್ ಹಾಗೂ ಲಯದಲ್ಲಿದ್ದಾರೆ.
ಲೀಗ್ ಮುಖಾಮುಖಿ
1. ಬೆಂಗಳೂರಿಗೆ 10 ರನ್ ಜಯ
2. ಹೈದರಾಬಾದ್‌ಗೆ 5 ವಿಕೆಟ್ ಜಯ
ಗೆದ್ದವರಿಗೆ ಮುನ್ನಡೆ, ಸೋತವರು ಮನೆಕಡೆೆ
ಹೈದರಾಬಾದ್‌ಬೌಲಿಂಗ್ ಘಾತಕ
ಆರ್‌ಸಿಬಿ
ಆರನ್ ಫಿಂಚ್, ದೇವದತ್ತ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಕ್ರಿಸ್ ಮಾರಿಸ್, ಇಸುರು ಉದಾನ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್.
ಹೈದರಾಬಾದ್
ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಾಹಾ, ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್/ಜಾನಿ ಬೇರ್‌ಸ್ಟೊ, ಪ್ರಿಯಂ ಗರ್ಗ್, ಜಾಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಶಾಬಾಜ್ ನದೀಂ, ಸಂದೀಪ್ ಶರ್ಮ, ಟಿ. ನಟರಾಜನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.