ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ


Team Udayavani, Sep 19, 2021, 8:02 AM IST

fgfgjhgjkhgf

ದುಬೈ: ಮೇ ಆರಂಭದಲ್ಲಿ ಕೋವಿಡ್‌ ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ನಿಂತಿದ್ದ 2021ರ ಐಪಿಎಲ್‌ಗೆ ಬರೋಬ್ಬರಿ ನಾಲ್ಕೂವರೆ ತಿಂಗಳ ಬಳಿಕ ಯುಎಇಯಲ್ಲಿ ಮುಂದುವರಿಯುವ ಮುಹೂರ್ತ ಕೂಡಿಬಂದಿದೆ.

ಭಾನುವಾರದಿಂದ ಅ.15ರ ತನಕ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ಉಳಿದ 31 ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್‌ ಪ್ರೇಮಿಗಳು ಮತ್ತೂಂದು ಕಂತಿನ ರೋಮಾಂಚನವನ್ನು ಅನುಭವಿಸುವ ಸಂಭ್ರಮದಲ್ಲಿದ್ದಾರೆ.

ಮೇ 2ರಂದು ಅಹ್ಮದಾಬಾದ್‌ನಲ್ಲಿ ಪಂಜಾಬ್‌-ಡೆಲ್ಲಿ ನಡುವಿನ ಮುಖಾಮುಖೀ ಬಳಿಕ ಜೈವಿಕ ಸುರಕ್ಷಾ ವಲಯದಲ್ಲೂ ಕೊರೊನಾ ಕೇಸ್‌ ಕಂಡುಬಂದುದರಿಂದ ಪಂದ್ಯಾವಳಿಯನ್ನು ನಿಲ್ಲಿಸಲಾಗಿತ್ತು. ಮರುದಿನ ಆರ್‌ಸಿಬಿ-ಕೆಕೆಆರ್‌ ಮುಖಾಮುಖೀ ಆಗಬೇಕಿತ್ತು. ಆದರೀಗ ಯುಎಇಯ ಮುಂದುವರಿದ ಆವೃತ್ತಿಗಾಗಿ ವೇಳಾಪಟ್ಟಿಯನ್ನು ತುಸು ಬದಲಿಸಲಾಗಿದೆ. ಇಲ್ಲಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಪ್ರಸಕ್ತ ಋತುವಿನಲ್ಲಿ ಗಮನಾರ್ಹ ಸಾಧನೆಗೈದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಾಗಲಿವೆ.

ಟಿ20 ವಿಶ್ವಕಪ್‌ಗೆ ಅಭ್ಯಾಸ:

ಅಂದಿನ ಪರಿಸ್ಥಿತಿ ಕಂಡಾಗ 2021ರ ಐಪಿಎಲ್‌ ಪೂರ್ತಿಗೊಳ್ಳುವುದು ಅನುಮಾನವಿತ್ತು. ಆದರೆ ನಿಬಿಡ ಅಂತಾರಾಷ್ಟ್ರೀಯ ಸರಣಿಗಳ ನಡುವೆಯೂ ಬಿಸಿಸಿಐ ಈ ಕ್ಯಾಶ್‌ ರಿಚ್‌ ಲೀಗ್‌ಗೆ ಸಮಯ ಹೊಂದಿಸಿಕೊಂಡದ್ದೊಂದು ಅಚ್ಚರಿ. ಅಷ್ಟೇ ಅಲ್ಲ, ಅತ್ಯಂತ ಸೂಕ್ತ ಸಮಯದಲ್ಲಿ ಐಪಿಎಲ್‌ ಮುಂದುವರಿ ಯುತ್ತಿದೆ. ಇದು ಮುಗಿದ ಎರಡೇ ದಿನದಲ್ಲಿ ಯುಎಇಯಲ್ಲೇ ಪ್ರತಿಷ್ಠಿತ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಆರಂಭವಾಗಲಿದ್ದು, ಇದಕ್ಕೆ ಅಭ್ಯಾಸ ನಡೆಸಲು ಬಹುಶಃ ಐಪಿಎಲ್‌ಗಿಂತ ಉತ್ತಮ ವೇದಿಕೆ ಇನ್ನೊಂದಿಲ್ಲ. ವಿಶ್ವಕಪ್‌ ತಂಡಗಳಲ್ಲಿರುವ ಬಹುತೇಕ ಆಟಗಾರರು ಈ ಕೂಟದಲ್ಲಿ ಆಡುತ್ತಿದ್ದಾರೆ. ಹೀಗಾಗಿ ಐಪಿಎಲ್‌ ಭಾಗ-2ರ ಮಹತ್ವವೂ ಹೆಚ್ಚಿದೆ.

