ಐಪಿಎಲ್-2020 ದಿನಾಂಕ; ಫ್ರಾಂಚೈಸಿಗಳಿಗೆ ಚಿಂತೆ
ವಿದೇಶಿ ಆಟಗಾರರು ಅಂತಾರಾಷ್ಟ್ರೀಯ ಸರಣಿಯಲ್ಲಿ ಬ್ಯುಸಿ ; ಮಾ. 28ರ ಬದಲು ಎ. ಒಂದಕ್ಕೆ ಆರಂಭಿಸಿದರೆ ಅನುಕೂಲ
Team Udayavani, Dec 22, 2019, 11:35 PM IST
ಹೊಸದಿಲ್ಲಿ: 2020ರ ಐಪಿಎಲ್ ಪಂದ್ಯಾವಳಿಯ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಆದರೆ ಮೂಲವೊಂದರ ಪ್ರಕಾರ ಇದು ಮಾರ್ಚ್ 28ರಿಂದ ಆರಂಭವಾಗಿ ಮೇ 24ರ ತನಕ ನಡೆಯಲಿದೆ.
ಆದರೆ ಈ ಸಮಯದಲ್ಲೇ ಐಪಿಎಲ್ ಹಣಾಹಣಿ ಮೊದಲ್ಗೊಂಡರೆ ಭಾರೀ ಹೊಡೆತ ಎದುರಾಗಲಿದೆ ಎಂಬುದು ಫ್ರಾಂಚೈಸಿಗಳ ಚಿಂತೆಗೆ ಕಾರಣವಾಗಿದೆ. ಕಾರಣ, ವಿವಿಧ ಫ್ರಾಂಚೈಸಿಗಳಿಗೆ ಆಯ್ಕೆಯಾಗಿರುವ ಬಹುತೇಕ ವಿದೇಶಿ ಕ್ರಿಕೆಟಿಗರು ಈ ಸಮಯದಲ್ಲಿ ಬೇರೆ ಬೇರೆ ಅಂತಾರಾಷ್ಟ್ರೀಯ ಸರಣಿಗಳಲ್ಲಿ ವ್ಯಸ್ತರಾಗಿರುತ್ತಾರೆ. ಇದನ್ನು ಮುಗಿಸಿಯೇ ಅವರು ಐಪಿಎಲ್‌ಗೆ ಹೊರಡಬೇಕಾಗುತ್ತದೆ.
ವಿಳಂಬ ಆರಂಭದಿಂದ ಅನುಕೂಲ
ಮಾರ್ಚ್ ಅಂತ್ಯದಲ್ಲಿ ಆಸ್ಟ್ರೇಲಿಯ- ನ್ಯೂಜಿಲ್ಯಾಂಡ್ ಟಿ20 ಸರಣಿ ಜಾರಿಯಲ್ಲಿರುತ್ತದೆ. ಇಂಗ್ಲೆಂಡ್-ಶ್ರೀಲಂಕಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿರುತ್ತದೆ. ಹೀಗಾಗಿ ಕೆಲವು ತಾರಾ ಆಟಗಾರರು ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಎಪ್ರಿಲ್ ಒಂದರ ವೇಳೆ ಐಪಿಎಲ್ ಆರಂಭವಾದರೆ ಅನುಕೂಲ ಎಂಬುದು ಅನೇಕ ಫ್ರಾಂಚೈಸಿ ಮಾಲಕರ ಅಭಿಪ್ರಾಯ.
“ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವಿನ ಕೊನೆಯ ಟಿ20 ಪಂದ್ಯ ಮುಗಿಯುವುದು ಮಾ. 29ಕ್ಕೆ. ಹಾಗೆಯೇ ಇಂಗ್ಲೆಂಡ್-ಶ್ರೀಲಂಕಾ ಸರಣಿ ಅಂತ್ಯವಾಗುವುದು ಮಾ. 31ಕ್ಕೆ. ಹೀಗಾಗಿ ಎಪ್ರಿಲ್ ಒಂದರಿಂದ ಐಪಿಎಲ್ ಆರಂಭವಾದರೆ ಅನುಕೂಲ. ಐಪಿಎಲ್ ಆಡಳಿತ ಮಂಡಳಿ ಇದನ್ನು ಪರಿಗಣಿಸುವ ವಿಶ್ವಾಸವಿದೆ’ ಎಂದು ಫ್ರಾಂಚೈಸಿಯೊಂದರ ಅಧಿಕಾರಿ ಹೇಳಿದ್ದಾರೆ.
ಐಪಿಎಲ್ ಹರಾಜು: ಅನ್‌ಸೋಲ್ಡ್ ಇಲೆವೆನ್!
ಐಪಿಎಲ್ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ವಿದೇಶಿಗರ ಹಾಗೂ ಭಾರತದ ಯುವ ಕ್ರಿಕೆಟಿಗರತ್ತ ಫ್ರಾಂಚೈಸಿಗಳು ಒಲವು ತೋರಿದ್ದು ಈ ಬಾರಿಯ ವಿಶೇಷ.
ಹಾಗೆಯೇ ಸ್ಟಾರ್ ಕ್ರಿಕೆಟಿಗರನೇಕರು ಮಾರಾಟವಾಗದೇ ಉಳಿಯುವ ಮೂಲಕವೂ ಈ ಸಲದ ಐಪಿಎಲ್ ಹರಾಜು ಸುದ್ದಿಯಾಗಿದೆ. ಅಮೋಘ ಫಾರ್ಮ್ನಲ್ಲಿರುವ ವೆಸ್ಟ್ ಇಂಡೀಸ್ ಆರಂಭಕಾರ ಶೈ ಹೋಪ್, ಎವಿನ್ ಲೆವಿಸ್, ಸ್ಫೋಟಕ ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ನಮ್ಮದೇ ದೇಶದ ಯೂಸುಫ್ ಪಠಾಣ್ ಮೊದಲಾದವರನ್ನೆಲ್ಲ ಯಾರೂ ಕೊಳ್ಳಲಿಲ್ಲ!
ಇಂಥ 11 ಮಂದಿ ಆಟಗಾರರ “ಅನ್‌ಸೋಲ್ಡ್ ಇಲೆವೆನ್’ ಒಂದು ಪ್ರಕಟಗೊಂಡಿದೆ. ಮುಂದೆ ನಡುವಲ್ಲಿ ಐಪಿಎಲ್‌ನಿಂದ ಹೊರಹೋಗುವವರ ಸ್ಥಾನಕ್ಕೆ ಇವರು ಬರಬಹುದಾದರೂ ಸದ್ಯದ ಮಟ್ಟಿಗೆ ಇವರು ಮಾರಾಟವಾಗದೇ ಉಳಿದದ್ದೇ ಒಂದು ಅಚ್ಚರಿ.
ಅನ್‌ಸೋಲ್ಡ್ ಇಲೆವೆನ್: ಮಾರ್ಟಿನ್ ಗಪ್ಟಿಲ್, ಎವಿನ್ ಲೆವಿಸ್, ಅಲೆಕ್ಸ್ ಹೇಲ್ಸ್, ಕಾಲಿನ್ ಇನ್‌ಗಾÅಮ್, ಶೈ ಹೋಪ್, ಬೆನ್ ಕಟಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಆ್ಯಡಂ ಝಂಪ, ಟಿಮ್ ಸೌಥಿ, ನೂರ್ ಅಹ್ಮದ್, ಅಲ್ಜಾರಿ ಜೋಸೆಫ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.