ಚೆನ್ನೈ ಮೊದಲ ಪಂದ್ಯಕ್ಕೆ ಡು ಪ್ಲೆಸಿಸ್, ಕರನ್ ಇಲ್ಲ
Team Udayavani, Sep 16, 2021, 6:25 AM IST
ದುಬೈ: ಭಾನುವಾರ ಪುನಾರಂಭಗೊಳ್ಳಲಿರುವ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಚೆನ್ನೈಗೆ ಇಬ್ಬರು ತಾರಾ ಆಟಗಾರರ ಗೈರು ಕಾಡುವ ಸಾಧ್ಯತೆ ಇದೆ.
ಪ್ರಧಾನ ಬ್ಯಾಟ್ಸ್‌ಮನ್ ಫಾ ಡು ಪ್ಲೆಸಿಸ್ ಮತ್ತು ಆಲ್‌ರೌಂಡರ್ ಸ್ಯಾಮ್ ಕರನ್ ಮುಂಬೈ ಇಂಡಿಯನ್ಸ್ ಎದುರಿನ ಈ ಮುಖಾಮುಖೀಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್ ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದು, ಸೈಂಟ್ ಲೂಸಿಯ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಆದರೆ ತೊಡೆನೋವಿನಿಂದಾಗಿ ಕಳೆದೆರಡು ಪಂದ್ಯಗಳಲ್ಲಿ ಅವರು ಆಡಿಲ್ಲ. ಫಿಟ್‌ನೆಸ್ ಗಮನಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆದರೆ ಮುಂಬೈ ಎದುರಿನ ಮಹತ್ವದ ಪಂದ್ಯಕ್ಕೆ ಡು ಪ್ಲೆಸಿಸ್ ಲಭ್ಯರಾಗಲಿದ್ದಾರೆ ಎಂಬ ವಿಶ್ವಾಸ ಚೆನ್ನೈ ತಂಡದ್ದು.
ಕ್ವಾರಂಟೈನ್ ಕಾಡದು: ಡು ಪ್ಲೆಸಿಸ್‌ಗೆ ಕ್ವಾರಂಟೈನ್ ಸಮಸ್ಯೆ ಕಾಡದು. ವೆಸ್ಟ್ ಇಂಡೀಸ್‌ನಿಂದ ಯುಎಇಗೆ ಜೈವಿಕ ಸುರಕ್ಷಾ ವಲಯದಿಂದ ಇನ್ನೊಂದು ಸುರಕ್ಷಾ ವಲಯಕ್ಕೆ ವರ್ಗಾವಣೆ ವ್ಯವಸ್ಥೆ ಇರುವುದೇ ಇದಕ್ಕೆ ಕಾರಣ. ಆದರೆ ಇಂಗ್ಲೆಂಡ್‌ನಿಂದ ಆಗಮಿಸಬೇಕಿರುವ ಸ್ಯಾಮ್ ಕರನ್ ಯುಎಇಯಲ್ಲಿ 6 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಹೀಗಾಗಿ ಮುಂಬೈ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.