ಕೆಲವು ಸ್ಟಾರ್‌ ವಿದೇಶಿ ಆಟಗಾರರು ಹಿಂದೆ ಸರಿದರೂ ಕೂಟದ ಆಕರ್ಷಣೆಯೇನೂ ಕಡಿಮೆ ಆಗದೆಂಬುದೊಂದು ಲೆಕ್ಕಾಚಾರ. ಡೇವಿಡ್‌ ಮಲಾನ್‌, ಕ್ರಿಸ್‌ ವೋಕ್ಸ್‌, ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಜೋಫ್ರ ಆರ್ಚರ್‌, ರಿಲೀ ಮೆರೆಡಿತ್‌, ಜೇ ರಿಚರ್ಡ್‌ಸನ್‌, ಪ್ಯಾಟ್‌ ಕಮಿನ್ಸ್‌ ಮೊದಲಾದ ವಿದೇಶಿ ಆಟಗಾರರು ಯುಎಇಗೆ ಆಗಮಿಸುತ್ತಿಲ್ಲ.

ಪ್ರೇಕ್ಷಕರಿಗೆ ಅವಕಾಶ:

2019ರ ಬಳಿಕ ಪ್ರೇಕ್ಷಕರಿಗೆ ಬಾಗಿಲು ತೆರೆಯುವ ಕಾರಣಕ್ಕಾಗಿಯೂ ಯುಎಇ ಆವೃತ್ತಿಯ ಐಪಿಎಲ್‌ ಆಕರ್ಷಣೆ ಹೆಚ್ಚಿದೆ. ಸ್ಟೇಡಿಯಂ ಸಾಮರ್ಥ್ಯದ ಶೇ. 50 ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು. ಇವರು ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೇ ಖರೀದಿಸಬೇಕೆಂದು ಸೂಚಿಸಲಾಗಿದೆ.

ವಿಭಿನ್ನ ಪಿಚ್‌ಗಳ ಸವಾಲು:

ಭಾರತದಲ್ಲಿ ನಡೆದ ಮೊದಲಾರ್ಧದ ಪಂದ್ಯಗಳ ವೇಳೆ ರನ್‌ ಪ್ರವಾಹ ಹರಿದು ಬಂದಿತ್ತಾದರೂ ಯುಎಇಯಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸುವಂತಿಲ್ಲ. ಇಲ್ಲಿನ ಪಿಚ್‌ಗಳು ತುಸು ನಿಧಾನವಾಗಿ ವರ್ತಿಸುವುದೇ ಇದಕ್ಕೆ ಕಾರಣ. ಆದರೆ ಶಾರ್ಜಾ ಸ್ಟೇಡಿಯಂ ಅಪವಾದವಾಗಬಹುದು. 2020ರ ಆವೃತ್ತಿಯ ವೇಳೆ ಇಲ್ಲಿ 200 ರನ್ನಿಗೇನೂ ಕೊರತೆ ಎದುರಾಗಿರಲಿಲ್ಲ. ಉಳಿದೆಡೆ ಬೌಲರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ.

ಅಗ್ರಸ್ಥಾನಲ್ಲಿ ಡೆಲ್ಲಿ ಕ್ಯಾಪಿಟಲ್‌ :

ಭಾರತದಲ್ಲಿ ಆಡಲಾದ 29 ಪಂದ್ಯಗಳಲ್ಲಿ 2020ರ ರನ್ನರ್ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ 12 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ ಆರನ್ನು ಗೆದ್ದಿದೆ.

ಚೆನ್ನೈ ಮತ್ತು ಆರ್‌ಸಿಬಿ ತಲಾ 10 ಅಂಕ ಗಳಿಸಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಧೋನಿ ಪಡೆ ದ್ವಿತೀಯ ಸ್ಥಾನದಲ್ಲಿದೆ. ಕೊಹ್ಲಿ ಟೀಮ್‌ಗೆ 3ನೇ ಸ್ಥಾನ. ಭಾನುವಾರದ ಮೊದಲ ಪಂದ್ಯವನ್ನು ಗೆದ್ದರೆ ಚೆನ್ನೈ ಅಗ್ರಸ್ಥಾನಕ್ಕೆ ನೆಗೆಯಲಿದೆ.

ಟಾಪ್ ನ್ಯೂಸ್

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್‌

Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್‌

Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ

Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.