ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ಮುಂದೆ ‘ಪಂಜಾಬ್ ಕಿಂಗ್ಸ್’
ಮರುನಾಮಕರಣದಿಂದಾಗಿ ತಂಡಕ್ಕೆ ಮತ್ತಷ್ಟು ಬಲ : ಫ್ರಾಂಚೈಸಿ
Team Udayavani, Feb 17, 2021, 4:45 PM IST
ನವ ದೆಹಲಿ : ಐ ಪಿ ಎಲ್ 14ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಇನ್ನು ಒಂದು ದಿನ ಬಾಕಿ ಇರುವಾಗಲೇ ಕಿಂಗ್ಸ್ ಇಲೆವೆನ್ ಪಂಜಾಬ್ ನ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಪಂಜಾಬ್ ಕಿಂಗ್ಸ್ ಎಂದು ಮರು ನಾಮಕರಣ ಮಾಡಿರುವುದರೊಂದಿಗೆ ತಂಡದ ಹೊಸ ಲಾಂಛನ(ಲೋಗೊ)ವನ್ನು ಬಿಡುಗಡೆ ಮಾಡಿದ್ದಾರೆ.
ಓದಿ : ‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೆಪೆ ಹಚ್ಚಿದ ಶೃತಿ ಹಾಸನ್
ತಂಡದ ಹೊಸ ಹೆಸರು ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಲಿದೆ ಮತ್ತು ಅವರಿಗೆ ಹತ್ತಿರವಾಗಲಿದೆ ಎಂದು ಪ್ರಾಂಚೈಸಿಗಳು ಹೇಳಿದ್ದಾರೆ. ಅಭಿಮಾನಿಗಳ ಪ್ರೋತ್ಸಾಹದಿಂದ ಐ ಪಿ ಎಲ್ ನಲ್ಲಿ ಸಮರ್ಥವಾಗಿ ವಿರೋಧಿ ತಂಡವನ್ನು ಎದುರಿಸಲು ಸಾಧ್ಯವಾಗಿದೆ. ಇನ್ನು ಮುಂದೆಯೂ ಕೂಡ ಅಭಿಮಾನಿಗಳ ಪ್ರೋತ್ಸಾಹ ನಮ್ಮೊಂದಿಗಿರಲಿದೆ ಎಂದು ಫ್ರಾಂಚೈಸಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳನ್ನು ಎದುರಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಕೇವಲ ಆರು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಬಾಲಿವುಡ್ ಖ್ಯಾತ ನಟಿ ಪ್ರೀತಿ ಜಿಂಟಾ, ಮೊಹಿತ್ ಬುರ್ಮನ್ ಹಾಗೂ ನೆಸ್ ವಾಡಿಯಾ ಅವರೊಂದಿಗೆ ಪ್ರಾಂಚೈಸಿಯನ್ನು ಹೊಂದಿದ್ದಾರೆ.
“ಮರುನಾಮಕರಣದಿಂದಾಗಿ ತಂಡಕ್ಕೆ ಮತ್ತಷ್ಟು ಬಲ ಬರಲಿದೆ. ತಂಡದ ಹೊಸ ಲಾಂಛನದಲ್ಲಿ ಸಿಂಹ ಧೈರ್ಯದ ಸಂಕೇತವಾಗಿ ಇದೆ” ಎಂದು ಪ್ರಾಂಚೈಸಿಗಳು ಹೇಳಿದ್ದಾರೆ.
ಇನ್ನು, “ಪಂಜಾಬ್ ಕಿಂಗ್ಸ್” ವಿಕಸನಗೊಂಡ ಬ್ರ್ಯಾಂಡ್ ನೇಮ್ ಆಗಿದೆ. ಕೋರ್ ಬ್ರ್ಯಾಂಡ್ ನ್ನು ಸೃಷ್ಟಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾವು ಅರ್ಥೈಸಿಕೊಂಡಿದ್ದೇವೆ. ಬ್ರ್ಯಾಂಡ್ ಐಡೆಂಟಿಟಿ ಬದಲಾಗುತ್ತಿರುವುದು ಬ್ರ್ಯಾಂಡ್ ಬದಲಾಗುತ್ತಿದೆ ಎಂದರ್ಥವಲ್ಲ. ತಂಡದ ಹೊಸ ಲಾಂಛನವು ಬ್ರ್ಯಾಂಡ್ ನ ಚೈತನ್ಯ ಮತ್ತು ಜೀವಂತಿಕೆಯನ್ನು ಹೆಚ್ಚಿಸುತ್ತದೆ. ಈ ಹೊಸತನದಿಂದಾಗಿ ಉಳಿದ ಎಲ್ಲಾ ತಂಡಗಳ ನಡುವೆ ನಾವು ಭಿನ್ನವಾಗಿ, ವಿಶೇಷವಾಗಿ ಕಾಣಿಸಲಿದ್ದೇವೆ ಎಂದು ಪಂಜಾಬ್ ಕಿಂಗ್ಸ್ ತಂಡದ ಸಿ ಇ ಒ ಸತೀಶ್ ಮೆನನ್ ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಉತ್ತರ ಪ್ರದೇಶ : ಶಾಲಾ ತರಗತಿಗಳು ಆರಂಭವಾದರೂ ಶೇ.10ರಷ್ಟು ಮಾತ್ರ ಹಾಜರಾತಿ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Brahmavar: ಆನ್‌ಲೈನ್ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ಮೋಸ
Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ
Donald Trump 2.0; 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಡಳಿತ ಆರಂಭ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.