ಐಪಿಎಲ್ 2021: ಕಣಕ್ಕಿಳಿಯಲಿವೆ 9 ತಂಡಗಳು
Team Udayavani, Nov 13, 2020, 5:45 AM IST
ಹೊಸದಿಲ್ಲಿ: ಹದಿಮೂರನೇ ಐಪಿಎಲ್ ಮುಗಿದು ಎರಡೇ ದಿನಗಳಲ್ಲಿ 2021ರ ಐಪಿಎಲ್‌ಗೆ ಸ್ಕೆಚ್ ಹಾಕಲು ಬಿಸಿಸಿಐ ಸಜ್ಜಾಗಿದೆ. ಇದು ಕೆಲವೇ ತಿಂಗಳಲ್ಲಿ ಆರಂಭವಾಗಲಿರುವುದರಿಂದ ತರಾತುರಿ ಸಹಜ. ಇದಕ್ಕೂ ಮಿಗಿಲಾಗಿ, 14ನೇ ಐಪಿಎಲ್‌ನಲ್ಲಿ ಎಂಟರ ಬದಲು 9 ತಂಡ ಗಳನ್ನು ಕಣಕ್ಕಿಳಿಸುವುದು ಬಿಸಿಸಿಐ ಯೋಜನೆ. ಹೀಗಾಗಿ ತ್ವರಿತ ವಾಗಿ ಕಾರ್ಯ ಪ್ರವೃತ್ತವಾಗುವುದು ಅನಿವಾರ್ಯವಾಗಿದೆ.
ಮೊದಲಿನ ಯೋಜನೆಯಂತೆ, 2021ರ ಐಪಿಎಲ್‌ನಲ್ಲಿ 10 ತಂಡಗಳನ್ನು ಆಡಿಸಲು ಬಿಸಿಸಿಐ ಯೋಜಿಸಿತ್ತು. ಆದರೆ ಇದನ್ನೀಗ 9ಕ್ಕೆ ಸೀಮಿತಗೊಳಿಸಲಾಗಿದೆ. 2022ರಲ್ಲಿ ತಂಡಗಳ ಸಂಖ್ಯೆಯನ್ನು ಹತ್ತಕ್ಕೆ ಏರಿಸುವ ಬಗ್ಗೆ ಯೋಚಿಸಲಾಗುವುದು. ಇನ್ನು ಕೆಲವೇ ದಿನಗಳಲ್ಲಿ, ಅಂದರೆ ದೀಪಾವಳಿ ಬಳಿಕ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ 9ನೇ ತಂಡಕ್ಕಾಗಿ ಬಿಡ್ ಕರೆಯುವ ಸಾಧ್ಯತೆ ಇದೆ.
ಐಪಿಎಲ್ ಫ್ರಾಂಚೈಸಿ ಆಸಕ್ತರು
9ನೇ ಐಪಿಎಲ್ ತಂಡಕ್ಕಾಗಿ ದೇಶದ ಅನೇಕ ಉದ್ದಿಮೆದಾರರು, ಬೃಹತ್ ಕಂಪೆನಿ ಗಳು ಆಸಕ್ತಿ ವಹಿಸಿವೆ. ಸಂಜೀವ್ ಗೋಯೆಂಕಾ ಗ್ರೂಪ್, ಟಾಟಾಸ್ ಮತ್ತು ಅದಾನಿ ಗ್ರೂಪ್ ಹೊಸ ಫ್ರಾಂಚೈಸಿಯ ಮಾಲಕತ್ವ ವಹಿಸಲು ಮುಂದೆ ಬಂದಿರುವ ಸುದ್ದಿ ಇದೆ. ಮಾಧ್ಯಮ ದೈತ್ಯ ರೋನಿ ಸೂðವಾಲಾ, ಬ್ಯಾಂಕರ್ ಉದಯ್ ಕೋಟಕ್ ಕೂಡ ಈ ಸಾಲಿನಲ್ಲಿವೆ ಎನ್ನಲಾಗಿದೆ.
ಎಲ್ಲವೂ ಯೋಜನೆಯಂತೆ ಸಾಗಿದರೆ 2021ರ ಐಪಿಎಲ್ ಭಾರತದಲ್ಲಿ, ಮಾರ್ಚ್ ಕೊನೆಯ ವಾರ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿಕ್ಕಿದೆ. 9ನೇ ತಂಡ ಆಡಲಿಳಿದರೆ ಆಗ ಪಂದ್ಯಗಳ ಸಂಖ್ಯೆ 60ರಿಂದ 76ಕ್ಕೆ ಏರುತ್ತದೆ. ಹೆಚ್ಚುವರಿ ಎರಡು ತಂಡಗಳ ಪ್ರವೇಶವಾದರೆ ಈ ಸಂಖ್ಯೆ 90ಕ್ಕೆ ನೆಗೆಯಲಿದೆ. “ಐಪಿಎಲ್ ವಿಂಡೋ’ ತೀರಾ ಚಿಕ್ಕದಾಗಿರುವುದರಿಂದ ಈ ಅವಧಿಯಲ್ಲಿ 90 ಪಂದ್ಯಗಳನ್ನು ಆಡಿಸಲು ಸಾಧ್ಯವಾಗದು. ಇದಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು, 2022ರಲ್ಲಿ ಅಥವಾ ಅನಂತರದ ವರ್ಷಗಳಲ್ಲಿ 10 ತಂಡಗಳಿಗೆ ಅವಕಾಶ ನೀಡುವುದು ಬಿಸಿಸಿಐ ಯೋಜನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.